Nosthush Kenjig : ಕನ್ನಡಿಗರ ಹೆಮ್ಮೆಯ ‘ನಂದಿನಿ’ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup 2024) ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ಮಾಡುತ್ತಿದೆ. ಇದೀಗ ನಂದಿನಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಟಿ20 ವಿಶ್ವಕಪ್’ನಲ್ಲಿ ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರಿನ ಕ್ರಿಕೆಟಿಗ ನೋಶ್’ಕುಶ್ ಕೆಂಜಿಗೆ (Nosthush Kenjig) ಅವರಿಗೆ ಟಿ20 ವಿಶ್ವಕಪ್’ನಲ್ಲಿ ನಂದಿನಿ ಪ್ರಾಯೋಜಕತ್ವ ವಹಿಸಲಿದೆ.

ಎಡಗೈ ಸ್ಪಿನ್ನರ್ ನೋಶ್’ತುಷ್ ಕೆಂಜಿಗೆ ಕ್ರಿಕೆಟ್ ಆಡುವ ಎಲ್ಲಾ ಹುಡುಗರಂತೆ ಭಾರತ ತಂಡದ ಪರ ಆಡುವ ಕನಸು ಕಂಡಿದ್ದ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಫಸ್ಟ್ ಡಿವಿಜನ್ ಪಂದ್ಯಗಳಲ್ಲಿ ವಿವಿಧ ತಂಡಗಳ ಪರ ಆಡಿದ್ದ ನೋಶ್’ತುಷ್’ಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರಲಿಲ್ಲ.
ಹೀಗಾಗಿ ಕ್ರಿಕೆಟ್’ಗೆ ಗುಡ್ ಬೈ ಹೇಳಿ ಉದ್ಯೋಗಕ್ಕೆಂದು ತಾನು ಹುಟ್ಟಿದ ಅಮೆರಿಕಕ್ಕೆ ಹೋದ ನೋಶ್’ತುಷ್ ಅಲ್ಲಿ ಉದ್ಯೋಗ ಮಾಡುತ್ತಲೇ ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದ. ಹೀಗೇ ಆಡುತ್ತಿದ್ದಾಗ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರತಿಭಾನ್ವೇಷಕರ ಕಣ್ಣಿಗೆ ಬಿದ್ದಿದ್ದಾನೆ. ಮೂರು ವರ್ಷ ಯುಎಸ್ಎನಲ್ಲಿ ನೆಲೆಸಿದ ನಂತರ ಅಮೆರಿಕ ತಂಡದ ಪರ ಆಡುವ ಅವಕಾಶ ಪಡೆದಿದ್ದಾನೆ.
ಭಾರತ ತಂಡದ ಪರ ಆಡುವ ಕನಸು ಕಂಡಿದ್ದ ಈ ಯುವಕ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧವೇ ಆಡಲಿದ್ದಾನೆ. 33 ವರ್ಷದ ನೋಶ್’ತುಷ್ ಕೆಂಜಿಗೆ ಮೇಜರ್ ಲೀಗ್ ಕ್ರಿಕೆಟ್ ಹಾಗೂ ಐಎಲ್’ಟಿ20 ಟೂರ್ನಿಗಳಲ್ಲಿ ಎಂಐ ನ್ಯೂ ಯಾರ್ಕ್ ಮತ್ತು ಎಂಐ ಎಮಿರೇಟ್ಸ್ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

ನೋಶ್’ತುಷ್ ಕೆಂಜಿಗೆ ತಮ್ಮ ಬಾಲ್ಯದಲ್ಲಿ ಬೆಂಗಳೂರಿನ ಹಲಸೂರಿನಲ್ಲಿರುವ ಕರ್ನಾಟಕ ಇನ್ಸ್’ಟಿಟ್ಯೂಟ್ ಆಫ್ ಕ್ರಿಕೆಟ್ (KIOC) ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದರು. ಟಿ20 ವಿಶ್ವಕಪ್’ಗೆ ಸಜ್ಜಾಗುತ್ತಿರುವ ನೋಶ್’ತುಷ್ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಕೆಐಒಸಿಯಲ್ಲಿ ಅಭ್ಯಾಸ ನಡೆಸಿದ್ದಾರೆ ಎಂದು ಅಕಾಡೆಮಿಯ ನಿರ್ದೇಶಕ ಇರ್ಫಾನ್ ಸೇಠ್ ಹೇಳಿದ್ದಾರೆ.
ಇದನ್ನೂ ಓದಿ : Virat Kohli 27,000 Runs: 27 ಸಾವಿರ ರನ್’ಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್’ನಲ್ಲೇ ದಾಖಲೆ ಬರೆಯಲಿದ್ದಾನೆ ಕಿಂಗ್ !
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡ ಭಾರತ, ಪಾಕಿಸ್ತಾನ, ಕೆನಡಾ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ. ಜೂನ್ 2ರಂದು ಡಲ್ಲಾಸ್’ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ತಂಡ, ಕೆನಡಾ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಜೂನ್ 12ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕ ತಂಡ, ಭಾರತ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : ICC T20 World Cup: ಉಗಾಂಡ ಪರ ಆಡಲಿದ್ದಾನೆ ಶ್ರೇಯಸ್ ಅಯ್ಯರ್, ಶಿವಂ ದುಬೆ ಜೊತೆ ಆಡಿದ್ದ ಆಟಗಾರ!
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ICC t20 World Cup 2024 Nandini Spencer Nosthush Kenjige