IND vs WI T20 : ಮೊದಲ ಟಿ20ಯಲ್ಲಿ ಫಿನಿಷರ್ ಡಿಕೆ ಅಬ್ಬರ ; ಕೆರಿಬಿಯನ್ನರನ್ನು ಹೊಸಕಿ ಹಾಕಿದ ಟೀಮ್ ಇಂಡಿಯಾ

ಟ್ರಿನಿಡಾಡ್: ( IND vs WI T20) 38ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾದಲ್ಲಿ ಫಿನಿಷರ್ ಪಾತ್ರವನ್ನು ದಿನೇಶ್ ಕಾರ್ತಿಕ್ (Dinesh Karthik) ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್’ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ29 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 41 ರನ್ ಚಚ್ಚಿ ಬಿಸಾಕಿದ್ದಾರೆ.

ಡಿಕೆ ಅಬ್ಬರದ ಪರಿಣಾಮ ಭಾರತ ತಂಡದ ಪ್ರಥಮ ಟಿ20 ಪಂದ್ಯದಲ್ಲಿ ವಿಂಡೀಸ್ ವಿರುದ್ಧ 68 ರನ್’ಗಳ ಭರ್ಜರಿ ಗೆಲುವು ದಾಖಲಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

https://twitter.com/imAmanParihar/status/1553063658971926528?s=20&t=Q6jPrPpe9UQ0iPkjVyhfhw

ಟಾಸ್ ಸೋತು ಮೊದಲು ಬ್ಯಾಟಿಂಗ್’ಗೆ ಇಳಿದ ಭಾರತ ಪರ ನಾಯಕ ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಆರಂಭಿಸಿದ್ರು. ರೋಹಿತ್ 44 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಆಕರ್ಷಕ 64 ರನ್ ಸಿಡಿಸಿ ಔಟಾದ್ರೆ, ಸೂರ್ಯ ಕುಮಾರ್ ಯಾದವ್ 24 ರನ್ ಗಳಿಸಿದ್ರು. ಆದ್ರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಭಾರತ ಕುಸಿತ ಅನುಭವಿಸಿತು. ಆದ್ರೆ ಸ್ಲಾಗ್ ಓವರ್’ಗಳಲ್ಲಿ ಸಿಡಿಲಬ್ಬರದ ಆಟವಾಡಿದ ದಿನೇಶ್ ಕಾರ್ತಿಕ್ ಕೆರಿಬಿಯನ್ನರ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದ್ರು. ಕೇವಲ 19 ಎಸೆತಗಳ ಮುಂದೆ 4 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ ಅಜೇಯ 41 ರನ್ ಸಿಡಿಸಿ ಭಾರತ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಲು ಕಾರಣರಾದರು. 16ನೇ ಓವರ್”ನಲ್ಲಿ 138 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತ ಕೊನೆಯ 4 ಓವರ್’ಗಳಲ್ಲಿ 52 ರನ್ ಕಲೆ ಹಾಕಿತು. ಇದ್ರ ರೂವಾರಿ ದಿನೇಶ್ ಕಾರ್ತಿಕ್.

ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಭಾರತದ ಸಂಘಟಿದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಲಷ್ಟೇ ಶಕ್ತವಾಯ್ತು. 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಸೋಮವಾರ ಸೇಂಟ್ ಕಿಟ್ಸ್’ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : Sanju Samson Replace Rahul : ಕೆ.ಎಲ್ ರಾಹುಲ್ ಬದಲು ಸಂಜು ಸ್ಯಾಮ್ಸನ್’ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ

ಇದನ್ನೂ ಓದಿ : Abhimanyu Mithun : ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಧೂಳೆಬ್ಬಿಸಲಿದ್ದಾನೆ ಪೀಣ್ಯ ಎಕ್ಸ್‌ಪ್ರೆಸ್

India Vs West Indies T20 IND cruise to 68-run win over WI IND vs WI T20

Comments are closed.