ಭಾನುವಾರ, ಏಪ್ರಿಲ್ 27, 2025
HomeSportsCricketಭಾರತಕ್ಕೆ ಅಫ್ಘಾನಿಸ್ತಾನ ಎದುರಾಳಿ : ಶುಭಮನ್‌ ಗಿಲ್‌, ಆರ್. ಅಶ್ವಿನ್‌ ಔಟ್‌, ಯಾರಿಗೆ ಗೆಲುವು ?

ಭಾರತಕ್ಕೆ ಅಫ್ಘಾನಿಸ್ತಾನ ಎದುರಾಳಿ : ಶುಭಮನ್‌ ಗಿಲ್‌, ಆರ್. ಅಶ್ವಿನ್‌ ಔಟ್‌, ಯಾರಿಗೆ ಗೆಲುವು ?

- Advertisement -

ವಿಶ್ವಕಪ್‌ 2023 (ICC Cricket World Cup 2023) ನಲ್ಲಿ ಭಾರತ ಕ್ರಿಕೆಟ್‌ ತಂಡ ( Indian Cricket Team) ಇಂದು ತನ್ನ ಎರಡನೇ ಪಂದ್ಯವನ್ನು ಅಫ್ಘಾನಿಸ್ತಾನ (India vs Afghanistan) ತಂಡದ ವಿರುದ್ದ ಆಡಲಿದೆ. ಡೆಂಗ್ಯೂ ಹಿನ್ನೆಲೆಯಲ್ಲಿ ಶುಭಮನ್‌ ಗಿಲ್‌ ತಂಡದಿಂದ ಹೊರಗೆ ಉಳಿದಿದ್ದು, ಇಶಾನ್‌ ಕಿಶನ್‌ ಇನ್ನಿಂಗ್‌ ಆರಂಭಿಸಲಿದ್ದಾರೆ. ಇನ್ನೊಂದೆಡೆಯಲ್ಲಿಆರ್‌.ಅಶ್ವಿನ್‌ ಕೈಬಿಟ್ಟು ಮೊಹಮ್ಮದ್‌ ಸೆಮಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ದೆಹಲಿಯಲ್ಲಿ ನಡೆಯಲಿರುವ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಮಹತ್ವದ್ದು. ಯಾಕೆಂದ್ರೆ ಭಾರತ ಮುಂದಿನ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಭರ್ಜರಿ ಅಂತರದ ಗೆಲುವಿಗೆ ಹವಣಿಸುತ್ತಿದೆ.

ICC World Cup 2023 India Vs Afghanistan Match Shubman Gill R Ashwin Out, Who Will win
Image Credit to Original Source

ಡೆಂಗ್ಯೂ ಕಾರಣದಿಂದಾಗಿ ಶುಭಮನ್‌ ಗಿಲ್‌ ಈಗಾಗಲೇ ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಲ್ಲದೇ ಇಂದಿನ ಪಂದ್ಯ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಆಡುವುದು ಅನುಮಾನ. ಶುಭ್‌ಮನ್‌ ಗಿಲ್‌ ಬದಲು ಇಶಾಕ್‌ ಕಿಶಾನ್‌ ಕಣಕ್ಕೆ ಇಳಿಯಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಇಶಾನ್‌ ಕಿಶಾನ್‌ ಹಾಗೂ ರೋಹಿತ್‌ ಶರ್ಮಾ ಜೋಡಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇನ್ನೊಂದೆಡೆಯಲ್ಲಿ ಶ್ರೇಯಸ್‌ ಅಯ್ಯರ್‌ ಕೂಡ ಮಿಂಚಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಒಂದೆರಡು ಬದಲಾವಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ವಾಡಾ ನಿಷೇಧದ ಭೀತಿ !

ಪ್ರಮುಖವಾಗಿ ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಟ್ಟು ಮೂವರು ಸ್ಪಿನ್ನರ್‌ಗಳನ್ನು ಆಡಿಸಲಾಗಿತ್ತು. ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌ ಹಾಗೂ ಆರ್.ಅಶ್ವಿನ್‌ ಕಣಕ್ಕೆ ಇಳಿದಿದ್ದರು. ಈ ಪೈಕಿ ಜಡೇಜಾ ಹಾಗೂ ಕುಲದೀಪ್‌ ಯಾದವ್‌ ಅದ್ಬುತ್‌ ಪ್ರದರ್ಶನ ನೀಡಿದ್ದರು. ಆದರೆ ಅಶ್ವಿನ್‌ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ.

ICC World Cup 2023 India Vs Afghanistan Match Shubman Gill R Ashwin Out, Who Will win
Image Credit to Original Source

ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್.ಅಶ್ವಿನ್‌ ಕಣಕ್ಕೆ ಇಳಿಯುವುದು ಅನುಮಾನ. ದೆಹಲಿ ಪಂದ್ಯಕ್ಕೆ ವೇಗದ ಬೌಲರ್‌ಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದ್ದು, ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌ ಜೊತೆಗೆ ಮೊಹಮ್ಮದ್‌ ಸೆಮಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗಿದೆ.

ಇದನ್ನೂ ಓದಿ : ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಆರಂಭಿಕರಾಗಿ ರೋಹಿತ್‌ ಶರ್ಮಾ ಇಶಾನ್‌ ಕಿಶಾನ್‌ ಜೋಡಿಯೇ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಒಂದನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ, ನಂತರ ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ ಕಾಣಕ್ಕೆ ಇಳಿಯಲಿದ್ದಾರೆ. ಒಂದೊಮ್ಮೆ ಶ್ರೇಯಸ್‌ ಅಯ್ಯರ್‌ ಬದಲು ಸೂರ್ಯಕುಮಾರ್‌ ಯಾದವ್‌ ಕಾಣಿಸಿಕೊಂಡ್ರೂ ಅಚ್ಚರಿಯಿಲ್ಲ.

ICC World Cup 2023 India Vs Afghanistan Match Shubman Gill R Ashwin Out, Who Will win
Image Credit to Original Source

ಸೂರ್ಯಕುಮಾರ್‌ ಯಾದವ್‌ ಈಗಾಗಲೇ ಆಸ್ಟ್ರೇಲಿಯಾ ವಿರುದ್ದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಆಲ್‌ರೌಂಡರ್‌ ಖೋಟಾದಡಿಯಲ್ಲಿ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್‌ ಪಾಂಡ್ಯ ಕಣಕ್ಕೆ ಇಳಿಯಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ದೆಹಲಿಯ ಮೈದಾನ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಅವಕಾಶ ಸಿಗೋದಿಲ್ಲ. ಇದೇ ಕಾರನಕ್ಕೆ ವೇಗದ ಬೌಲರ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಫ್ಲ್ಯಾನ್‌ ಅನ್ನು ಟೀಂ ಇಂಡಿಯಾ ಮಾಡಿಕೊಂಡಿದೆ. ಕುಲದೀಪ್‌ ಯಾದವ್‌ ಇಂದಿನ ಪಂದ್ಯದಲ್ಲಿ ಆಡುವುದು ಖಚಿತ.

ಡೆಂಗ್ಯೂನಿಂದ ಶುಭಮನ್‌ ಗಿಲ್‌ ಚೇತರಿಕೆ :

ಈಗಾಗಲೇ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬಿಸಿಸಿಐ ಹಿರಿಯ ವೈದ್ಯಾಧಿಕಾರಿಗಳ ತಂಡವೇ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದೆ. ಆದರೆ ಶುಭಮನ್‌ ಗಿಲ್‌ ಸಂಪೂರ್ಣವಾಗು ಗುಣಮುಖರಾದ್ರೂ ಕೂಡ ತಂಡಕ್ಕೆ ಮರಳಲು ಕನಿಷ್ಠ ಎರಡು ವಾರಗಳ ವಿಶ್ರಾಂತಿ ಅಗತ್ಯವಿದೆ.

ಇಂದಿನ ಪಂದ್ಯಕ್ಕಾಗಿ ಶುಭಮನ್‌ ಗಿಲ್‌ ಭಾರತ ತಂಡದ ಜೊತೆಗೆ ಪ್ರಯಾಣಿಸಿಲ್ಲ. ಆದರೆ ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಅವರು ಲಭ್ಯರಾಗಲಿದ್ದಾರೆಯೇ ಅನ್ನೋ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸದ್ಯ ಅವರು ಚೆನ್ನೈನಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಗರಿಷ್ಟ ಸ್ಕೋರ್‌ ದಾಖಲೆ ಬರೆಯುತ್ತಾ ಟೀಂ ಇಂಡಿಯಾ ?

ದೆಹಲಿಯ ಮೈದಾನ ಈಗಾಗಲೇ ಬ್ಯಾಟಿಂಗ್‌ಗೆ ಸ್ವರ್ಗ ಎನಿಸಿಕೊಂಡಿದೆ. ಈಗಾಗಲೇ ಶ್ರೀಲಂಕಾ ತಂಡದ ವಿರುದ್ದ ದಕ್ಷಿಣ ಆಫ್ರಿಕಾ ತಂಡ ದಾಖಲೆಯ ಮೊತ್ತವನ್ನು ಕಲೆ ಹಾಖಿದೆ. ದಕ್ಷಿಣ ಆಫ್ರಿಕಾ ತಂಡ ಬರೋಬ್ಬರಿ 428 ರನ್‌ ಕಲೆ ಹಾಕಿತ್ತು. ಈ ಮೂಲಕ ವಿಶ್ವಕಪ್‌ನಲ್ಲಿ ಗರಿಷ್ಟ ಸ್ಕೋರ್‌ ದಾಖಲಿಸಿದ ತಂಡ ಅನ್ನೋ ಹೆಗ್ಗಳಿಕೆ ಪಾತ್ರವಾಗಿತ್ತು.

ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಒಟ್ಟು 94.5 ಓವರ್‌ಗಳಲ್ಲಿ ಬರೋಬ್ಬರಿ 754 ರನ್‌ಗಳು ದಾಖಲಾಗಿವೆ. ಇದೀಗ ಆಸ್ಟ್ರೇಲಿಯಾ ವಿರುದ್ದ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದ್ದರೂ ಕೂಡ ವಿರಾಟ್‌ ಕೊಹ್ಲಿ ಹಾಗೂ ಕೆಎಲ್‌ ರಾಹುಲ್‌ ಭರ್ಜರಿ ಬ್ಯಾಟಿಂಗ್‌ ನಡೆಸುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

ಶ್ರೇಯಸ್‌ ಅಯ್ಯರ್‌ ದೆಹಲಿ ಕ್ಯಾಪಿಟಲ್ಸ್‌ ಪರ ಆಡುತ್ತಿದ್ದು, ಇಂದಿನ ಪಂದ್ಯ ಅವರಿಗೆ ತವರು ಮೈದಾನದಲ್ಲಿ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ಕೊಹ್ಲಿ, ರಾಹುಲ್‌ ಅದ್ಬುತ ಫಾರ್ಮ್‌ನಲ್ಲಿದ್ದಾರೆ. ಒಂದೊಮ್ಮೆ ಆರಂಭಿಕ ಆಟಗಾರರು ಸಿಡಿದ್ರೆ ಇಂದಿನ ಪಂದ್ಯದಲ್ಲಿ ದಾಖಲೆಯ ಮೊತ್ತ ಕಲೆ ಹಾಕುವುದು ಖಚಿತ.

ಭಾರತ ತಂಡ Playing XI :

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್)‌, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

2023ರ ವಿಶ್ವಕಪ್‌ಗೆ ಭಾರತ ತಂಡ :

ಬ್ಯಾಟ್ಸಮನ್‌ : ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್

ವಿಕೆಟ್‌ ಕೀಪರ್‌ಗಳು: ಇಶಾನ್ ಕಿಶನ್, ಕೆಎಲ್ ರಾಹುಲ್

ವೇಗದ ಬೌಲಿಂಗ್ ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್

ಸ್ಪಿನ್ ಆಲ್ ರೌಂಡರ್ಸ್: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್

ವೇಗದ ಬೌಲರ್‌ ಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಸ್ಪಿನ್ನರ್: ಕುಲದೀಪ್ ಯಾದವ್

ಅಫ್ಘಾನಿಸ್ತಾನ ತಂಡ Playing XI :

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್‌), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ(ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಓಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಾ

2023ರ ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ:

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್‌), ಇಬ್ರಾಹಿಂ ಜದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ  (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್, ರಹಮಾನ್ ಅಲ್ಖಾಲ್ಹಾಕ್ , ರಿಯಾಜ್ ಹಸನ್, ನೂರ್ ಅಹ್ಮದ್.

ICC World Cup 2023 India Vs Afghanistan Match Shubman Gill R Ashwin Out, Who Will win

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular