ಬುಧವಾರ, ಏಪ್ರಿಲ್ 30, 2025
HomeSportsCricketKL Rahul Zimbabwe player : ಕೆ.ಎಲ್ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೀಮ್ ಇಂಡಿಯಾ...

KL Rahul Zimbabwe player : ಕೆ.ಎಲ್ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಬಂದ ಜಿಂಬಾಬ್ವೆ ಆಟಗಾರ

- Advertisement -

ಹರಾರೆ: (KL Rahul Zimbabwe player) ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಕಂಬ್ಯಾಕ್ ಸರಣಿ. ಪುನರಾಗಮನದ ಸರಣಿಯಲ್ಲೇ ಟೀಮ್ ಇಂಡಿಯಾ ನಾಯಕತ್ವ ವಹಿಸಿದ ಕೆ.ಎಲ್ ರಾಹುಲ್ ಭಾರತಕ್ಕೆ ಸರಣಿ ಗೆದ್ದುಕೊಟ್ಟಿದ್ದಾರೆ.

ಜಿಂಬಾಬ್ವೆಯಲ್ಲಿ (India Vs Zimbabwe ODI Series) ಒಂದು ಕಡೆ ಸರಣಿ ಗೆಲುವಿನ ಸಂಭ್ರಮವಾದ್ರೆ, ಮತ್ತೊಂದ್ಕಡೆ ರಾಹುಲ್ ಅವರಿಗೆ ಅಚ್ಚರಿ. ಅಚ್ಚರಿ ಯಾಕಂದ್ರೆ ಜಿಂಬಾಬ್ವೆ ಆಟಗಾರನೊಬ್ಬ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ನೇರವಾಗಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್’ಗೆ ಬಂದು ಬಿಟ್ಟಿದ್ದಾನೆ. ಈ ಘಟನೆ ನಡೆದದ್ದು ಶನಿವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದ ನಂತರ. ಆ ಆಟಗಾರನ ಹೆಸರು ಇನ್ನೋಸೆಂಟ್ ಕಾಯಾ.

https://twitter.com/KlrSunshine/status/1561036192740966400?s=20&t=Tp28anuq3RQc5utFZX9GPg

ಕೆ.ಎಲ್ ರಾಹುಲ್ ಅವರನ್ನು ಭೇಟಿ ಮಾಡಬೇಕೆಂಬುದು ಇನ್ನೋಸೆಂಟ್ ಕಾಯಾ ಅವರ ಕನಸಾಗಿತ್ತು. ಆ ಕನಸನ್ನು 2ನೇ ಏಕದಿನ ಪಂದ್ಯದ ನಂತರ ಈಡೇರಿಸಿಕೊಂಡಿದ್ದಾರೆ.

https://twitter.com/mt_seen01/status/1561054321348730880?s=20&t=Tp28anuq3RQc5utFZX9GPg

ಜಿಂಬಾಬ್ವೆ ತಂಡದ ಆರಂಭಿಕ ಬ್ಯಾಟ್ಸ್’ಮನ್ ಇನ್ನೋಸೆಂಟ್ ಕಾಯಾ, ಕೆ.ಎಲ್ ರಾಹುಲ್ ಅವರ ದೊಡ್ಡ ಅಭಿಮಾನಿ. ಈ ಅಭಿಮಾನ ಶುರುವಾಗಿದ್ದು ಹೇಗಂದ್ರೆ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಪರ ಶತಕ ಬಾರಿಸಿದಾಗ ಎರಡೂ ಕಿವಿಗಳನ್ನು ಮುಚ್ಚಿ ವಿಭಿನ್ನ ರೀತಿಯಲ್ಲಿ ಶತಕದ ಸಂಭ್ರಮವನ್ನಾಚರಿಸುತ್ತಾರೆ. ಇದನ್ನು Shut the Mouth ಸೆಲೆಬ್ರೇಷನ್ ಅಂತ ಕರೀತಾರೆ. ರಾಹುಲ್ ಸಾಕಷ್ಟು ಬಾರಿ ಈ ರೀತಿ ಸಂಭ್ರಮಿಸಿದ್ದಾರೆ. ಜಿಂಬಾಬ್ವೆ ತಂಡದ ಆಟಗಾರ ಇನ್ನೋಸೆಂಟ್ ಕಾಯಾ ಕೂಡ ರಾಹುಲ್ ಶೈಲಿಯನ್ನೇ ಅನುಕರಿಸುತ್ತಿದ್ದಾರೆ. ಕಳೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ವೇಳೆ ಶತಕ ಬಾರಿಸಿದಾಗ ರಾಹುಲ್ ಅವರಂತೆಯೇ ಇನ್ನೋಸೆಂಟ್ ಕಾಯಾ ಸಂಭ್ರಮಿಸಿದ್ದರು.

ಅಷ್ಟೇ ಅಲ್ಲ, ಕೆ.ಎಲ್ ರಾಹುಲ್ ನನ್ನ ನೆಚ್ಚಿನ ಆಟಗಾರ, ನಾನು ರಾಹುಲ್ ಅವರ ಅಭಿಯಾನಿಯಾಗಿರುವ ಕಾರಣ, ಅವರಂತೆಯೇ ಶತಕವನ್ನು ಸಂಭ್ರಮಿಸುತ್ತೇನೆ ಎಂದಿದ್ದರು.

ಭಾರತ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಇನ್ನೋಸೆಂಟ್ ಕಾಯಾ 2 ಪಂದ್ಯಗಳಿಂದ ಒಟ್ಟು ಕೇವಲ 20 ರನ್ ಗಳಿಸಿದ್ದರು.

ಇದನ್ನೂ ಓದಿ : RCB coach Sridharan Sriram : ಆರ್‌ಸಿಬಿ ಮಾಜಿ ಕೋಚ್ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸೇರ್ಪಡೆ

ಇದನ್ನೂ ಓದಿ : Jasprit Bumrah : ಬೆಂಗಳೂರಲ್ಲಿ ಜಸ್’ಪ್ರೀತ್ ಬುಮ್ರಾ, ಆತ್ಮೀಯ ಗೆಳೆಯನನ್ನು ಭೇಟಿ ಮಾಡಿದ ಕರ್ನಾಟಕ ಕ್ರಿಕೆಟರ್

India Vs Zimbabwe ODI Series Zimbabwe player came to Team India dressing room to click photo with KL Rahul

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular