ಕೊಲಂಬೋ : ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ಇಂದು ಚಾಲನೆ ದೊರೆಯಲಿದೆ. ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಸಂಪೂರ್ಣ ಯುವ ಆಟಗಾರರೇ ತುಂಬಿಕೊಂಡಿದ್ರೆ, ಶ್ರೀಲಂಕಾ ಕೂಡ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದೆ.

ಶ್ರೀಲಂಕಾದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಟಾಸ್ ನಡೆಯಲಿದ್ದು, 3 ಗಂಟೆಗೆ ಪಂದ್ಯಗಳು ಆರಂಭವಾಗಲಿದೆ. ಎರಡೂ ತಂಡಗಳು ಬಲಿಷ್ಠ ವಾಗಿದ್ದು, ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗುತ್ತಿದೆ. ಭಾರತ ತಂಡದಲ್ಲಿ ಶಿಖರ್ ಧವನ್ ಹಾಗೂ ಪ್ರಥ್ವಿಶಾ ಇನ್ನಿಂಗ್ಸ್ ಆರಂಭಿಸೋದು ಖಚಿತ. ಸೂರ್ಯ ಕುಮಾರ್ ಯಾದವ್, ಮನೀಷ್ ಪಾಂಡೆ ಸಂಜುಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಬಲ ಭಾರತ ಕ್ಕಿದೆ. ಅಲ್ಲದೇ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಕುಲದೀಪ್ ಯಾದವ್ ಚಹಾಲ್ ಮೋಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಶ್ರೀಲಂಕಾ ಕೂಡು ಭರ್ಜರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲವನ್ನು ಹೊಂದಿದೆ. ಆವಿಷ್ಕಾ ಫೆರ್ನಾಂಡ ಹಾಗೂ ಪಥೂಮ್ ನಿಸ್ಸಾಂಕ ಆರಂಭಿಕರಾದ್ರೆ ಭನುಕ ರಾಜಪಕ್ಷ, ವನಿಂದ ಹಸರಂಗ, ಧನಂಜಯ ಡಿಸಿಲ್ವಾ, ದಸೂನ್ ಶನಕ ಹಾಗೂ ಮಿನೋದ್ ಭನುಕ ಬ್ಯಾಟಿಂಗ್ ಬಲವಾದ್ರೆ, ಅಕಿಲ ಧನಂಜಯ, ದುಶ್ಮಾಂಥ ಚಮೀರಾ ಹಾಗೂ ಇಸುರು ಉದಾನ ಬೌಲಿಂಗ್‌ನಲ್ಲಿ ಮಿಂಚು ಹರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಎರಡೂ ತಂಡಗಳ ಬಲಾಬಲವನ್ನು ನೋಡಿದ್ರೆ ಭಾರತ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಶಿಖರ್ ಧವನ್ ಹಾಗೂ ಪ್ರಥ್ವಿಶಾ ಎಂದಿನ ಫಾರ್ಮ್ ಮುಂದುವರಿಸಿದ್ರೆ ಭಾರತಕ್ಕೆ ಜಯ ಸುಲಭವಾಗಬಹುದು. ಇನ್ನು ಪ್ರೇಮದಾಸ ಕ್ರೀಡಾಂಗಣ ಮೊದಲು ಬ್ಯಾಟಿಂಗ್ ನಡೆಸುವವರಿಗೆ ಹೆಚ್ಚು ಸಹಕಾರಿ. ಇಲ್ಲಿನ ಪಿಚ್ ಬ್ಯಾಟಿಂಗ್ ಗೆ ಹಚ್ಚು ನೆರವು ನೀಡಲಿದೆಯಾದ್ರೂ ಆರಂಭದಲ್ಲಿ ವೇಗಿಗಳಿಗೆ ಸ್ವಿಂಗ್ ಮಾಡಲು ಸಹಕಾರ ನೀಡಲಿದೆ. ಅಲ್ಲದೇ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳಿಗೆ ಉಪಯೋಗಕಾರಿ. ಆದರೆ ಬ್ಯಾಟ್ಸ್‌ಮನ್ ಗಳು ಜಾಣ್ಮೆಯಿಂದ ಬ್ಯಾಟಿಂಗ್ ಪ್ರದರ್ಶನ ನೀಡಿದ್ರೆ ಬೃಹತ್ ಮೊತ್ತ ಕಲೆಹಾಕಬಹುದಾಗಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 131 ಏಕದಿನ ಪಂದ್ಯಗಳು ನಡೆದಿದ್ರೆ, ಮೊದಲು ಬ್ಯಾಟಿಂಗ್ ನಡೆಸಿದ ತಂಡ 71 ಬಾರಿ ಹಾಗೂ ಎರಡನೇ ಬ್ಯಾಟಿಂಗ್ ನಡೆಸಿದ ತಂಡ 50 ಬಾರಿ ಗೆಲುವನ್ನು ಕಂಡಿದೆ. ಸರಾಸರಿ 235ರನ್ ಗಳಿಸಲು ಶಕ್ತವಾಗಿದ್ದು, ಭಾರತ ತಂಡ ಶ್ರೀಲಂಕಾ ವಿರುದ್ದ ಪಂದ್ಯದಲ್ಲಿ 5 ವಿಕೆಟ್ ಕಳೆದುಕೊಂಡು 375 ರನ್ ಬಾರಿಸಿದ್ದು ಅತ್ಯಧಿಕ ರನ ಆಗಿದ್ದರೆ, ಶ್ರೀಲಂಕಾ ವಿರುದ್ದ ನೆದರ್ ಲ್ಯಾಂಡ್ 86 ರನ್ ಗಳಿಗೆ ಸರ್ವಪನತನ ಕಂಡಿದ್ದು ಕನಿಷ್ಠ ಮೊತ್ತವಾಗಿದೆ.