South Africa in Finals: ಆಫ್ಘನ್ ಔಟ್, ಮೊದಲ ಬಾರಿ ದಕ್ಷಿಣ ಆಫ್ರಿಕಾ ಫೈನಲ್’ಗೆ 

ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ (ICC T20 World Cup) ಇತಿಹಾಸದಲ್ಲಿ ಮೊದಲ ಬಾರಿ ಫೈನಲ್ ತಲುಪಿದೆ. ಶನಿವಾರ ಬಾರ್ಬೆಡೋಸ್’ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa Cricket Team) ತಂಡ ಭಾರತ ಅಥವಾ ಇಂಗ್ಲೆಂಡ್ ತಂಡ (England Cricket team) ವನ್ನು ಎದುರಿಸಲಿದೆ.

ಟ್ರಿನಿಡಾಡ್: ಏಕಪಕ್ಷೀಯ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್’ಗಳಿಂದ ಬಗ್ಗು ಬಡಿದ ಬಲಾಢ್ಯ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ (ICC T20 World Cup) ಇತಿಹಾಸದಲ್ಲಿ ಮೊದಲ ಬಾರಿ ಫೈನಲ್ ತಲುಪಿದೆ. ಶನಿವಾರ ಬಾರ್ಬೆಡೋಸ್’ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa Cricket Team) ತಂಡ ಭಾರತ ಅಥವಾ ಇಂಗ್ಲೆಂಡ್ ತಂಡ (England Cricket team) ವನ್ನು ಎದುರಿಸಲಿದೆ.

ICC T20 World cup 2024 south africa enter final, Afghanistan lost semi final
Image Credit : T20 World cup / ICC

ಸೂಪರ್-8ನಲ್ಲಿ ಆಸ್ಟ್ರೇಲಿಯಾಗೆ ಶಾಕ್ ನೀಡಿ ಸೆಮಿಫೈನಲ್ ಪ್ರವೇಶಿಸಿದ್ದ ರಶೀದ್ ಖಾನ್ ಸಾರಥ್ಯದ ಅಫ್ಘಾನಿಸ್ತಾನ ತಂಡ ನಾಕೌಟ್ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ಪಡೆ ಹರಿಣಗಳ ಮಾರಕ ದಾಳಿಗೆ ತತ್ತರಿಸಿ 11.5 ಓವರ್’ಗಳಲ್ಲಿ ಕೇವಲ 56 ರನ್’ಗಳಿಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾ ಪರ ಎಡಗೈ ವೇಗಿ ಮಾರ್ಕೋ ಯಾನ್ಸೆನ್ 16 ರನ್ನಿಗೆ 3 ವಿಕೆಟ್ ಹಾಗೂ ಚೈನಾಮನ್ ಸ್ಪಿನ್ನರ್ ತಬ್ರೈಜ್ ಶಮ್ಸಿ 6 ರನ್ನಿಗೆ 3 ವಿಕೆಟ್ ಉರುಳಿಸಿದರು.

https://x.com/proteasmencsa/status/1806157749165707616?s=46

ನಂತರ 57 ರನ್’ಗಳ ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 8.5 ಓವರ್’ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಓಪನರ್ ರೀಜಾ ಹೆಂಡ್ರಿಕ್ ಅಜೇಯ 29 ರನ್ ಗಳಿಸಿದರೆ, ನಾಯಕ ಏಡನ್ ಮಾರ್ಕ್ರಮ್ ಅಜೇಯ 23 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭ ಜಯ ತಂದು ಕೊಟ್ಟರು.

ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ

ICC T20 World cup 2024 south africa enter final, Afghanistan lost semi final
Image Credit : T20 World cup / ICC

2014ರಲ್ಲಿ ಹರಿಣ ಪಡೆ ಅಂಡರ್-19 ವಿಶ್ವಕಪ್ ಗೆದ್ದಿದ್ದ ದಕ್ಷಿಣ ಆಫ್ರಿಕಾ, ಹಿರಿಯರ ವಿಭಾಗದಲ್ಲಿ ಇದುವರೆಗೆ ಒಮ್ಮೆಯೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ಏಡನ್ ಮಾರ್ಕ್ರಮ್ ನಾಯಕತ್ವದಲ್ಲಿ ಒಂದೂ ಪಂದ್ಯ ಸೋಲದೆ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಕೌಂಟ್‌ಡೌನ್: ಭಾರತಕ್ಕೆ ಕಾಡುತ್ತಿದೆ ನಾಕೌಟ್ ಫೋಬಿಯಾ

ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಭಾರತ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಇಂದು ರಾತ್ರಿ 8 ಗಂಟೆಗೆ ಗಯಾನದಲ್ಲಿ ಆರಂಭವಾಗಲಿದೆ. ಈ ಪಂದ್ಯ ಮಳೆಯಿಂದ ರದ್ದಾದರೆ ಸೂಪರ್-8 ಹಂತದಲ್ಲಿ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಮಾನದಂಡದ ಆಧಾರದಲ್ಲಿ ಭಾರತ ಫೈನಲ್ ಪ್ರವೇಶಿಸಲಿದೆ.

ಇದನ್ನೂ ಓದಿ : Louis Kimber : 6,6,6,6,6,4,4,4: ಒಂದೇ ಓವರ್’ನಲ್ಲಿ 43 ರನ್ ಚಚ್ಚಿದ ಲೂಯಿಸ್ ಕಿಂಬರ್

ICC T20 World cup 2024 south africa enter final, Afghanistan lost semi final

Comments are closed.