India Vs South Africa World Cup final: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಇಂಚಿಂಚೂ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

T20 World Cup final 2024 : ಭಾರತಕ್ಕೆ ಇದು ಮೂರನೇ ಟಿ20 ವಿಶ್ವಕಪ್ ಫೈನಲ್. 2007ರಲ್ಲಿ ಚಾಂಪಿಯನ್ ಆಗಿದ್ದ ಭಾರತ, 2014ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್'ನಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್'ನಲ್ಲಿ ಕಾಣಿಸಿಕೊಂಡಿದ್ದು, ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.

T20 World Cup final 2024 : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂದು (ಶನಿವಾರ) ಬಾರ್ಬೆಡೋಸ್’ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team) ದಕ್ಷಿಣ ಆಫ್ರಿಕಾ‌ ಕ್ರಿಕೆಟ್‌ (India Vs South Africa )ತಂಡವನ್ನು ಎದುರಿಸಲಿದೆ.

India Vs South Africa ICC t20 World Cup 2024 final Click here for match details of T20 World Cup Final
Image Credit to Original Source

ಭಾರತಕ್ಕೆ ಇದು ಮೂರನೇ ಟಿ20 ವಿಶ್ವಕಪ್ ಫೈನಲ್. 2007ರಲ್ಲಿ ಚಾಂಪಿಯನ್ ಆಗಿದ್ದ ಭಾರತ, 2014ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್’ನಲ್ಲಿ ಕಾಣಿಸಿಕೊಂಡಿದ್ದು, ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಸಕ್ತ ಟೂರ್ನಿಯಲ್ಲಿ ಒಂದೂ ಪಂದ್ಯವನ್ನು ಸೋಲದೆ ಫೈನಲ್ ಪ್ರವೇಶಿಸಿವೆ. ಬಲಾಬಲದಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದ್ದು, ಫೈನಲ್’ನಲ್ಲಿ ರೋಚಕ ಕಾಳಗವನ್ನು ನಿರೀಕ್ಷಿಸಲಾಗಿದೆ. ಆದರೆ ಭಾರತಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವೈಫಲ್ಯವೇ ದೊಡ್ಡ ಹಿನ್ನಡೆ. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಆಡುತ್ತಿರುವ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ 75 ರನ್ ಗಳಿಸಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 9 ರನ್ ಗಳಿಸಿ ಔಟಾಗಿದ್ದರು.

ಟಿ20 ವಿಶ್ವಕಪ್: ಭಾರತ V ದಕ್ಷಿಣ ಆಫ್ರಿಕಾ ಫೈನಲ್
ಪಂದ್ಯ ಆರಂಭ: ರಾತ್ರಿ 8ಕ್ಕೆ
ಸ್ಥಳ: ಕೆನಿಂಗ್ಟನ್ ಓವಲ್ ಮೈದಾನ, ಬ್ರಿಡ್ಜ್’ಟೌನ್; ಬಾರ್ಬೆಡೋಸ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್

India Vs South Africa ICC t20 World Cup 2024 final Click here for match details of T20 World Cup Final
Image Credit to Original Source

ಭಾರತದ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ವಿರಾಟ್ ಕೊಹ್ಲಿ
3. ರಿಷಭ್ ಪಂತ್ (ವಿಕೆಟ್ ಕೀಪರ್)
4. ಸೂರ್ಯಕುಮಾರ್ ಯಾದವ್
5. ಹಾರ್ದಿಕ್ ಪಾಂಡ್ಯ
6. ಶಿವಂ ದುಬೆ
7. ರವೀಂದ್ರ ಜಡೇಜ
8. ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರೀತ್ ಬುಮ್ರಾ
11. ಕುಲ್ದೀಪ್ ಯಾದವ್

ದಕ್ಷಿಣ ಆಫ್ರಿಕಾದ ಸಂಭಾವ್ಯ ಪ್ಲೇಯಿಂಗ್ XI:
1. ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)
2. ರೀಜಾ ಹೆಂಡ್ರಿಕ್ಸ್
3. ಏಡನ್ ಮಾರ್ಕ್ರಮ್ (ನಾಯಕ)
4. ಹೆನ್ರಿಕ್ ಕ್ಲಾಸೆನ್
5. ಡೇವಿಡ್ ಮಿಲ್ಲರ್
6. ಟ್ರಿಸ್ಟನ್ ಸ್ಟಬ್ಸ್
7. ಮಾರ್ಕೋ ಯಾನ್ಸೆನ್
8. ಕಗಿಸೊ ರಬಾಡ
9. ಕೇಶವ್ ಮಹಾರಾಜ್
10. ಆ್ಯನ್ರಿಚ್ ನೋಕ್ಯ
11. ತಬ್ರೈಜ್ ಶಮ್ಸಿ

India Vs South Africa ICC t20 World Cup 2024 final Click here for match details of T20 World Cup Final
Image Credit to Original Source

ಟಿ20 ವಿಶ್ವಕಪ್ ಫೈನಲ್:
ಭಾರತದ ಮ್ಯಾಚ್ ವಿನ್ನರ್’ಗಳು:
-ರೋಹಿತ್ ಶರ್ಮಾ (248 ರನ್)
-ಸೂರ್ಯಕುಮಾರ್ ಯಾದವ್ (196 ರನ್)
-ರಿಷಭ್ ಪಂತ್ (171 ರನ್)
-ಹಾರ್ದಿಕ್ ಪಾಂಡ್ಯ (139 ರನ್, 8 ವಿಕೆಟ್)
-ಜಸ್ಪ್ರೀತ್ ಬುಮ್ರಾ (13 ವಿಕೆಟ್)
-ಕುಲ್ಪೀದ್ ಯಾದವ್ (10 ವಿಕೆಟ್)
-ಅರ್ಷದೀಪ್ ಸಿಂಗ್ (15 ವಿಕೆಟ್)
-ಅಕ್ಷರ್ ಪಟೇಲ್ (8 ವಿಕೆಟ್)

ಇದನ್ನೂ ಓದಿ : India Vs South Africa: ಶೆಫಾಲಿ ದ್ವಿಶತಕ, ಸ್ಮೃತಿ ಶತಕದಬ್ಬರಕ್ಕೆ ಚೆನ್ನೈನಲ್ಲಿ ಕೊಚ್ಚಿ ಹೋದ ದಕ್ಷಿಣ ಆಫ್ರಿಕಾ  

ದಕ್ಷಿಣ ಆಫ್ರಿಕಾದ ಮ್ಯಾಚ್ ವಿನ್ನರ್’ಗಳು:
-ಕ್ವಿಂಟನ್ ಡಿ ಕಾಕ್ (204 ರನ್)
-ಡೇವಿಡ್ ಮಿಲ್ಲರ್ (148 ರನ್)
-ಹೆನ್ರಿಕ್ ಕ್ಲಾಸೆನ್ (138 ರನ್)
-ಟ್ರಿಸ್ಟನ್ ಸ್ಟಬ್ಸ್ (134 ರನ್)
-ಏಡನ್ ಮಾರ್ಕ್ರಮ್ (119 ರನ್)
-ಆ್ಯನ್ರಿಚ್ ನೋಕ್ಯ (13 ವಿಕೆಟ್)
-ಕಗಿಸೊ ರಬಾಡ (12 ವಿಕೆಟ್)
-ತಬ್ರೈಜ್ ಶಮ್ಸಿ (11 ವಿಕೆಟ್)

ಭಾರತದ ಫೈನಲ್ ಹಾದಿ
ಲೀಗ್ ಹಂತ:
ಮೊದಲ ಪಂದ್ಯ: ಐರ್ಲೆಂಡ್ ವಿರುದ್ಧ 8 ವಿಕೆಟ್ ಗೆಲುವು
2ನೇ ಪಂದ್ಯ: ಪಾಕಿಸ್ತಾನ ವಿರುದ್ಧ 6 ರನ್ ಗೆಲುವು
3ನೇ ಪಂದ್ಯ: ಅಮೆರಿಕ ವಿರುದ್ಧ 7 ವಿಕೆಟ್ ಗೆಲುವು
4ನೇ ಪಂದ್ಯ: ಕೆನಡಾ ವಿರುದ್ಧ, ಮಳೆಯಿಂದ ರದ್ದು

ಇದನ್ನೂ ಓದಿ : 1983ರ ವಿಶ್ವವಿಕ್ರಮಕ್ಕೆ 42 ವರ್ಷ, ಎರಡೇ ದಿನಗಳಲ್ಲಿ ಮತ್ತೆ ವಿಶ್ವಕಪ್ ಗೆಲ್ಲುತ್ತಾ ಭಾರತ ?

ಸೂಪರ್-8 ಹಂತ
ಮೊದಲ ಪಂದ್ಯ: ಅಫ್ಘಾನಿಸ್ತಾನ ವಿರುದ್ಧ 47 ರನ್ ಗೆಲುವು
2ನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ 50 ರನ್ ಗೆಲುವು
3ನೇ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ 24 ರನ್ ಗೆಲುವು

ಸೆಮಿಫೈನಲ್
ಇಂಗ್ಲೆಂಡ್ ವಿರುದ್ಧ 68 ರನ್ ಗೆಲುವು

ದಕ್ಷಿಣ ಆಫ್ರಿಕಾ ತಂಡದ ಫೈನಲ್ ಹಾದಿ
ಲೀಗ್ ಹಂತ
ಮೊದಲ ಪಂದ್ಯ: ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ
2ನೇ ಪಂದ್ಯ: ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ ಜಯ
3ನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ 4 ರನ್ ಜಯ
4ನೇ ಪಂದ್ಯ: ನೇಪಾಳ ವಿರುದ್ಧ 2 ರನ್ ಜಯ

ಸೂಪರ್-8 ಹಂತ
ಮೊದಲ ಪಂದ್ಯ: ಅಮೆರಿಕ ವಿರುದ್ಧ 18 ರನ್ ಜಯ
2ನೇ ಪಂದ್ಯ: ಇಂಗ್ಲೆಂಡ್ ವಿರುದ್ಧ 7 ರನ್ ಜಯ
3ನೇ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್ ಜಯ

ಸೆಮಿಫೈನಲ್
ಅಫ್ಘಾನಿಸ್ತಾನ ವಿರುದ್ಧ 9 ವಿಕೆಟ್ ಜಯ

ಇದನ್ನೂ ಓದಿ : Last T20I For Virat & Rohit: ರೋಹಿತ್, ಕೊಹ್ಲಿಗೆ ಕೊನೆಯ ಟಿ20 ಮ್ಯಾಚ್ 

ಭಾರತ Vs ದಕ್ಷಿಣ ಆಫ್ರಿಕಾ: ಟಿ20 ಮುಖಾಮುಖಿ
ಪಂದ್ಯ: 26
ಭಾರತ ಗೆಲುವು: 14
ದಕ್ಷಿಣ ಆಫ್ರಿಕಾ ಗೆಲುವು: 11
ನೋ ರಿಸಲ್ಟ್: 01

ಭಾರತ Vs ದಕ್ಷಿಣ ಆಫ್ರಿಕಾ: ಟಿ20 ವಿಶ್ವಕಪ್ ಮುಖಾಮುಖಿ
ಪಂದ್ಯ: 06
ಭಾರತ ಗೆಲುವು: 04
ದಕ್ಷಿಣ ಆಫ್ರಿಕಾ ಗೆಲುವು: 02

India Vs South Africa ICC t20 World Cup 2024 final: Click here for match details of T20 World Cup Final

Comments are closed.