Rishabh Pant: ರಿಷಭ್ ಪಂತ್ ಅಪಘಾತದ ಸುದ್ದಿ ಕೇಳಿ ಕಣ್ಣೀರು ಹಾಕಿದ್ದೆ ಎಂದ ರವಿ ಶಾಸ್ತ್ರಿ !

Rishabh Pant Ravi Shastri  : ನ್ಯೂಯಾರ್ಕ್: ಬದ್ಧವೈರಿ ಪಾಕಿಸ್ತಾನ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ (ICC t20 World Cup 2024) ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿ ವೇಗಿ ಜಸ್ಪ್ರೀತ್ ಬುಮ್ರಾ. ಆದರೆ ಬ್ಯಾಟಿಂಗ್’ನಲ್ಲಿ ಮಿಂಚಿ ತಂಡಕ್ಕೆ ಆಸರೆಯಾದವರು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್.

Rishabh Pant Ravi Shastri  : ನ್ಯೂಯಾರ್ಕ್: ಬದ್ಧವೈರಿ ಪಾಕಿಸ್ತಾನ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ (ICC t20 World Cup 2024) ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) . ಆದರೆ ಬ್ಯಾಟಿಂಗ್’ನಲ್ಲಿ ಮಿಂಚಿ ತಂಡಕ್ಕೆ ಆಸರೆಯಾದವರು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) . ನ್ಯೂ ಯಾರ್ಕ್’ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ (India Vs Pakistan) ಟಾಸ್ ಸೋತು ಬ್ಯಾಟಿಂಗ್’ಗೆ ಇಳಿದಿತ್ತು.

Rishabh Pant ರಿಷಬ್‌ ಪಂತ್‌
Image credit to Original Source

ಆದರೆ 19 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದವರು 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 31 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 42 ರನ್ ಸಿಡಿಸಿದ ವಿಕೆಟ್ ಕೀಪರ್ ರಿಷಭ್ ಪಂತ್. ಬ್ಯಾಟಿಂಗ್”ನಲ್ಲಷ್ಟೇ ಅಲ್ಲದೆ, ವಿಕೆಟ್ ಕೀಪಿಂಗ್’ನಲ್ಲೂ ಮಿಂಚಿದ ರಿಷಭ್ ಪಂತ್, ಟೀಮ್ ಇಂಡಿಯಾದೊಳಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದರು.

ಈ ಪ್ರಶಸ್ತಿ ನೀಡಲು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್’ಗೆ ಬಂದಿದ್ದ ಭಾರತ ತಂಡದ ಮಾಜಿ ಕೋಚ್, ಹಾಲಿ ಕಾಮೆಂಟೇಟರ್ ರವಿ ಶಾಸ್ತ್ರಿ, ವಿನ್ನಿಂಗ್ ಮೆಡಲ್ ಅನ್ನು ರಿಷಭ್ ಪಂತ್ ಕೊರಳಿದೆ ಹಾಕಿ ಶಹಬ್ಬಾಸ್ ಹೇಳಿದರು. ಅಷ್ಟೇ ಅಲ್ಲ, ರಿಷಭ್ ಪಂತ್ ಅಪಘಾತದ ಸಮಯವನ್ನು ನೆನಪಿಸಿಕೊಂಡರು.

https://x.com/flamboypant/status/1800012259269476517

“ರಿಷಬ್ ಪಂತ್’ಗೆ ಅಪಘಾತವಾದ ಸುದ್ದಿ ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ಆತನನ್ನು ಆಸ್ಪತ್ರೆಯಲ್ಲಿ ನೋಡಿದಾಗ ಪರಿಸ್ಥಿತಿ ಮತ್ತಷ್ಟು ಶೋಚನೀಯ ವಾಗಿ ಇರುವುದು ಕಂಡು ಬಂತು. ಅಲ್ಲಿಂದ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿ, ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಪಂದ್ಯದಲ್ಲಿ ಈ ರೀತಿಯ ಪ್ರದರ್ಶನ ತೋರಿರುವುದು ನಿಜಕ್ಕೂ ಅದ್ಭುತ. ವೆಲ್ಡನ್ ರಿಷಭ್” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

Read More :India Beat Pakistan: ಬುಮ್ರಾ ಬೆಂಕಿ ಬೌಲಿಂಗ್ , ಪಾಕಿಸ್ತಾನ ವಿರುದ್ಧ ಭಾರತಕ್ಕ ರೋಚಕ ಜಯ !

ಟಿ20 ವಿಶ್ವಕಪ್ ಟೂರ್ನಿಯ ಮೂಲಕ ರಿಷಭ್ ಪಂತ್ ಒಂದೂವರೆ ವರ್ಷಗಳ ನಂತ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. 26 ವರ್ಷದ ರಿಷಭ್ ಪಂತ್ 2022ರ ಡಿಸೆಂಬರ್ 30ರಂದೂ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು, ಡಿವೈಡರ್’ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.

ರಿಷಬ್‌ ಪಂತ್‌ ಹಾಗೂ ರವಿಶಾಸ್ತ್ರಿ ICC t20 World Cup 2024 Ravi Shastri and Rishabh pant
Image credit to Original Source

ಆ ಅಫಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ನಂತರ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆಗೊಳಲಾಗಿದ್ದ ರಿಷಭ್, ಕಳೆದ ಐಪಿಎಲ್ ಟೂರ್ನಿಯ ಮೂಲಕ ವೃತ್ತಿಪರ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ್ದರು. ಐಪಿಎಲ್-2024 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದ ಪಂತ್, 13 ಪಂದ್ಯಗಳಿಂದ 155.40 ಸ್ಟ್ರೈಕ್’ರೇಟ್’ನಲ್ಲಿ 3 ಅರ್ಧಶತಕಗಳ ಸಹಿತ 446 ರನ್ ಗಳಿಸಿದ್ದರು.

Read More : Afghanistan Beat New Zealand: ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಬಿಗ್ ಶಾಕ್, ಕಿವೀಸ್ ಕಿವಿ ಹಿಂಡಿದ ಆಫ್ಘನ್ ಪಡೆ !

ಭಾನುವಾರ ನ್ಯೂ ಯಾರ್ಕ್”ನಲ್ಲಿ ನಡೆದ ಲೋ ಸ್ಕೋರಿಂಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭಾರೀ ಬ್ಯಾಟಿಂಗ್ ವೈಫಲ್ಯ ಎದುರಿಸಿ 19 ಓವರ್’ಗಳಲ್ಲಿ 119 ರನ್’ಗಳಿಗೆ ಆಲೌಟಾಯಿತು. ಪಾಕಿಸ್ತಾನ ತಂಡದ ಚೇಸಿಂಗ್ ವೇಳೆ ಮಾರಕ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 4 ಓವರ್’ಗಳಲ್ಲಿ ಕೇವಲ 14 ರನ್ನಿತ್ತು 3 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಬುಮ್ರಾ ದಾಳಿಗೆ ನಲುಗಿದ ಪಾಕಿಸ್ತಾನ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಲ್ಲಿ ಸತತ 2ನೇ ಸೋಲು ಅನುಭವಿಸಿತು.

Read More : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!

Rishabh Pant Ravi Shastri said that he was moved to tears after hearing the news of Rishabh Pant accident!

Comments are closed.