ಕೊಲಂಬೋ : ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಕೊರೊನಾ ಶಾಕ್ ಕೊಟ್ಟಿದೆ : ಟೀಂ ಇಂಡಿಯಾದ ಆಲ್‌ರೌಂಡರ್ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ದೃಢಪಟ್ಟಭಾರತ ಶ್ರೀಲಂಕಾ ನಡುವಿನ 2ನೇ ದಿನ ಟಿ20 ಪಂದ್ಯವಳಿಯ ಎರಡನೇ ಪಂದ್ಯವನ್ನು ಮೂದೂಡಿಕೆ ಮಾಡಲಾಗಿದೆ.
ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃನಾಲ್ ಪಾಂಡ್ಯ ಅವರನ್ನು ಕೊರೊನಾ ಪಾಸಿಟಿವ್ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯವನ್ನು ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ಎಲ್ಲಾ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಎಲ್ಲರ ವರದಿ ಬಂದ ನಂತರವೇ ಪಂದ್ಯದ ಮುಂದಿನ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.
ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡದ ಆಟಗಾರರು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ. ಏಕದಿನ ಸರಣಿಯನ್ನು ಜಯಿಸಿದ್ದ ಭಾರತ ತಂಡ ಇದೀಗ ಟಿ20 ಸರಣಿಯಲ್ಲಿಯೂ ಅದ್ಬುತ ಫಾರ್ಮ್ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಭಾರತ ಗೆಲುವನ್ನು ಕಂಡಿತ್ತು. ಅಲ್ಲದೇ ಕೃನಾಲ್ ಪಾಂಡ್ಯ ಮೊದಲ ಪಂದ್ಯದಲ್ಲಿಯೂ ಭಾಗವಹಿಸಿದ್ದರು.