ಭಾನುವಾರ, ಏಪ್ರಿಲ್ 27, 2025
HomeSportsCricketಭಾರತ - ಪಾಕಿಸ್ತಾನ ಪಂದ್ಯ : ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಈ ಮೈದಾನದಲ್ಲಿ ಟೀಂ ಇಂಡಿಯಾ...

ಭಾರತ – ಪಾಕಿಸ್ತಾನ ಪಂದ್ಯ : ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಈ ಮೈದಾನದಲ್ಲಿ ಟೀಂ ಇಂಡಿಯಾ ಸೋಲನ್ನೇ ಕಂಡಿಲ್ಲ

- Advertisement -

IND vs PAK Live Score : ಏಷ್ಯಾ ಕಪ್ 2023 (Asia Cup 2023)ರಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿಯೇ ಎದುರಿಸುತ್ತಿದೆ. ಟಾಸ್‌ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ( Rohit Sharma) ಹಾಗೂ ಶುಭಮನ್‌ ಗಿಲ್‌ (Shubman Gill) ಬ್ಯಾಟಿಂಗ್‌ ಆರಂಭಿಸಿದ್ದಾರೆ.

ಕ್ಯಾಂಡಿಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ (Indian Cricket Team) ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಏಷ್ಯಾಕಪ್ ಮೊದಲ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ದ ಗೆದ್ದು ಬೀಗಿರುವ ಪಾಕಿಸ್ತಾನ ತಂಡ ಭಾರತದ ವಿರುದ್ದ ಹುಮ್ಮಸ್ಸಿನಿಂದಲೇ ಕಣಕ್ಕೆ ಇಳಿದಿದೆ.

ಭಾರತ ತಂಡಕ್ಕೆ ಜಸ್ಪ್ರಿತ್‌ ಬೂಮ್ರಾ ವಾಪಾಸಾಗಿದ್ದು ವೇಗದ ಬೌಲರ್‌ ಮೊಹಮ್ಮದ್‌ ಸೆಮಿ ಮೊದಲ ಪಂದ್ಯದಿಂದ ಹೊರಗೆ ಉಳಿದಿದ್ದಾರೆ. ಉಳಿದಂತೆ ಮೂವರು ಸ್ಪಿನ್ನರ್‌ ಹಾಗೂ ಇಬ್ಬರು ವೇಗದ ಬೌಲರ್‌ಗಳ ಜೊತೆಗೆ ಭಾರತ ಕಣಕ್ಕೆ ಇಳಿದಿದೆ. ಉಳಿದಂತೆ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ಶಕ್ತಿ ಆಗಿದ್ದಾರೆ.

ಇದನ್ನೂ ಓದಿ : ಏಷ್ಯಾ ಕಪ್‌ ನಡುವಲ್ಲೇ ಏಕದಿನ ವಿಶ್ವಕಪ್‌ಗೆ ಆಯ್ಕೆ: ಕೆಎಲ್‌ ರಾಹುಲ್‌, ಸಂಜು ಸ್ಯಾಮ್ಸನ್‌ ಮೇಲೆ ಎಲ್ಲರ ಕಣ್ಣು

ಹಾರ್ದಿಕ್‌ ಪಾಂಡ್ಯ, ಜಡೇಜಾ ಹಾಗೂ ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಕೋಟಾದ ಅಡಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಸ್ಪ್ರೀತ್‌ ಬೂಮ್ರಾ ಜೊತೆಗೆ ಮೊಹಮದ್‌ ಸಿರಾಜ್‌ ವೇಗದ ದಾಳಿ ನಡೆಸಲಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ತೆರವು ಮಾಡಿದ್ದಾರೆ. ವಿಕೆಟ್‌ ಕೀಪಿಂಗ್‌ ವಿಭಾಗದಲ್ಲಿ ರಾಹುಲ್‌ ಬದಲು ಇಶಾನ್‌ ಕಿಶನ್‌ ಸ್ಥಾನ ಪಡೆದಿದ್ದಾರೆ.

ಭಾರತ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ಇಶಾನ್ ಕಿಶನ್ (ಪ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಟಾಸ್‌ ಗೆದ್ದು ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ. ಸುತ್ತಲೂ ಸ್ವಲ್ಪ ಹವಾಮಾನವಿದೆ, ಆದರೆ ಅದರ ಬಗ್ಗೆ ಹೆಚ್ಚು ಯೋಚಿಸಲು ಸಾಧ್ಯವಿಲ್ಲ. ಉತ್ತಮ ಕ್ರಿಕೆಟ್ ಆಡಬೇಕು, ನೀವು ಸವಾಲನ್ನು ಸ್ವೀಕರಿಸಬೇಕು, ಪರಿಸ್ಥಿತಿಯನ್ನು ಸ್ವೀಕರಿಸಬೇಕು. ವೆಸ್ಟ್ ಇಂಡೀಸ್ ಸರಣಿಯ ನಂತರ ನಮಗೆ ಸ್ವಲ್ಪ ಬಿಡುವು ಸಿಕ್ಕಿತ್ತು. ಬೆಂಗಳೂರಿನಲ್ಲಿ ಆ ಕಸರತ್ತು ಮತ್ತು ಸವಾಲುಗಳಿಗೆ ಎಲ್ಲರೂ ಮುಂದಾಗಿದ್ದರು. ಈ ಪಂದ್ಯಾವಳಿಯಲ್ಲಿ ನಾವು ಏನನ್ನು ಸಾಧಿಸಬಹುದು ಎಂದು ನೋಡೋಣ.

IND Vs PAK Live Score : Asia Cup 2023 India won The Toss and Rohit Sharma And Shubman Gill begin for india
Image Credit To Original Source

ಇದು ಗುಣಮಟ್ಟದ ವಿರೋಧಗಳೊಂದಿಗೆ ಗುಣಮಟ್ಟದ ಪಂದ್ಯಾವಳಿಯಾಗಿದೆ. ದಿನದ ಕೊನೆಯಲ್ಲಿ ನಾವು ತಂಡವಾಗಿ ಏನನ್ನು ಸಾಧಿಸಬಹುದು ಎಂಬುದನ್ನು ನೋಡಬೇಕಾಗಿದೆ. ಅಯ್ಯರ್ ಮರಳಿದ್ದಾರೆ, ಬುಮ್ರಾ ಮರಳಿದ್ದಾರೆ ಮತ್ತು ನಮಗೆ ಮೂವರು ಸೀಮರ್‌ಗಳು ಸಿಕ್ಕಿದ್ದಾರೆ. ಇಬ್ಬರು ಸ್ಪಿನ್ನರ್‌ಗಳಾದ ಕುಲದೀಪ್ ಮತ್ತು ಜಡೇಜಾ ಆಡಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : Karnataka Cricket: ರಾಜ್ಯ ಕ್ರಿಕೆಟ್’ನಲ್ಲಿ ಕಡೆಗಣಿಸಿದವರಿಗೆ ಆಟದಿಂದಲೇ ಉತ್ತರಿಸುತ್ತಿದ್ದಾರೆ ತ್ರಿಮೂರ್ತಿಗಳು

ಇನ್ನು ಪಾಕಿಸ್ತಾನ ತಂಡ ಕೂಡ ಸಾಕಷ್ಟು ಬಲಿಷ್ಠವಾಗಿದೆ. ನಾಯಕ ಬಾಬರ್‌ ಅಜಮ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನೇಪಾಳ ವಿರುದ್ದದ ಮೊದಲ ಪಂದ್ಯದಲ್ಲಿಯೇ ಅಜಮ್‌ ಆರ್ಭಟಿಸಿದ್ದಾರೆ. ಫಖಾರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಮೊಹಮ್ಮದ್‌ ರಿಜ್ವಾನ್‌ ಅಘಾ ಸಲ್ಮಾನ್‌ ಭರ್ಜರಿ ಫಾರ್ಮನಲ್ಲಿದ್ದಾರೆ. ಇನ್ನು ಶಬಾದ್‌ ಖಾನ್‌, ಮೊಹಮ್ಮದ್‌ ನವಾಜ್‌ ಆಲ್‌ರೌಂಡರ್‌ ಸ್ಥಾನದಲ್ಲಿ ಕಾಣಿಸಿಕೊಂಡ್ರೆ ಶಾಹೀನ್‌ ಆಫ್ರಿದಿ ಹಾಗೂ ನಸೀಮ್‌ ಶಾ ಹಾಗೂ ಹ್ಯಾರಿಸ್‌ ರೌಫ್‌ ಮಾರಕ ದಾಳಿ ಸಂಘಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಪಾಕಿಸ್ತಾನ ಪ್ಲೇಯಿಂಗ್ XI
ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ಸಿ), ಮೊಹಮ್ಮದ್ ರಿಜ್ವಾನ್(ಡಬ್ಲ್ಯೂ), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್

ಟಾಸ್‌ ಸೋತ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಬಾಬರ್‌ ಅಜಮ್‌, ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು, ಆದರೆ ಟಾಸ್ ನಮ್ಮ ಕೈಯಲ್ಲಿಲ್ಲ. ನಾವು ಇಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ, ಆದ್ದರಿಂದ ನಮಗೆ ಪರಿಸ್ಥಿತಿಗಳು ತಿಳಿದಿವೆ. ಅಗ್ರ ತಂಡಗಳು ಆಡುತ್ತಿದ್ದು ಏಷ್ಯಾಕಪ್ ಉತ್ತಮವಾಗಿದೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.

ನಾವು ಅದೇ ಸಂಯೋಜನೆಯೊಂದಿಗೆ ಆಡುತ್ತಿದ್ದೇವೆ, ಯಾವುದೇ ಬದಲಾವಣೆಗಳಿಲ್ಲ. ಉತ್ತಮ ಪ್ರದರ್ಶನ ಯಾವಾಗಲೂ ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ, ನಾವು ಲಾಭ ಪಡೆಯಲು ಪ್ರಯತ್ನಿಸುತ್ತೇವೆ. ಇದು ಹೆಚ್ಚಿನ ತೀವ್ರತೆಯ ಪಂದ್ಯವಾಗಿದೆ, ನಾವು ಶಾಂತವಾಗಿರಲು ಮತ್ತು ಸಂಯೋಜಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

IND Vs PAK Live Score : Asia Cup 2023 India won The Toss and Rohit Sharma And Shubman Gill begin for india

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular