ಕೊಲಂಬೋ : ಭಾರತ ತಂಡ ಶ್ರೀಲಂಕಾ ವಿರುದ್ದ ಏಕದಿನ ಸರಣಿಯಲ್ಲಿ ಅದ್ಬುತ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದ್ದು, ಡ್ರೆಸ್ಸಿಂಗ್ ರೂಮ್ ನಲ್ಲಿ ಭಾರತ ತಂಡ ಕೋಚ್ ರಾಹುಲ್ ದ್ರಾವಿಡ್ ಗೆಲುವನ್ನು ಸಂಭ್ರಮಿಸಿದ್ದಾರೆ.

ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದೆ. ಅದ್ರಲ್ಲೂ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ದಾಖಲೆಯ ಜೊತೆಯಾಟವನ್ನು ಪ್ರತಿಯೊಬ್ಬರು ಕೊಂಡಾಡುತ್ತಿದ್ದಾರೆ. ಎಂಟನೇ ವಿಕೆಟ್‌ಗೆ ದಾಖಲೆಯ ಗೆಲುವಿನ ಜೊತೆಗೆ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಶ್ರೀಲಂಕಾ ವಿರುದ್ದ ಗೆಲುವಿನ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ಕುರಿತು ಗುಣಗಾನ ನಡೆಯುತ್ತಿದೆ. ಭಾರತ ತಂಡದ ವಾಲ್ ಎಂದೇ ಖ್ಯಾತಿ ಪಡೆದಿದ್ದ ರಾಹುಲ್, ಹಿರಿಯರ ತಂಡ ಕೋಚ್ ಆಗಿ ಪ್ರತಿನಿಧಿಸಿದ ಮೊದಲ ಸರಣಿಯನ್ನೇ ಗೆಲ್ಲುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಭೀತು ಪಡಿಸಿದ್ದಾರೆ. ಅಲ್ಲದೇ ರಾಹುಲ್ ಮುಂದಿನ ದಿನಗಳಲ್ಲಿ ಭಾರತ ತಂಡ ಕೋಚ್ ಆಗಬೇಕು ಅನ್ನೋ ಮಾತು ಕೇಳಿಬರುತ್ತಿದೆ.
ಶ್ರೀಲಂಕಾ ವಿರುದ್ದದ ಗೆಲುವಿನ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶ್ರೀಲಂಕಾ ತಂಡ ಉತ್ತಮವಾಗಿ ಆಟವಾಡಿದೆ. ನಾವು ಅತ್ಯುತ್ತಮವಾಗಿ ಚಾಂಪಿಯನ್ ತಂಡದಂತೆ ಗೆಲುವು ದಾಖಲಿಸಿದ್ದೇವೆ. ಎಲ್ಲರೂ ಚೆನ್ನಾಗಿಯೇ ಆಟವಾಡಿದ್ದೀರಿ. ಇದೊಂದು ಅದ್ಬುತ ಗೆಲುವು ಎಂದಿದ್ದಾರೆ. ಇದೀಗ ರಾಹುಲ್ ಆಡಿರೋ ಮಾತುಗಳನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಅಲ್ಲದೇ ಟೀಂ ಇಂಡಿಯಾದ ಗೆಲುವಿನ ಬಗ್ಗೆಯೂ ಗುಣಗಾನ ಮಾಡಿದೆ.

ಟಿ20 ವಿಶ್ವಕಪ್ ನಂತರದಲ್ಲಿ ಕೋಚ್ ರವಿಶಾಸ್ತ್ರಿ ಅವಧಿ ಮುಕ್ತಾಯವಾಗಲಿದೆ. ನಂತರದಲ್ಲಿಯೂ ರವಿಶಾಸ್ತ್ರೀ ಅವರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸೋದು ಅನುಮಾನ. ಕಳೆದ ಬಾರಿಯೇ ರಾಹುಲ್ ದ್ರಾವಿಡ್ ಹೆಸರು ಕೇಳಿಬಂದಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ರಾಹುಲ್ ಅವರನ್ನೇ ಕೋಚ್ ಆಗಿ ನೇಮಕ ಮಾಡುವ ಸಲುವಾಗಿಯೇ ಶ್ರೀಲಂಕಾ ಸರಣಿಗೆ ನೇಮಕ ಮಾಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಏನೇ ಆದ್ರೂ ರಾಹುಲ್ ದ್ರಾವಿಡ್ ಅಂತ ಆಟಗಾರನ ಮಾರ್ಗದರ್ಶನ ಟೀಂ ಇಂಡಿಯಾಕ್ಕೆ ಅತೀ ಅಗತ್ಯ.