ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದೆ. (India Vs USA) ಬುಧವಾರ ನಡೆಯಲಿರುವ ಪಂದ್ಯಕ್ಕೆ ನ್ಯೂ ಯಾರ್ಕ್’ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಭಾರತ ತನ್ನ ಮೊದಲೆರಡು ಪಂದ್ಯಗಳನ್ನು ಇದೇ ಮೈದಾನದಲ್ಲಿ ಆಡಿದೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಮತ್ತು ಅಮೆರಿಕ ತಂಡಗಳು ಇದೇ ಮೊದಲ ಬಾರಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಒಂದು ಬದಲಾವಣೆಯಾಗುವ ನಿರೀಕ್ಷೆಯಿದ್ದು, ಮೊದಲೆರಡೂ ಪಂದ್ಯಗಳಲ್ಲಿ ಎಡವಿರುವ ಬಿಗ್ ಹಿಟ್ಟರ್ ಶಿವ ದುಬೆ ಬದಲು ವಿಕೆಟ್ ಕೀಪರ್ ಸಂಜು ಸ್ಸಾಮ್ಸನ್ ಆಡುವ ಬಳಗಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದ್ದರೆ, ಭಾನುವಾರ ನಡೆದ ತನ್ನ 2ನೇ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಅಮೆರಿಕ ತಂಡ ತನ್ನ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದಿತ್ತು. 2ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿತ್ತು.
ಭಾರತ Vs ಅಮೆರಿಕ ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂ, ನ್ಯೂ ಯಾರ್ಕ್.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್
ಇದನ್ನೂ ಓದಿ : Jasprit Bumrah Net Worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !

ಅಮೆರಿಕ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಸಂಜು ಸ್ಯಾಮ್ಸನ್
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರೀತ್ ಬುಮ್ರಾ
11. ಮೊಹಮ್ಮದ್ ಸಿರಾಜ್
ಇದನ್ನೂ ಓದಿ : Jasprit Bumrah Interviewed By His Wife: ಪಾಕ್ ವಿರುದ್ಧ ಗೆದ್ದ ನಂತರ ಗಂಡನ ಸಂದರ್ಶನ ನಡೆಸಿದ ಹೆಂಡತಿ!
ICC t20 World Cup India vs USA Another big Match tomorrow Kannada Cricket News