IND vs IRE Jasprit Bumrah : 11 ತಿಂಗಳ ನಂತರ ಬೌಲಿಂಗ್‌ ಮಾಡಿದ ಜಸ್ಪ್ರೀತ್ ಬುಮ್ರಾ

ಡಬ್ಲಿನ್: IND vs IRE Jasprit Bumrah : ಭಾರತ ಹಾಗೂ ಐರ್ಲೆಂಡ್‌ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿ ನಾಳೆಯಿಂದ (ಆಗಸ್ಟ್ 18 ರಂದು ) ಪ್ರಾರಂಭವಾಗಲಿದೆ. ಭಾರತದ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಕ್ಕೆ ಮರಳಿದ್ದು, ಬರೋಬ್ಬರಿ 11 ತಿಂಗಳ ನಂತರ ಬುಮ್ರಾ ಬೌಲಿಂಗ್‌ ಮಾಡಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ಐರ್ಲೆಂಡ್ ಟಿ 20 ಪಂದ್ಯಕ್ಕೆ ಕಣಕ್ಕೆ ಇಳಿಯುವ ಮೊದಲು ಬುಮ್ರಾ ನೆಟ್‌ ಪ್ರಾಕ್ಟಿಸ್‌ ನಡೆಸುತ್ತಿದ್ದಾರೆ. ಎಂದಿನಂತೆಯೇ ಬುಮ್ರಾ ಬೌಲಿಂಗ್‌ ದಾಳಿ ಸಂಘಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಬುಮ್ರಾ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಭಾರತ ತಂಡ ಐರ್ಲೆಂಡ್‌ ವಿರುದ್ದದ ಸರಣಿಗಾಗಿ ಈಗಾಗಲೇ ಡಬ್ಲಿನ್‌ ತಲುಪಿದೆ. ಕೆರಿಬಿಯನ್ ವಿರುದ್ಧ ಭಾರತದ T20I ಸರಣಿಯ ಬೆನ್ನಲ್ಲೇ ಹಲವು ಆಟಗಾರು ಪ್ಲೋರಿಡಾದಿಂದ ನೇರವಾಗಿ ಡಬ್ಲಿನ್‌ಗೆ ಹಾರಿದ್ದಾರೆ. ಟೀಂ ಇಂಡಿಯಾದ ನಾಯಕ ಬುಮ್ರಾ ಸೇರಿದಂತೆ ಹಲವು ಆಟಗಾರರು ಇಂದು ಮುಂಜಾನೆ ಮುಂಬೈನಿಂದ ವಿಮಾನ ವೇರಿದ್ದಾರೆ.

ಬುಮ್ರಾ ಬೌಲಿಂಗ್‌ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಇದು ನಾವೆಲ್ಲರೂ ಕಾಯುತ್ತಿರುವ ಕ್ಷಣ ಎಂದು ಹೇಳಿದೆ. ವಿಡಿಯೊದಲ್ಲಿ, ಬುಮ್ರಾ ಬಲಗೈ ಆಟಗಾರನಿಗೆ ಬೌನ್ಸರ್ ಎಸೆದಿದ್ದಾರೆ. ಅಲ್ಲದೇ ನಂತರದ ಎಸೆತವನ್ನು ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಎಸೆದಿದ್ದು, ಬುಮ್ರಾ ಯಾರ್ಕರ್‌ ಎದುರಿಸಲು ಜೈಸ್ವಾಲ್‌ ಪರದಾಡಿರುವುದನ್ನು ಕಾಣಬಹುದಾಗಿದೆ. ತವರಿನಲ್ಲಿ ನಡೆಯಲಿರುವ ಏಷ್ಯಾ ಕಪ್‌ ಹಾಗೂ ಐಸಿಸಿ ವಿಶ್ವಕಪ್‌ ತಂಡಕ್ಕೆ ಮರಳುವ ಕುರಿತು ಬುಮ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಇಲ್ಲ, ಬುಮ್ರಾ ಐರ್ಲೆಂಡ್ ವಿರುದ್ಧ ತಂಡವನ್ನು ಮುನ್ನಡೆಸಲಿದ್ದಾರೆ. ಬುಮ್ರಾ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಮರು ನಿಗದಿತ ಐದನೇ ಟೆಸ್ಟ್‌ನಲ್ಲಿ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ : Virat Kohli house : ಅಲಿಬಾಗ್’ನಲ್ಲಿ ವಿರಾಟ್ ಮನೆ, 8 ಎಕರೆಯಲ್ಲಿ ಐಷಾರಾಮಿ ಮನೆ ಕಟ್ಟುವ ಕಾರ್ಯಕ್ಕೆ ವಿರುಷ್ಕಾ ಚಾಲನೆ

ಇದನ್ನೂ ಓದಿ : Asia Cup 2023: ಆಗಸ್ಟ್ 20ಕ್ಕೆ ಟೀಮ್ ಇಂಡಿಯಾ ಆಯ್ಕೆ; ರಾಹುಲ್, ಶ್ರೇಯಸ್ ಕಂಬ್ಯಾಕ್, ತಿಲಕ್ ವರ್ಮಾ ಡಾರ್ಕ್ ಹಾರ್ಸ್

ಇನ್ನು ಬುಮ್ರಾ (IND vs IRE Jasprit Bumrah) ಬೌಲಿಂಗ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. “ಬೆಂಕಿ ಬೆಂಕಿ ಬೆಂಕಿ. ನಾನು ನಿನ್ನನ್ನು ಜಸ್ಸಿಯನ್ನು ನೋಡಲು ಕಾಯಲು ಸಾಧ್ಯವಿಲ್ಲ, ”ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ. “ಈ ಸಂತೋಷವು ಹೆಚ್ಚು ಕಾಲ ಉಳಿಯುತ್ತದೆ ಎಂದು ಭಾವಿಸುತ್ತೇವೆ. ವೆಲ್ ಕಮ್ ಬ್ಯಾಕ್ ಚಾಂಪಿಯನ್” ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.

Comments are closed.