ICC T20 World cup 2024 ಬಾರ್ಬೆಡೋಸ್: ಚೊಚ್ಚಲ ಐಸಿಸಿ ವಿಶ್ವಕಪ್ ಟ್ರೋಫಿ ಗೆಲ್ಲುವ ದಕ್ಷಿಣ ಆಫ್ರಿಕಾದ ತಂಡದ ಕನಸು ನನಸಾಗಲು ಇನ್ನು ಒಂದೇ ಹೆಜ್ಜೆ ಬಾಕಿ. ಏಡನ್ ಮಾರ್ಕ್ರಮ್ (Aiden Markram) ನಾಯಕತ್ವದ ಹರಿಣ ಪಡೆ ವೆಸ್ಟ್ ಇಂಡೀಸ್’ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಶನಿವಾರ ಬಾರ್ಬೆಡೋಸ್’ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡವನ್ನು ಎದುರಿಸಲಿದೆ.

ದಕ್ಷಿಣ ಆಫ್ರಿಕಾ ತಂಡ ಇದುವರೆಗೆ ಒಮ್ಮೆಯೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್, ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಹರಿಣ ಪಡೆ ಸತತವಾಗಿ ಮುಗ್ಗರಿಸುತ್ತಾ ಬಂದಿದೆ. ಆದರೆ ಈ ಬಾರಿ ಏಡನ್ ಮಾರ್ಕ್ರಮ್ (Aiden Markram) ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮಾರ್ಕ್ರಮ್ ಲಕ್ಕಿ ಕ್ಯಾಪ್ಟನ್ ಎಂದೇ ಫೇಮಸ್. 2014ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಮಾರ್ಕ್ರಮ್ ಸಾರಥ್ಯದಲ್ಲೇ ಚಾಂಪಿಯನ್ ಪಟ್ಟಕ್ಕೇರಿತ್ತು.ಇನ್ನು ದಕ್ಷಿಣ ಆಫ್ರಿಕಾದ ಟಿ20 ಲೀಗ್’ನಲ್ಲಿ ಸತತ ಎರಡು ಬಾರಿ ಮಾರ್ಕ್ರಮ್ ನಾಯಕತ್ವದ ತಂಡವೇ ಚಾಂಪಿಯನ್ ಆಗಿದೆ.
ಇದನ್ನೂ ಓದಿ : India Vs South Africa: ಶೆಫಾಲಿ ದ್ವಿಶತಕ, ಸ್ಮೃತಿ ಶತಕದಬ್ಬರಕ್ಕೆ ಚೆನ್ನೈನಲ್ಲಿ ಕೊಚ್ಚಿ ಹೋದ ದಕ್ಷಿಣ ಆಫ್ರಿಕಾ
2023ರ SA20 ಟೂರ್ನಿಯಲ್ಲಿ ಮಾರ್ಕ್ರಮ್ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ 29 ವರ್ಷದ ಏಡನ್ ಮಾರ್ಕ್ರಮ್, ಈ ವರ್ಷವೂ ಸನ್ ರೈಸರ್ಸ್ ತಂಡಕ್ಕೆ ಪ್ರಶಸ್ತಿ ಗೆದ್ದು ಕೊಟ್ಟಿದ್ದರು. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಂತೂ ಮಾರ್ಕ್ರನ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದೇ ಒಂದು ಪಂದ್ಯವನ್ನೂ ಸೋಲದೆ ಫೈನಲ್ ತಲುಪಿದೆ.
ಲೀಗ್ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಹರಿಣ ಪಡೆ, ಗ್ರೂಪ್-2ರ ಸೂಪರ್-8 ಹಂತದಲ್ಲೂ ಗೆಲುವಿನ ಓಟ ಮುಂದುವರಿಸಿತ್ತು. ಗುರುವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್’ಗಳಿಂದ ಬಗ್ಗು ಬಡಿಸಿರುವ ಮಾರ್ಕ್ರಮ್ ಪಡೆ ಮೊದಲ ಬಾರಿ ಟಿ20 ವಿಶ್ವಕಪ್’ನಲ್ಲಿ ಫೈನಲ್ ತಲುಪಿದೆ.
ಇದನ್ನೂ ಓದಿ : India Vs South Africa World Cup Final: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಇಂಚಿಂಚೂ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಐಸಿಸಿ ಟಿ20 ವಿಶ್ವಕಪ್-2025: ದಕ್ಷಿಣ ಆಫ್ರಿಕಾ ತಂಡದ ಫೈನಲ್ ಹಾದಿ
ಲೀಗ್ ಹಂತ
ಮೊದಲ ಪಂದ್ಯ: ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ
2ನೇ ಪಂದ್ಯ: ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ ಜಯ
3ನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ 4 ರನ್ ಜಯ
4ನೇ ಪಂದ್ಯ: ನೇಪಾಳ ವಿರುದ್ಧ 2 ರನ್ ಜಯ
ಇದನ್ನೂ ಓದಿ : 1983ರ ವಿಶ್ವವಿಕ್ರಮಕ್ಕೆ 42 ವರ್ಷ, ಎರಡೇ ದಿನಗಳಲ್ಲಿ ಮತ್ತೆ ವಿಶ್ವಕಪ್ ಗೆಲ್ಲುತ್ತಾ ಭಾರತ ?
ಸೂಪರ್-8 ಹಂತ
ಮೊದಲ ಪಂದ್ಯ: ಅಮೆರಿಕ ವಿರುದ್ಧ 18 ರನ್ ಜಯ
2ನೇ ಪಂದ್ಯ: ಇಂಗ್ಲೆಂಡ್ ವಿರುದ್ಧ 7 ರನ್ ಜಯ
3ನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್ ಜಯ
ಸೆಮಿಫೈನಲ್
ಅಫ್ಘಾನಿಸ್ತಾನ ವಿರುದ್ಧ 9 ವಿಕೆಟ್ ಜಯ
ICC T20 World cup 2024 Will captain Aiden Markram win South Africa’s maiden World Cup ?