ICC Suspends Sri Lanka Cricket : ವಿಶ್ವಕಪ್ 2023 ನಡುವಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ (Srilanka Cricket Board) ಸದ್ಯ ಬಿಕ್ಕಟ್ಟಿಗೆ ಸಿಲುಕಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶ್ರೀಲಂಕಾ ಕ್ರಿಕೆಟ್ ಮಂಡಳಿನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ T20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ( Srilanka Cricket Team) ಆಡುವುದು ಅನುಮಾನ. ಶ್ರೀಲಂಕಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ.
9 ಪಂದ್ಯಗಳನ್ನು ಆಡಿರುವ ಶ್ರೀಲಂಕಾ ತಂಡ ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಲೀಗ್ ಹಂತದಲ್ಲಿಯೇ ವಿಶ್ವಕಪ್ ನಿಂದ ಹೊರಬಿದ್ದಿದೆ. ಜೊತೆಗೆ ಶ್ರೀಲಂಕಾದ ಹೀನಾಯ ಪ್ರದರ್ಶನದಿಂದ ICC ಚಾಂಪಿಯನ್ಸ್ ಟ್ರೋಫಿ 2025ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲದೇ ICC T20 ವಿಶ್ವಕಪ್ 2024 ಗೆ ಕೇವಲ 7 ತಿಂಗಳು ಬಾಕಿ ಉಳಿದಿದೆ.
ಇದನ್ನೂ ಓದಿ : 2024 : ನಿವೃತ್ತಿ ಘೋಷಿಸಿದ RCB ಸ್ಟಾರ್ ಆಟಗಾರ
ಈ ಹೊತ್ತಲ್ಲೇ ಐಸಿಸಿ ಶ್ರೀಲಂಕಾ ತಂಡದ ಮೇಲೆ ನಿಷೇಧ ಹೇರಿದೆ. ಒಂದೊಮ್ಮೆ ನಿಷೇಧದ ಅವಧಿಯು ವಿಶ್ವಕಪ್ ವರೆಗೂ ಜಾರಿಯಲ್ಲಿದ್ರೆ, ಶ್ರೀಲಂಕಾ ಟಿ೨೦ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ. ಅಷ್ಟೇ ಅಲ್ಲದೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜನವರಿ-ಫೆಬ್ರವರಿಯಲ್ಲಿ U19 ವಿಶ್ವಕಪ್ ಆಯೋಜನೆ ಮಾಡಬೇಕಾಗಿತ್ತು.

ಆದರೆ U19 ವಿಶ್ವಕಪ್ ಪಂದ್ಯಾವಳಿ ಕೂಡ ಅನಿಶ್ವಿತತೆಯಿಂದ ಕೂಡಿದೆ. ಶ್ರೀಲಂಕಾದ ಮೇಲೆ ನಿಷೇಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲು ಐಸಿಸಿ ಮಂಡಳಿಯು ಇದೇ ನವೆಂಬರ್ 21 ರಂದು ಸಭೆ ನಡೆಸಲಿದೆ. ಈ ಸಭೆಯಲ್ಲಿ ಶ್ರೀಲಂಕಾ ತಂಡದ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.
ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !
ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಿದ್ಯಾಕೆ ?
ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಸಿಸಿ ಸದಸ್ಯತ್ವವನ್ನು ಹೊಂದಿತ್ತು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಕ್ಷಣದಿಂದ ಜಾರಿಗೆ ಬರುವಂತೆ ಐಸಿಸಿ ಸದಸ್ಯತ್ವದಿಂದ ವಜಾಗೊಳಿಸಿದೆ. ಐಸಿಸಿ ಮಂಡಳಿಯು ಇಂದು ಸಭೆಯನ್ನು ಸೇರಿ ಈ ನಿರ್ಧಾರಕ್ಕೆ ಬಂದಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿತ ಮೇಲೆ ಸರಕಾರ ಹಸ್ತಕ್ಷೇಪ ನಡೆಸುತ್ತಿದೆ ಅನ್ನೋ ಆರೋಪ ಕೇಳಿಬಂದಿದ್ದು, ಐಸಿಸಿ ನೀಡಿರುವ ಜವಾಬ್ದಾರಿಗಳನ್ನು ಉಲ್ಲಂಘನೆ ಮಾಡುತ್ತಿದೆ. ಅಲ್ಲದೇ ವ್ಯವಹಾರಗಳ ಬಗ್ಗೆಯೂ ಸರಕಾರ ಹಸ್ತಕ್ಷೇಪವಿದೆ ಎಂದು ಐಸಿಸಿ ಹೇಳಿದೆ.
ಇದನ್ನೂ ಓದಿ : Rohit Sharma – Virat Kohli : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್ !
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತಂಡಕ್ಕೆ ಐಸಿಸಿ ನಿರ್ಧಾರ ಕೆಟ್ಟ ಹೊಡೆತವನ್ನು ನೀಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶ್ರೀಲಂಕಾ ವಿರುದ್ದ ತೆರವುಗೊಳಿಸುವ ವರೆಗೆ ಶ್ರೀಲಂಕಾ ಕ್ರಿಕೆಟ್ ತಂಡ ಐಸಿಸಿ ಆಯೋಜನೆ ಮಾಡುವ ಯಾವುದೇ ಪಂದ್ಯಾವಳಿಯಲ್ಲಿಯೂ ಆಡುವಂತಿಲ್ಲ. ಅಷ್ಟೇ ಅಲ್ಲದೇ ಐಸಿಸಿಯಿಂದ ಯಾವುದೇ ಹಣಕಾಸಿನ ನೆರವನ್ನೂ ಪಡೆಯಲು ಸಾಧ್ಯವಾಗುವುದಿಲ್ಲ.
ಐಸಿಸಿ ಹೇರಿರುವ ನಿಷೇಧದ ಅವಧಿ ಎಷ್ಟು ಸಮಯದ ವರೆಗೆ ಇರಲಿದೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಒಂದೊಮ್ಮೆ ಶ್ರೀಲಂಕಾ ಟಿT20 ವಿಶ್ವಕಪ್ ವರೆಗೆ ಮುಂದುವರಿದ್ರೆ ಶ್ರೀಲಂಕಾ ತಂಡ ಮೊದಲ ಬಾರಿಗೆ ವಿಶ್ವಕಪ್ ನಿಂದ ಹೊರಗೆ ಉಳಿಯಲಿದೆ.
ICC (The International Cricket Council ) Suspends Sri Lanka Cricket Board From Immediate Effect, International Cricket Council (ICC) has suspended Sri Lanka Cricket’s ICC membership with immediate effect.