India vs England T20 World cup 2024 : ಭಾರತ Vs ಇಂಗ್ಲೆಂಡ್ ಸೆಮಿಫೈನಲ್; ಸೇಡು ತೀರಿಸಿಕೊಳ್ತಾರಾ, ಮತ್ತೆ ಚೋಕರ್ಸ್ ಆಗ್ತಾರಾ?

ಐಸಿಸಿ ಟಿ20 ವಿಶ್ವಕಪ್ (ICC T20 World Cup) ಗೆಲ್ಲುವ ಭಾರತದ ಕನಸಿಗೆ ಎರಡೇ ಮೆಟ್ಟಿಲು ಬಾಕಿ. ಇಂದು (ಗುರುವಾರ) ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team)  ಹಾಲಿ ಚಾಂಪಿಯನ್ ಇಂಗ್ಲೆಂಡ್‌ ಕ್ರಿಕೆಟ್‌ ತಂಡ  (India Vs England) ತಂಡವನ್ನು ಎದುರಿಸಲಿದೆ.

ಗಯಾನಾ: 17 ವರ್ಷಗಳ ನಂತರ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಗೆಲ್ಲುವ ಭಾರತದ ಕನಸಿಗೆ ಎರಡೇ ಮೆಟ್ಟಿಲು ಬಾಕಿ. ಇಂದು (ಗುರುವಾರ) ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team)  ಹಾಲಿ ಚಾಂಪಿಯನ್ ಇಂಗ್ಲೆಂಡ್‌ ಕ್ರಿಕೆಟ್‌ ತಂಡ  (India Vs England) ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ ಇದು ಭಾರತಕ್ಕೆ ಸೇಡಿನ ಪಂದ್ಯ.

2022ರಲ್ಲಿಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 10 ವಿಕೆಟ್’ಗಳ ಹೀನಾಯ ಸೋಲು ಕಾಣುವ ಮೂಲಕ ಸೆಮಿಫೈನಲ್’ನಲ್ಲಿ ಮುಗ್ಗರಿಸಿತ್ತು. ಫೈನಲ್ ತಲುಪಿದ್ದ ಇಂಗ್ಲೆಂಡ್ 2ನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. 2 ವರ್ಷಗಳ ಹಿಂದೆ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗೋಲ್ಡನ್ ಚಾನ್ಸ್ ಭಾರತಕ್ಕೆ ಸಿಕ್ಕಿದೆ. ಭಾರತ ಸೇಡು ತೀರಿಸಿಕೊಳ್ಳುತ್ತಾ, ಅಥವಾ ವಿಶ್ವಕಪ್ ಟೂರ್ನಿಗಳಲ್ಲಿ ಎಂದಿನಂತೆ ಮತ್ತೆ ಚೋಕರ್ಸ್ ಆಗುತ್ತಾ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ರೋಚಕ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಅಮೋಘ ಫಾರ್ಮ್’ನಲ್ಲಿರುವ ಭಾರತಕ್ಕೆ ಕಾಡುತ್ತಿರುವ ಏಕೈಕ ಸಮಸ್ಯೆ ಎಂದರೆ ರನ್ ಮಿಷನ್ ವಿರಾಟ್ ಕೊಹ್ಲಿ ಅವರ ವೈಫಲ್ಯ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ದಯವೀಯ ವೈಫಲ್ಯ ಎದುರಿಸಿರುವ ವಿರಾಟ್ ಕೊಹ್ಲಿ ಆಡಿರುವ 6 ಪಂದ್ಯಗಳಲ್ಲಿ 66 ಎಸೆತಗಳನ್ನೆದುರಿಸಿ 11ರ ಸರಾಸರಿಯಲ್ಲಿ ಕೇವಲ 66 ರನ್ ಗಳಿಸಿದ್ದಾರೆ.

India vs England T20 World cup 2024 Semifinal Match Today
Image Credit to Original Source

ಬಾರಿಸಿರುವ ಬೌಂಡರಿ, 2 ಸಿಕ್ಸರ್ 4. ಸೆಮಿಫೈನಲ್’ನಲ್ಲಿ ವಿರಾಟ್ ಫಾರ್ಮ್ ಕಂಡುಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡದಲ್ಲಿ ಟಿ20 ಸ್ಪೆಷಲಿಸ್ಟ್’ಗಳೇ ಇದ್ದು, ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಟ್ರಿನಿಡಾಡ್’ನ ಬ್ರಯಾನ್ ಲಾರಾ ಕ್ರೀಡಾಂಗಣದಲ್ಲಿ ಗುರುವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಅಫ್ಘಾನಿಸ್ತಾನ ಸವಾಲನ್ನು ಎದುರಿಸಲಿದೆ.

ಭಾರತದ ಸೆಮಿಫೈನಲ್ ಹಾದಿ
ಲೀಗ್ ಹಂತ:
ಮೊದಲ ಪಂದ್ಯ: ಐರ್ಲೆಂಡ್ ವಿರುದ್ಧ 8 ವಿಕೆಟ್ ಗೆಲುವು
2ನೇ ಪಂದ್ಯ: ಪಾಕಿಸ್ತಾನ ವಿರುದ್ಧ 6 ರನ್ ಗೆಲುವು
3ನೇ ಪಂದ್ಯ: ಅಮೆರಿಕ ವಿರುದ್ಧ 7 ವಿಕೆಟ್ ಗೆಲುವು
4ನೇ ಪಂದ್ಯ: ಕೆನಡಾ ವಿರುದ್ಧ, ಮಳೆಯಿಂದ ರದ್ದು

ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಕೌಂಟ್‌ಡೌನ್: ಭಾರತಕ್ಕೆ ಕಾಡುತ್ತಿದೆ ನಾಕೌಟ್ ಫೋಬಿಯಾ

ಸೂಪರ್-8 ಹಂತ
ಮೊದಲ ಪಂದ್ಯ: ಅಫ್ಘಾನಿಸ್ತಾನ ವಿರುದ್ಧ 47 ರನ್ ಗೆಲುವು
2ನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ 50 ರನ್ ಗೆಲುವು
3ನೇ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 24 ರನ್ ಗೆಲುವು

ಇದನ್ನೂ ಓದಿ : Louis Kimber : 6,6,6,6,6,4,4,4: ಒಂದೇ ಓವರ್’ನಲ್ಲಿ 43 ರನ್ ಚಚ್ಚಿದ ಲೂಯಿಸ್ ಕಿಂಬರ್

ಇಂಗ್ಲೆಂಡ್ ತಂಡದ ಸೆಮಿಫೈನಲ್ ಹಾದಿ
ಲೀಗ್ ಹಂತ:
ಮೊದಲ ಪಂದ್ಯ: ಐರ್ಲೆಂಡ್ ವಿರುದ್ಧ, ಮಳೆಯಿಂದ ರದ್ದು
2ನೇ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 36 ರನ್ ಸೋಲು
3ನೇ ಪಂದ್ಯ: ಓಮನ್ ವಿರುದ್ಧ 8 ವಿಕೆಟ್ ಗೆಲುವು
4ನೇ ಪಂದ್ಯ: ನಮೀಬಿಯಾ ವಿರುದ್ಧ 41 ರನ್ ಗೆಲುವು

England Cricket Team
Image Credit to Original Source

ಸೂಪರ್-8 ಹಂತ
ಮೊದಲ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಗೆಲುವು
2ನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಸೋಲು
3ನೇ ಪಂದ್ಯ: ಅಮೆರಿಕ ವಿರುದ್ಧ 10 ವಿಕೆಟ್ ಗೆಲುವು

ಭಾರತ V ಇಂಗ್ಲೆಂಡ್ ಸೆಮಿಫೈನಲ್
ಪಂದ್ಯ ಆರಂಭ: ರಾತ್ರಿ 8ಕ್ಕೆ
ಸ್ಥಳ: ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಶಿವಂ ದುಬೆ
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರೀತ್ ಬುಮ್ರಾ
11. ಕುಲ್ದೀಪ್ ಯಾದವ್

India vs England T20 World cup 2024 Semifinal Match Today

Comments are closed.