IND vs SL T20 : ಅಂತಿಮ ಪಂದ್ಯದಲ್ಲಿ ಮುಗ್ಗರಿಸಿದ ಭಾರತ, ಟಿ20 ಸರಣಿ ಗೆದ್ದ ಶ್ರೀಲಂಕಾ

ಕೊಲಂಬೋ : ಏಕದಿನ ಸರಣಿಯನ್ನು ಗೆದ್ದು ಬೀಗಿದ್ದ ಟೀಂ ಇಂಡಿಯಾ ಇದೀಗ, ಟಿ20 ಸರಣಿಯನ್ನು ಕೈ ಚೆಲ್ಲಿದೆ. ವಾನಿಂದು ಹಸರಂಗ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಮೂರನೇ ಟಿ20 ಸರಣಿಯನ್ನು ಹೀನಾಯವಾಗಿ ಸೋಲನ್ನು ಕಂಡಿದೆ.

ಕೊರೊನಾ ಶಾಕ್‌ ತತ್ತರಿಸಿದ್ದ ಭಾರತ ತಂಡ ಯುವ ಆಟಗಾರರನ್ನೇ ಕಣಕ್ಕೆ ಇಳಿಸಿತ್ತು. ಮೊದಲ ಪಂದ್ಯದಲ್ಲಿ ಅದ್ಬುತ್‌ ಆಟ ಪ್ರದರ್ಶಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಪ್ರಬಲ ಪೈಪೋಟಿಯನ್ನು ನೀಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ ವೈಫಲ್ಯ ಎದುರಿಸಿ, ಹೀನಾಯವಾಗಿ ಸೋಲನುಭವಿಸಿದೆ. ಶ್ರೀಲಂಕಾದ ವಾನಿಂದು ಹಸರಂಗ ಮಾರಕ ದಾಳಿಗೆ ತತ್ತರಿಸಿದ್ದುಅಂತಿಮ ಪಂದ್ಯ ಗೆಲ್ಲುವ ಮೂಲಕ 2-1 ರಿಂದ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

ಭಾರತ ನೀಡಿದ 88 ರನ್‍ಗಳ ಸುಲಭ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ 12ರನ್ (18 ಎಸೆತ) ಮತ್ತು ಮಿನೋದ್ ಭನುಕಾ 18 ರನ್(27 ಎಸೆತ) ‌ಉತ್ತಮ ಜೊತೆಯಾಟದ ಭರವಸೆ ನೀಡಿದೃೂ ಕೂಡ ಬಹುಬೇಗನೆ ವಿಕೆಟ್‌ ಒಪ್ಪಿಸಿದ್ದರು. ನಂತರ ಧನಂಜಯ ಡಿ ಸಿಲ್ವಾ ಅವರ ಅದ್ಬುತ ಆಟದ ನೆರವಿನಿಂದ ಶ್ರೀಲಂಕಾ ತಂಡ 14.3 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ವಾನಿಂದು ಹಸರಂಗ ಮಾರಕ ದಾಳಿಗೆ ತತ್ತರಿಸಿದೆ. ಟೀಂ ಇಂಡಿಯಾ ನಾಯಕ ಶಿಖರ್‌ ಧವನ್‌ ನಿರ್ಣಾಯಕ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಫೆವಿಲಿಯನ್‌ ಹಾದಿ ಹಿಡಿದಿದ್ದರು. ನಂತರ ಋತುರಾಜ್‌ ಗಾಯಕ್ವಾಡ್‌ ಮತ್ತು ಕನ್ನಡಿಗ ದೇವದತ್ತ ಪಡಿಕ್ಕಲ್‌ ಉತ್ತಮ ಆಟದ ಭರವಸೆ ನೀಡಿದ್ದಾರೆ. ಆದರೆ ಪಡಿಕ್ಕಲ್‌ ಮತ್ತು ಗಾಯಕ್ವಾಡ್‌ ಹೆಚ್ಚುಹೊತ್ತು ಬ್ಯಾಟ್‌ ಬೀಸಲಿಲ್ಲ.

ಹಸರಂಗ ದಾಳಿಗೆ ತತ್ತರಿಸಿ ಸ್ಯಾಮ್ಸನ್‌ ಶೂನ್ಯಕ್ಕೆ ಔಟಾದ್ರೆ, ರಾಣಾ ಎರಡೂ ಪಂದ್ಯಗಳಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಎದುರಿಸಿದ್ದಾರೆ. ಋತುರಾಜ್ ಗಾಯಕ್ವಾಡ್ 14 ರನ್(10 ಎಸೆತ), ಭುವನೇಶ್ವರ್ ಕುಮಾರ್ 16 ರನ್(32 ಎಸೆತ) ಮತ್ತು ಕುಲದೀಪ್ ಯಾದವ್ ಅಜೇಯ 23 ರನ್( 28 ಎಸೆತ) ಹೊರತು ಪಡಿಸಿ ಉಳಿದ ಆಟಗಾರರು ಎರಡಂಕಿ ರನ್‌ ದಾಟಲಿಲ್ಲ. ಅಂತಿಮವಾಗಿ 20 ಓವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 81 ರನ್ ಗಳಿಸಲು ಮಾತ್ರವೇ ಸಾಧ್ಯವಾಗಿದೆ. ದಾಸುನ್ ಶಾನಕಾ 2 ವಿಕೆಟ್ ಪಡೆದರೆ, ರಮೇಶ್ ಮೆಂಡಿಸ್ , ದುಷ್ಮಂತ ಚಮೀರ ತಲಾ 1 ವಿಕೆಟ್ ಕಿತ್ತರು.

Comments are closed.