ಮಂಗಳವಾರ, ಏಪ್ರಿಲ್ 29, 2025
HomeSportsIND vs ENG : ಟೀಂ ಇಂಡಿಯಾಕ್ಕೆ ಡಬ್ಬಲ್‌ ಆಘಾತ : ಕೆ.ಎಲ್.ರಾಹುಲ್‌, ಅಜ್ಯಂಕೆ ರಹಾನೆ...

IND vs ENG : ಟೀಂ ಇಂಡಿಯಾಕ್ಕೆ ಡಬ್ಬಲ್‌ ಆಘಾತ : ಕೆ.ಎಲ್.ರಾಹುಲ್‌, ಅಜ್ಯಂಕೆ ರಹಾನೆ ಔಟ್‌

- Advertisement -

ಲಾರ್ಡ್ಸ್‌ : ಇಂಗ್ಲೆಂಡ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ದಿನ ಉತ್ತಮ ಮೊತ್ತ ಕಲೆ ಹಾಕಿತ್ತು. ಆದ್ರೆ ಎರಡನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ ಎದುರಾಗಿದ್ದು, ದಿನದ ಎರಡನೇ ಎಸೆತದಲ್ಲಿ ಶತಕವೀರ ರಾಹುಲ್‌ ಹಾಗೂ ರಹಾನೆ ಔಟ್‌ ಆಗಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 3 ವಿಕೆಟ್‌ ಕಳೆದುಕೊಂಡು 276 ರನ್‌ ಗಳಿಸಿತ್ತು. ಟೀಂ ಇಂಡಿಯಾ ಪರ 248 ಎಸೆತಗಳಲ್ಲಿ 127 ರನ್‌ ಗಳಿಸಿದ್ದ ಕೆ.ಎಲ್.ರಾಹುಲ್‌ ಅಜ್ಯಂಕೆ ರಹಾನೆ ಜೊತೆಗೆ ಎರಡನೇ ದಿನದ ಬ್ಯಾಟಿಂಗ್‌ ಆರಂಭಿಸಿದ್ದರು. ಮೊದಲ ಎಸೆತದಲ್ಲಿ ಎರಡು ರನ್‌ ಕಲೆ ಹಾಕಿದ್ದ ರಾಹುಲ್‌, ಎರಡನೇ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಬಲಿಯಾದ್ರು.

ಇದನ್ನೂ ಓದಿ : Rahul Lord’s Record : ಲಾರ್ಡ್ಸ್‌ ಅಂಗಳದಲ್ಲಿ ಕನ್ನಡಿಗನ ಪರಾಕ್ರಮ : ಐತಿಹಾಸಿಕ ದಾಖಲೆ ಬರೆದ ಕೆ.ಎಲ್.ರಾಹುಲ್‌

ರಾಹುಲ್‌ ಔಟ್‌ ಆಗುತ್ತಲೇ ಪಂತ್‌ ಜೊತೆಯಾದ ರಹಾನೆ ಎರಡನೇ ದಿನದ ಎರಡನೇ ಓವರ್‌ನಲ್ಲಿ ಅಂಡರ್‌ಸನ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಎರಡನೇ ದಿನ ಆಘಾತವನ್ನು ಅನುಭವಿಸಿದೆ. ಭಾರತ ತಂಡ ಎರಡನೇ ದಿನದ ಆರಂಭಕ್ಕೆ 5 ವಿಕೆಟ್‌ ಕಳೆದುಕೊಂಡು 282ರನ್‌ ಕಲೆ ಹಾಕಿದೆ. ಪಂತ್‌ ಜೊತೆಗೆ ರವೀಂದ್ರ ಜಡೇಜಾ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : ಕೆ.ಎಲ್.ರಾಹುಲ್‌ ಭರ್ಜರಿ ಶತಕ : ಬೃಹತ್‌ ಮೊತ್ತದತ್ತ ಟೀಂ ಇಂಡಿಯಾ

(Double shock for Team India: KL Rahul, Ajyanke Rahane out)
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular