India Vs South Africa Final Live : ವಿರಾಟ್ ಕೊಹ್ಲಿ (Virat Kohli ) ಹಾಗೂ ಅಕ್ಷರ್ ಪಟೇಲ್ (Axar Patel) ಅವರ ಭರ್ಜರಿ ಬ್ಯಾಟಿಂಗ್, ಜಸ್ಪ್ರಿತ್ ಬೂಮ್ರಾ (Jasprit Bumrah), ಹಾರ್ದಿಕ್ ಪಾಂಡ್ಯ (Hardik Pandy) ಹಾಗೂ ಅರ್ಶದೀಪ್ ಸಿಂಗ್ (Arshadeep Singh) ಅವರ ಮಾರಕ ದಾಳಿಯಿಂದಾಗಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup 2024) ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ (South Africa Cricket Team) ತಂಡವನ್ನು 7 ರನ್ ಗಳಿಸಿ ಮಣಿಸಿ ಎರಡನೇ ಬಾರಿಗೆ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 17 ವರ್ಷಗಳ ನಂತರ ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ 4 ವಿಶ್ವಕಪ್‌ಗಳನ್ನು ಜಯಿಸಿದ ಕೀರ್ತಿಗೆ ಪಾತ್ರವಾಗಿದೆ.
ಬಾರ್ಬಡೋಸ್‌ನ ಕಿಂಗ್‌ಸ್ಟೋನ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕ್ರಿಕೆಟ್ ತಂಡ (Indian Cricket Team) ಕ್ಕೆ ದಕ್ಷಿಣ ಆಫ್ರಿಕಾದ ಬೌಲರ್ ಕೇಶವ್ ಮಹಾರಾಜ ಆಘಾತ ನೀಡಿದ್ರು. 5 ಎಸೆತಗಳಲ್ಲಿ 9 ರನ್ ಗಳಿಸಿ ಆಡುತ್ತಿದ್ದ ರೋಹಿತ್ ಶರ್ಮ ಅವರನ್ನು ಔಟ್ ಮಾಡಿದ್ರು, ಇದರ ಬೆನ್ನಲ್ಲೇ ಕ್ರೀಸ್‌ಗೆ ಬಂದ ರಿಷಬ್ ಪಂತ್ 2 ಎಸೆತಗಳನ್ನು ಎದುರಿಸಿದ್ದರೂ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಸೂರ್ಯ ಕುಮಾರ್ ಯಾದವ್ ರಬಾಡ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮನ ಮಾಡಿ ವಿಕೆಟ್ ಒಪ್ಪಿಸಿದ್ದರು. ಕೇವಲ 34 ರನ್‌ಗಳಿಗೆ 3೩ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ ನೆರವಾದ್ರು.
ಅಕ್ಷರ್ ಪಟೇಲ್ 31 ಎಸೆತಗಳಲ್ಲಿ ಭರ್ಜರಿ 4 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 47 ರನ್ ಬಾರಿಸಿ ರನೌಟ್ ಆದ್ರೆ, ಇನ್ನೊಂದೆಡೆಯಲ್ಲಿ ವಿರಾಟ್ ಕೊಹ್ಲಿ ಸೊಗಸಾದ ಇನ್ನಿಂಗ್ಸ್ ಕಟ್ಟಿದ್ರು. ವಿಶ್ವಕಪ್‌ನ ಲೀಗ್ ಹಾಗೂ ಸೂಪರ್ 8 ಹಂತದ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ವಿಶ್ವಕಪ್ ಫೈನಲ್‌ನಲ್ಲಿ ಭಾರತವೇ ಮೆಚ್ಚುವ ಇನ್ನಿಂಗ್ಸ್ ಕಟ್ಟಿದ್ದರು.
ವಿರಾಟ್ ಕೊಹ್ಲಿ 59 ಎಸೆತಗಳನ್ನು ಎದಿರಿಸಿ 2 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನೊಂದಿಗೆ 76 ರನ್ ರನ್ ಸಿಡಿಸಿದ್ರು. ಆದರೆ ಉಳಿದ ಯಾವುದೇ ಆಟಗಾರರು ಕೂಡ ಎರಡಂಕಿ ರನ್ ದಾಟಲಿಲ್ಲ. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು.

ಭಾರತ ಕ್ರಿಕೆಟ್ ತಂಡ ನೀಡಿದ್ದ 177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಟೀಂ ಇಂಡಿಯಾದ ಬೌಲರ್ ಜಸ್ಪ್ರಿತ್ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಗೆ ಕೇವಲ 4 ರನ್‌ಗಳಿಗೆ ಫೆವಿಲಿಯನ್ ಹಾದಿ ತೋರಿಸಿದ್ರು. ನಂತರ ಒಂದನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್‌ಗೆ ಇಳಿದ ನಾಯಕ ಐಡೆನ್ ಮಾಕರಮ್ ಆಟ ಕೂಡ ಹೆಚ್ಚು ಹೊತ್ತು ನಡೆಯಲೇ ಇಲ್ಲ.
ಇದನ್ನೂ ಓದಿ : India Vs South Africa: ಶೆಫಾಲಿ ದ್ವಿಶತಕ, ಸ್ಮೃತಿ ಶತಕದಬ್ಬರಕ್ಕೆ ಚೆನ್ನೈನಲ್ಲಿ ಕೊಚ್ಚಿ ಹೋದ ದಕ್ಷಿಣ ಆಫ್ರಿಕಾ
5 ಎಸೆತಗಳಲ್ಲಿ 4 ರನ್ ಗಳಿಸಿ ಆಡುತ್ತಿದ್ದ ಮಾಕರಮ್ ಅವರನ್ನು ಅರ್ಶದೀಪ್ ಸಿಂಗ್ ಬಲಿ ಪಡೆದ್ರು. ನಂತರ ಕ್ವಿಂಟಾನ್ ಡಿಕಾಕ್ ಹಾಗೂ ಸ್ತುಬ್ ದಕ್ಷಿಣ ಆಫ್ರಿಕಾ ತಂಡಕ್ಕೆ ನೆರವಾದ್ರು. ಈ ಜೋಡಿ ಮೂರನೇ ವಿಕೆಟ್‌ಗೆ 58 ರನ್ ಜೊತೆಯಾಟ ಆಡಿತ್ತು. ಆದರೆ 31೩೧ ರನ್ ಗಳಿಸಿ ಆಡುತ್ತಿದ್ದ ಸ್ತುಬ್ ಅವರನ್ನು ಅಕ್ಷರ್ ಪಟೇಲ್ ಬೌಲ್ಡ್ ಮಾಡಿದ್ರು.

ಸಾಲು ಸಾಲು ವಿಕೆಟ್ ಉರುಳುತ್ತಿದ್ದರೂ ಕೂಡ ಕ್ವಿಂಟಾನ್ ಡಿಕಾಕ್ ಉತ್ತಮ ಬ್ಯಾಟಿಂಗ ನಡೆಸುತ್ತಿದ್ದರು, ೩೧ ಎಸೆತಗಳಲ್ಲಿ ೩೯ ರನ್‌ಗಳಿಸಿ ಆಡುತ್ತಿದ್ದಾಗ ಅರ್ಶದೀಪ್ ಸಿಂಗ್ ಅವರ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ರು. ಹೆನ್ರಿಚ್ ಕ್ಲಸೇನ್ ಹಾಗೂ ಡೇವಿಡ್ ಮಿಲ್ಲರ್ ಒಂದಿಷ್ಟು ಹೊತ್ತು ವಿಕೆಟ್‌ಗೆ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಯತ್ನಿಸಿದ್ರು.
ಇದನ್ನೂ ಓದಿ : India Vs South Africa World Cup Final: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಇಂಚಿಂಚೂ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಆದರೆ ಭಾರತೀಯ ಬೌಲರ್‌ಗಳು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಭರ್ಜರಿ ಆದರ್ಶ ಶತಕ ಸಿಡಿಸಿದ್ದ ಕ್ಲಸೇನ್ ಹಾರ್ದಿಕ್ ಪಾಂಡ್ಯಾ ಎಸೆತದಲ್ಲಿ ಔಟಾದ್ರು, ನಂತರ ಬಂದ ಜಾನ್‌ಸೇನ್ ಅವರನ್ನು ಬೂಮ್ರಾ ಔಟ್ ಮಾಡಿದ್ರು. ಡೇವಿಡ್ ಮಿಲ್ಲರ್ ಅಂತಿಮ ಹಂತದ ವರೆಗೂ ತಂಡವನ್ನು ಗೆಲ್ಲಿಸಲು ಶ್ರಮಿಸಿದ್ರೂ ಕೂಡ ಭಾರತೀಯ ಬೌಲರ್‌ಗಳ ಮುಂದೆ ಯಾವುದೇ ಆಟ ನಡೆಯಲಿಲ್ಲ.
ಅಂತಿಮ ಓವರ್‌ನಲ್ಲಿ ದಾಳಿಗೆ ಇಳಿದ ಹಾರ್ದಿಕ್ ಪಾಂಡ್ಯ ಡೇವಿಡ್ ಮಿಲ್ಲರ್ ಅವರನ್ನು ಬಲಿ ಪಡೆದ್ರು, ಆದರೆ ಕ್ರೀಸ್‌ಗೆ ಬಂದ ರಬಾಡ ಮೊದಲ ಎಸೆತದಲ್ಲಿಯೇ ಬೌಂಡರಿ ಸಿಡಿಸಿದ್ರು. ಆದರೆ ಮಾರಕ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ ಭಾರತಕ್ಕೆ ವಿಶ್ವಕಪ್ ಗೆಲುವು ತಂದು ಕೊಟ್ರು. ಈ ಮೂಲಕ ವಿಶ್ವಕಪ್ ಜಯಿಸಿದ ನಾಯಕ ಅನ್ನೋ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಫೈನಲ್: ಕೊಹ್ಲಿ ವಿರಾಟ ಆಟ, ದಕ್ಷಿಣ ಆಫ್ರಿಕಾಕ್ಕೆ 177 ರನ್ ಟಾರ್ಗೆಟ್
ಸಂಕ್ಷಿಪ್ತ ಸ್ಕೋರ್ :
ಭಾರತ ತಂಡ : ವಿರಾಟ್ ಕೊಹ್ಲಿ (76), ಅಕ್ಷರ್ ಪಟೇಲ್ (47), ಶಿವಂ ದುಬೆ (27 ), ರೋಹಿತ್ ಶರ್ಮಾ (9) , ಹಾರ್ದಿಕ್ ಪಾಂಡ್ಯ (6), ನಿಟ್ರೋಜೆ 26/2, ಕೇಶವ್ ಮಹಾರಾಜ 23/2, ರಬಾಡಾ 36/1, ಜಾನ್‌ಸೇನ್ 49/1
ದಕ್ಷಿಣ ಆಫ್ರಿಕಾ ತಂಡ : ಹೆನ್ರಿಚ್ ಕ್ಲಸೇನ್ ( 52 ), ಕ್ವಿಂಟಾನ್ ಡಿಕಾಕ್ (39 ), ಟಿ ಸ್ತುಬ್ (31 ), ಡೇವಿಡ್ ಮಿಲ್ಲರ್ (21 ) ಹಾರ್ದಿಕ್ ಪಾಂಡ್ಯ 20/3 ಅರ್ಶದೀಪ್ ಸಿಂಗ್ 20/2, ಜಸ್ಪ್ರಿತ್ ಬೂಮ್ರಾ 18/2, , ಅಕ್ಷರ್ ಪಟೇಲ್ 49/1
ICC T20 World Cup Final 2024 India beat South Africa India win world cup in 4th time