ಭಾನುವಾರ, ಏಪ್ರಿಲ್ 27, 2025
HomeSportsCricketIndia Vs USA: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಕೆಟ್ ಪಡೆದ ಅಮೆರಿಕ ಸಾಫ್ಟ್’ವೇರ್ ಇಂಜಿನಿಯರ್!

India Vs USA: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಕೆಟ್ ಪಡೆದ ಅಮೆರಿಕ ಸಾಫ್ಟ್’ವೇರ್ ಇಂಜಿನಿಯರ್!

- Advertisement -

Saurabh Netravalkar : ನ್ಯೂ ಯಾರ್ಕ್: ಅಮೆರಿಕ ತಂಡವನ್ನು 7 ವಿಕೆಟ್’ಗಳಿಂದ ಮಣಿಸಿದ ಟೀಮ್ ಇಂಡಿಯಾ (Indina Cricket Team)  ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಸತತ 3ನೇ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ನ್ಯೂ ಯಾರ್ಕ್’ನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಬಳಗ ಆತಿಥೇಯ ಅಮೆರಿಕ ವಿರುದ್ಧ ಸುಲಭ ಜಯ ದಾಖಲಿಸಿತು.

India Vs USA Virat Kohli Rohit Sharma Wicket American Software Engineer Saurabh Netravalkar
Image Credit to Original Source

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಲ್ಪ ಮೊತ್ತಕ್ಕೆ ಔಟಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಎಡವಿದರು. ವಿರಾಟ್ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರೆ, ನಾಯಕ ರೋಹಿತ್ ಶರ್ಮಾ ಆರು ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿ ಔಟಾದರು.

ಇದನ್ನೂ ಓದಿ : ICC Champions Trophy 2025 : ಮುಂದಿನ ವರ್ಷ ಪಾಕಿಸ್ತಾನದಲ್ಲಿ ಮಿನಿ ವಿಶ್ವಕಪ್: ಭಾರತದ ಎಲ್ಲಾ ಪಂದ್ಯಗಳಿಗೆ ಲಾಹೋರ್ ಆತಿಥ್ಯ !

ಅಂದ ಹಾಗೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದದ್ದು ಅಮೆರಿಕ ಪರ ಆಡುತ್ತಿರುವ ಭಾರತೀಯ ಮೂಲದ ಒಬ್ಬ ಸಾಫ್ಟ್’ವೇರ್ ಇಂಜಿನಿಯರ್. ಹೆಸರು ಸೌರಭ್ ನೇತ್ರವಲ್ಕರ್ (Saurabh Netravalkar) ಮುಂಬೈ ಮೂಲದ ನೇತ್ರವಲ್ಕರ್ ಭಾರತದ ಇನ್ನಿಂಗ್ಸ್’ನ 2ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ, ತಮ್ಮ ಎರಡನೇ ಓವರ್’ನ ಎರಡನೇ ಎಸೆತದಲ್ಲಿ ತಮ್ಮ ಮಾಜಿ ಜೊತೆಗಾರ ರೋಹಿತ್ ಶರ್ಮಾ ಅವರನ್ನು ಪೆವಿಲಿಯನ್’ ಗಟ್ಟಿದರು.

India Vs USA Virat Kohli Rohit Sharma Wicket American Software Engineer Saurabh Netravalkar
Image Credit to Original Source

32 ವರ್ಷದ ಎಡಗೈ ಮಧ್ಯಮ ವೇಗದ ಬೌಲರ್ ಸೌರಭ್ ನೇತ್ರವಲ್ಕರ್ ಮುಂಬೈನವರು. 2013ರಲ್ಲಿ ಮುಂಬೈ ಪರ ದೇಶೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ನೇತ್ರವಲ್ಕರ್, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೃತ್ತಿಜೀವನದ ಏಕೈಕ ರಣಜಿ ಪಂದ್ಯವಾಡಿದ್ದರು. ನಂತರ ಮುಂಬೈ ತಂಡದಲ್ಲಿ ಅವಕಾಶಗಳ ಕೊರತೆಯ ಕಾರಣ ಕ್ರಿಕೆಟ್’ನಿಂದ ದೂರವಾಗಿ ಇಂಜಿನಿಯರಿಂಗ್ ವೃತ್ತಿಜೀವನದ ಕಡೆ ಗಮನ ಹರಿಸಿದ್ದ ನೇತ್ರವಲ್ಕರ್ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ಬಂದಿದ್ದರು.

ಇದನ್ನೂ ಓದಿ : Jasprit Bumrah Net Worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !

ಅಲ್ಲೇ ಉದ್ಯೋಗ ಮಾಡುತ್ತಾ ಕ್ರಿಕೆಟ್ ಮುಂದುವರಿಸಿದ್ದ ಮುಂಬೈಕರ್, 2019ರಲ್ಲಿ ಅಮೆರಿಕ ಪರ ಚೊಚ್ಚಲ ಟಿ20 ಅಂತರಾಷ್ಟ್ರೀಯ ಪಂದ್ಯವಾಡಿದ್ದರು. ಐದು ವರ್ಷಗಳ ನಂತರ ಇದೀಗ ಅಮೆರಿಕ ಪರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಸೌರಭ್ ನೇತ್ರವಲ್ಕರ್ ಭಾರತ ವಿರುದ್ಧದ ಪಂದ್ಯದಲ್ಲಿ ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಭಾರತ ವಿರುದ್ಧದ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

India Vs USA Virat Kohli Rohit Sharma Wicket American Software Engineer Saurabh Netravalkar
Image Credit to Original Source

ಟಿ20 ವಿಶ್ವಕಪ್’ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಸೌರಭ್ ನೇತ್ರವಲ್ಕರ್ 4 ವಿಕೆಟ್ ಪಡೆದಿದ್ದಾರೆ. ಅಮೆರಿಕ ಪರ ಇದುವರೆಗೆ ಒಟ್ಟು 30 ಟಿ20 ಪಂದ್ಯಗಳನ್ನಾಡಿರುವ ನೇತ್ರವಲ್ಕರ್ 31 ವಿಕೆಟ್ ಪಡೆದಿದ್ದಾರೆ. ಅಮೆರಿಕ ಪರ 48 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸೌರಭ್ ನೇತ್ರವಲ್ಕರ್ 73 ವಿಕೆಟ್’ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ : Exclusive: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಯರೇ ಗೌಡ ಕೋಚ್, ಪಿ.ವಿ ಶಶಿಕಾಂತ್‌ಗೆ ಗೇಟ್‌ಪಾಸ್!

India Vs USA Virat Kohli Rohit Sharma Wicket American Software Engineer Saurabh Netravalkar

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular