T20 World Cup 2024 India Vs Pakistan : ಇಂದು ಭಾರತ Vs ಪಾಕ್ ಮುಖಾಮುಖಿ, ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಕಂಪ್ಲೀಟ್ ಡೀಟೇಲ್ಸ್ !

ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಹೈವ್ವೋಲ್ಟೇಜ್ ಪಂದ್ಯದಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ತಂಡಗಳು (India Vs Pakistan) ಮುಖಾಮುಖಿಯಾಗಲಿವೆ.

ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಹೈವ್ವೋಲ್ಟೇಜ್ ಪಂದ್ಯದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು (India Vs Pakistan) ಮುಖಾಮುಖಿಯಾಗಲಿವೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕೆ ನ್ಯೂ ಯಾರ್ಕ್’ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಪಂದ್ಯ ಭಾನುವಾರ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಭಾರತ ಮತ್ತು ಪಾಕ್ ಪಂದ್ಯದ ಮೇಲೆ ನೆಟ್ಟಿದೆ.

India Vs Pakistan ICC t20 World Cup 2024 India Playing XI
Image Credit to Original Source

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು, ಆರು ಬಾರಿ ಭಾರತ ಗೆಲುವು ಸಾಧಿಸಿದ್ದರೆ, 2021ರ ಟೂರ್ನಿಯಲ್ಲಿ ಪಾಕಿಸ್ತಾನ ಗೆದ್ದಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದ್ದರೆ, ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲೇ ಆತಿಥೇಯ ಅಮೆರಿಕ ವಿರುದ್ಧ ಸೋಲು ಕಂಡಿದೆ.

ಇದನ್ನೂ ಓದಿ : Afghanistan Beat New Zealand: ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಬಿಗ್ ಶಾಕ್, ಕಿವೀಸ್ ಕಿವಿ ಹಿಂಡಿದ ಆಫ್ಘನ್ ಪಡೆ !

ಭಾರತ Vs ಪಾಕಿಸ್ತಾನ ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂ, ನ್ಯೂ ಯಾರ್ಕ್.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್

ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಶಿವಂ ದುಬೆ
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಯುಜ್ವೇಂದ್ರ ಚಹಲ್
10. ಜಸ್ಪ್ರೀತ್ ಬುಮ್ರಾ
11. ಮೊಹಮ್ಮದ್ ಸಿರಾಜ್

ಇದನ್ನೂ ಓದಿ : T20 World Cup Harmeet Singh: ಅಮೆರಿಕ ಪರ ಆಡುತ್ತಿದ್ದಾನೆ ಭಾರತದ U-19 ವಿಶ್ವಕಪ್ ಸ್ಟಾರ್ !

India Vs Pakistan ICC t20 World Cup 2024 India Playing XI
Image Credit to Original Source

ಟಿ20 ವಿಶ್ವಕಪ್’ನಲ್ಲಿ ಭಾರತ Vs ಪಾಕಿಸ್ತಾನ ಮುಖಾಮುಖಿ
2007: ಭಾರತಕ್ಕೆ ಜಯ
2007: ಭಾರತಕ್ಕೆ ಜಯ (ಫೈನಲ್)
2012: ಭಾರತಕ್ಕೆ ಜಯ
2014: ಭಾರತಕ್ಕೆ ಜಯ
2016: ಭಾರತಕ್ಕೆ ಜಯ
2021: ಪಾಕಿಸ್ತಾನಕ್ಕೆ ಜಯ
2022: ಭಾರತಕ್ಕೆ ಜಯ

ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!

India Vs Pakistan ICC t20 World Cup 2024 India Playing XI

Comments are closed.