ಟ್ರಿನಿಡಾಡ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾದ ಮುಂದಿನ (India playing 200th t20) ಗುರಿ ಟಿ20 ಸರಣಿ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ (India Vs West Indies t20 series) ಮೊದಲ ಪಂದ್ಯ ಇಂದು (ಗುರುವಾರ) ಟ್ರಿನಿಡಾಡ್’ನಲ್ಲಿರುವ ಬ್ರಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಭಾರತದ ಪಾಲಿಗೆ 200ನೇ ಟಿ20 ಅಂತರಾಷ್ಟ್ರೀಯ ಪಂದ್ಯವಾಗಿದೆ. ಹೀಗಾಗಿ 200ನೇ ಪಂದ್ಯವನ್ನು ಭಾರತ ತಂಡ ಸ್ಮರಣೀಯವಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಇದುವರೆಗೆ ಒಟ್ಟು 199 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ, 127 ಪಂದ್ಯಗಳನ್ನು ಗೆದ್ದಿದ್ದು, 63 ಪಂದ್ಯಗಳಲ್ಲಿ ಸೋಲು ಕಂಡಿದೆ. 4 ಪಂದ್ಯಗಳು ಟೈಗೊಂಡಿದ್ದು, ಉಳಿದ 5 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. 2006ರಲ್ಲಿ ಮೊದಲ ಬಾರಿ ಟಿ20 ಪಂದ್ಯವಾಡಿದ್ದ ಭಾರತ, 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ನಂತರ ಭಾರತ ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ.
ಟಿ20 ಕ್ರಿಕೆಟ್’ನಲ್ಲಿ ಭಾರತ ತಂಡದ ಸಾಧನೆ :
- ಪಂದ್ಯ- 199
- ಗೆಲುವು- 127
- ಸೋಲು- 63
- ಟೈ- 04
- ನೋ ರಿಸಲ್ಟ್- 04
200ನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜ ಸಹಿತ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದನ್ನೂ ಓದಿ : Ishan Kishan – Sanju Samson : ಸಂಜು ಸ್ಯಾಮ್ಸನ್ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಇಶಾನ್ ಕಿಶನ್
ಇದನ್ನೂ ಓದಿ : R Ashwin : ಕಮಿಟ್ಮೆಂಟ್‌ಗೆ ಮತ್ತೊಂದು ಹೆಸರೇ ಅಶ್ವಿನ್, ತಮಿಳುನಾಡು ಡಿವಿಜನ್ ಲೀಗ್’ನಲ್ಲಿ ಆಡುತ್ತಿದ್ದಾರೆ ಸ್ಪಿನ್ ಮಾಂತ್ರಿಕ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
- ಇಶಾನ್ ಕಿಶನ್ (ವಿಕೆಟ್ ಕೀಪರ್)
- ಶುಭಮನ್ ಗಿಲ್
- ಸೂರ್ಯಕುಮಾರ್ ಯಾದವ್ (ಉಪನಾಯಕ)
- ಸಂಜು ಸ್ಯಾಮ್ಸನ್
- ಹಾರ್ದಿಕ್ ಪಾಂಡ್ಯ (ನಾಯಕ)
- ತಿಲಕ್ ವರ್ಮಾ
- ಅಕ್ಷರ್ ಪಟೇಲ್
- ಕುಲ್ದೀಪ್ ಯಾದವ್
- ಮುಕೇಶ್ ಕುಮಾರ್
- ಅರ್ಷದೀಪ್ ಸಿಂಗ್
- ಉಮ್ರಾನ್ ಮಲಿಕ್ / ಆವೇಶ್ ಖಾನ್
ಭಾರತ Vs ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ
ಸ್ಥಳ: ಬ್ರಯಾನ್ ಲಾರಾ ಕ್ರೀಡಾಂಗಣ, ಟ್ರಿನಿಡಾಡ್
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮ್: ಫ್ಯಾನ್ ಕೋಡ್/ ಜಿಯೊ ಸಿನಿಮಾ
India playing 200th t20 : India vs Windies T20 series from today, 200th T20 match for Team India