Jasprit Bumrah interviewed by his wife: ಪಾಕ್ ವಿರುದ್ಧ ಗೆದ್ದ ನಂತರ ಗಂಡನ ಸಂದರ್ಶನ ನಡೆಸಿದ ಹೆಂಡತಿ!

Jasprit Bumrah - Sanjana Ganesan: ನ್ಯೂ ಯಾರ್ಕ್: ಭಾರೀ ಕುತೂಹಲ ಕೆರಳಿಸಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ (India Vs Pakistan) ತಂಡ 6 ರನ್’ಗಳ ರೋಚಕ ಗೆಲುವು ಸಾಧಿಸಿದೆ.

Jasprit Bumrah – Sanjana Ganesan: ನ್ಯೂ ಯಾರ್ಕ್: ಭಾರೀ ಕುತೂಹಲ ಕೆರಳಿಸಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ (India Vs Pakistan) ತಂಡ 6 ರನ್’ಗಳ ರೋಚಕ ಗೆಲುವು ಸಾಧಿಸಿದೆ. ನ್ಯೂ ಯಾರ್ಕ್’ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಲೋ ಸ್ಕೋರಿಂಗ್ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿ ಮೂಡಿ ಬಂದವರು ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah).

Icc t20 world cup 2024 indian cricketer jasprit bumrah interviewed by his wife sanjana ganesan
Image credit to original source

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭಾರೀ ಬ್ಯಾಟಿಂಗ್ ವೈಫಲ್ಯ ಎದುರಿಸಿ 19 ಓವರ್’ಗಳಲ್ಲಿ 119 ರನ್’ಗಳಿಗೆ ಆಲೌಟಾದಾಗ ಭಾರತದ ಗೆಲುವಿನ ಬಗ್ಗೆ ಯಾರಿಗೂ ನಂಬಿಕೆ ಇರಲಿಲ್ಲ. ಆದರೆ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 4 ಓವರ್’ಗಳಲ್ಲಿ ಕೇವಲ 14 ರನ್ನಿತ್ತು 3 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಪಂದ್ಯದ ನಂತರ ಜಸ್ಪ್ರೀತ್ ಬುಮ್ರಾ ಅವರನ್ನು ಪತ್ನಿ ಸಂಜನಾ ಗಣೇಶನ್ (Bumrah’s wife Sanjana Ganesan) ಸಂದರ್ಶನ ನಡೆಸಿದ್ದು ಗಮನ ಸೆಳೆಯಿತು.

https://x.com/cricwatcher11/status/1799998086640730286?s=46

ಬುಮ್ರಾ ಅವರ ಪತ್ನಿ ಸಂಜನಾ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್’ನಲ್ಲಿ ಬ್ರಾಡ್’ಕಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 33 ವರ್ಷದ ಸಂಜನಾ 2021ರಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಮದುವೆಯಾಗಿದ್ದರು. ಬುಮ್ರಾ ದಂಪತಿಗಳ ಅಂಗದ್ ಹೆಸರಿನ ಒಂದು ವರ್ಷದ ಮಗನಿದ್ದಾನೆ. ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿದರೆ, ಪಾಕಿಸ್ತಾನ ಸತತ ಎರಡನೇ ಸೋಲು ಕಂಡಿತು. ಇದರೊಂದಿಗೆ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ 7ನೇ ಗೆಲುವು ದಾಖಲಿಸಿತು.

ಇದನ್ನೂ ಓದಿ :  Rishabh Pant: ರಿಷಭ್ ಪಂತ್ ಅಪಘಾತದ ಸುದ್ದಿ ಕೇಳಿ ಕಣ್ಣೀರು ಹಾಕಿದ್ದೆ ಎಂದ ರವಿ ಶಾಸ್ತ್ರಿ !

ಭಾರತ ಪರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೂರು ಜೀವದಾನಗಳ ಸಹಿತ 31 ಎಸೆತಗಳಲ್ಲಿ 42 ರನ್ ಗಳಿಸಿದರು. ನಾಯಕ ರೋಹಿತ್ 13 ರನ್ ಗಳಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 4 ರನ್ ಗಳಿಸಿ ಔಟಾದರು. ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ 7 ರನ್ ಗಳಿಸಿ ಔಟಾದರು.

Icc t20 world cup 2024 indian cricketer jasprit bumrah interviewed by his wife sanjana ganesan
Image credit to original source

ನಂತರ ಕಠಿಣ ಪಿಚ್’ನಲ್ಲಿ 120 ರನ್’ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ನಿರ್ಣಾಯಕ 19ನೇ ಓವರ್’ನಲ್ಲಿ 1 ವಿಕೆಟ್ ಸಹಿತ ಕೇವಲ 3 ರನ್ ಬಿಟ್ಟುಕೊಟ್ಟ ಜಸ್ಪ್ರೀತ್ ಬುಮ್ರಾ, 14 ರನ್ನಿಗೆ 3 ವಿಕೆಟ್ ಪಡೆದು ಭಾರತ ಗೆಲುವಿನ ರೂವಾರಿಯಾಗಿ ಮೂಡಿ ಬಂದರು.

ಇದನ್ನೂ ಓದಿ : India beat Pakistan: ಬುಮ್ರಾ ಬೆಂಕಿ ಬೌಲಿಂಗ್ , ಪಾಕಿಸ್ತಾನ ವಿರುದ್ಧ ಭಾರತಕ್ಕ ರೋಚಕ ಜಯ !

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 24 ರನ್ನಿಗೆ 2 ವಿಕೆಟ್ ಪಡೆದರೆ, ಯುವ ಎಡಗೈ ಸೀಮರ್ ಅರ್ಷದೀಪ್ ಸಿಂಗ್ (1/31) ಮತ್ತು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (1/11) ತಲಾ ಒಂದು ವಿಕೆಟ್ ಪಡೆದರು. ಜೂನ್ 12ರಂದು ನಡೆಯುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತ, ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : KL Rahul & Monank Patel: ಟಿ20 ವಿಶ್ವಕಪ್: ಅಮೆರಿಕ ತಂಡದ ನಾಯಕ ನಮ್ಮ ಕನ್ನಡಿಗ ರಾಹುಲ್ ಅಭಿಮಾನಿಯಂತೆ !

icc t20 world cup 2024 Indian cricketer jasprit bumrah interviewed by his wife Sanjana ganesan

Comments are closed.