ಭಾರತ – ಇಂಗ್ಲೆಂಡ್‌ ಟೆಸ್ಟ್‌ ಪಂದ್ಯ ; ಕನ್ನಡಿಗ ಕೆಎಲ್‌ ರಾಹುಲ್‌ ಹೊಸ ದಾಖಲೆ

KL Rahul : ಭಾರತ ಹಾಗೂ ಇಂಗ್ಲೆಂಡ್‌ (India - England 1st Test Match) ವಿರುದ್ದದ ಸರಣಿಯ ಮೊದಲ ಪಂದ್ಯ ಹೈದ್ರಾಬಾದ್‌ನ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ.ಟೆಸ್ಟ್‌ ಪಂದ್ಯದ ಮೊದಲ ದಿನವೇ ಕನ್ನಡಿಗ ಕೆಎಲ್‌ ರಾಹುಲ್‌ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

KL Rahul : ಭಾರತ ಹಾಗೂ ಇಂಗ್ಲೆಂಡ್‌ (India – England 1st Test Match) ವಿರುದ್ದದ ಸರಣಿಯ ಮೊದಲ ಪಂದ್ಯ ಹೈದ್ರಾಬಾದ್‌ನ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಸುಸ್ಥಿತಿಯಲ್ಲಿದೆ. ಆದರೆ ಟೆಸ್ಟ್‌ ಪಂದ್ಯದ ಮೊದಲ ದಿನವೇ ಕನ್ನಡಿಗ ಕೆಎಲ್‌ ರಾಹುಲ್‌ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಇಂಗ್ಲೆಂಡ್‌ ವಿರುದ್ದ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡಿದ್ದು, ಯಶಸ್ವಿ ಜೈಸ್ವಾಲ್‌ ಅರ್ಧ ಶತಕ ಹಾಗೂ ಶುಭಮನ್‌ ಗಿಲ್‌ 14  ರನ್‌ ಗಳಿಸಿ ಆಟವಾಡುತ್ತಿದ್ದಾರೆ. ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.

India - England 1st Test Match, KL Rahul is a new record in Test Cricket 
Image Credit to Original Source

ಭಾರತ ಹಾಗೂ ಇಂಗ್ಲೆಂಡ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಕೆಎಲ್‌ ರಾಹುಲ್‌ ಹೊಸ ದಾಖಲೆ ನಿರ್ಮಿಸಿದ್ದು, 50  ಟೆಸ್ಟ್‌ ಪಂದ್ಯವನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ಪರ 50 ಟೆಸ್ಟ್‌ ಪಂದ್ಯಗಳನ್ನು ಆಡಿರುವ 39 ನೇ ಆಟಗಾರರಾಗಿ ಹೊರ ಹೊಮ್ಮಿದ್ದಾರೆ.

ಕೆಎಲ್‌ ರಾಹುಲ್‌ ಒಟ್ಟು 50 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ೮೪ ಇನ್ನಿಂಗ್ಸ್‌ಗಳ ಮೂಲಕ ಒಟ್ಟು 2755  ರನ್‌ ಬಾರಿಸಿದ್ದಾರೆ. ಇದರಲ್ಲಿ 8  ಶತಕ ಹಾಗೂ 13  ಅರ್ಧ ಶತಕ ಒಳಗೊಂಡಿದೆ. ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 199 ರನ್‌ ಬಾರಿಸಿರುವುದು ಅತ್ಯಧಿಕ ರನ್‌ ಆಗಿದೆ. ಏಕದಿನ ಹಾಗೂ ಟಿ20  ಪಂದ್ಯಗಳಲ್ಲಿ ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ ಮೂಲಕ ಕಮಾಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆಘಾತ : ಸ್ಪೋಟಕ ಆಟಗಾರ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನಿಂದ ಔಟ್‌

ಕೆಎಲ್‌ ರಾಹುಲ್‌ ಒಟ್ಟು 75  ಏಕದಿನ ಪಂದ್ಯಗಳನ್ನು ಆಡಿದ್ದು, 2820  ರನ್‌ ಸಿಡಿಸಿದ್ದಾರೆ. 7 ಶತಕ ಹಾಗೂ ೧೮ ಅರ್ಧ ಶತಕ ಒಳಗೊಂಡಿದೆ. 72  ಟಿ20 ಪಂದ್ಯಗಳನ್ನು ಆಡಿರುವ ಕೆಎಲ್‌ ರಾಹುಲ್‌ 2265 ರನ್‌ ಬಾರಿಸಿದ್ದು, 2 ಶತಕ ಹಾಗೂ 22 ಅರ್ಧ ಶತಕ ಸಿಡಿಸಿದ್ದಾರೆ. ಐಪಿಎಲ್‌ ಪಂದ್ಯಾವಳಿಯಲ್ಲಿಯೂ ರಾಹುಲ್‌ ಉತ್ತಮ ರನ್‌ ಧಾರಣೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ : ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡದ ಖ್ಯಾತ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಅನಾರೋಗ್ಯ : ಸರಣಿಯಿಂದ ಔಟ್‌

ಭಾರತ ಟೆಸ್ಟ್‌ ತಂಡದ ನಾಯಕರಾಗ್ತಾರಾ ಕೆಎಲ್‌ ರಾಹುಲ್‌ ?

ಭಾರತ ಟೆಸ್ಟ್‌ ತಂಡವನ್ನು ಸದ್ಯ ರೋಹಿತ್‌ ಶರ್ಮಾ ಮುನ್ನೆಡೆಸುತ್ತಿದ್ದಾರೆ. ಈಗಾಗಲೇ ಏಕದಿನ ಹಾಗೂ ಟಿ20 ಪಂದ್ಯಗಳಿಂದ ರೋಹಿತ್‌ ಶರ್ಮಾ ದೂರ ಉಳಿದಿದ್ದಾರೆ. ವಯಸ್ಸಿನ ಕಾರಣಕ್ಕೆ ರೋಹಿತ್‌ ಶರ್ಮಾ ಸುದೀರ್ಘ ಕಾಲ ಟೆಸ್ಟ್‌ ಪಂದ್ಯವನ್ನು ಆಡುವುದು ಅನುಮಾನ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್‌ ತಂಡದ ನಾಯಕ ಯಾರು ಅನ್ನೋ ಪ್ರಶ್ನೆ ಎದುರಾಗಿದೆ.

India - England 1st Test Match, KL Rahul is a new record in Test Cricket 
Image Credit to Original Source

ಇದನ್ನೂ ಓದಿ : ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಲೆಜೆಂಡರಿ ಮೇರಿ ಕೋಮ್

ಸದ್ಯ ಟೆಸ್ಟ್‌ ತಂಡಕ್ಕೆ ಕನ್ನಡಿಗ ಕೆಎಲ್‌ ರಾಹುಲ್‌ ಅವರ ಹೆಸರು ಕೇಳಿಬಂದಿದೆ. ಕಳೆದ ಕೆಲವು ಸರಣಿಗಳಲ್ಲಿ ರಾಹುಲ್‌ ಭಾರತ ಏಕದಿನ ಹಾಗೂ ಟಿ20 ನಾಯಕರಾಗಿ ಭಾರತ ತಂಡವನ್ನು ಮುನ್ನೆಡೆಸಿದ್ದಾರೆ. ಅಲ್ಲದೇ ಭಾರತ ಟೆಸ್ಟ್‌ ತಂಡದ ನೇತೃತ್ವವನ್ನೂ ವಹಿಸಿದ್ದರು. ಹೀಗಾಗಿ ಭವಿಷ್ಯದಲ್ಲಿ ಭಾರತ ಟೆಸ್ಟ್‌ ತಂಡದ ನಾಯಕರಾಗಿ ಕೆಎಲ್‌ ರಾಹುಲ್‌ ನೇಮಕವಾಗುವ ಸಾಧ್ಯತೆಯಿದೆ.

India – England 1st Test Match, KL Rahul is a new record in Test Cricket 

Comments are closed.