Minister Sunil Kumar : ಇಂದಿನ ಯುವಪೀಳಿಗೆ ಕಲಿತುಕೊಳ್ಳುವ ಒಂದು ಗುಣವೂ ಸಿದ್ದರಾಮಯ್ಯರಲ್ಲಿಲ್ಲ : ಸಚಿವ ಸುನಿಲ್​ ಕುಮಾರ್ ವ್ಯಂಗ್ಯ

ಕಲಬುರಗಿ : Minister Sunil Kumar : ಮಾಂಸ ತಿಂದು ಸಿದ್ದರಾಮಯ್ಯ ಕೃಷ್ಣ ಮಂದಿರಕ್ಕೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಇಂಧನ ಸಚಿವ ಸುನಿಲ್​ ಕುಮಾರ್​ ಸಿದ್ದರಾಮಯ್ಯರನ್ನು ನೋಡಿ ಕಲಿಯುವಂತದ್ದು ಏನೂ ಇಲ್ಲ. ಈಗಿನ ಯುವ ರಾಜಕಾರಣಿಗಳಿಗೆ ಆದರ್ಶವಾಗುವ ಗುಣ ಸಿದ್ದರಾಮಯ್ಯ ಬಳಿಯಲ್ಲಿ ಒಂದೂ ಇಲ್ಲ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ .


ಕಲಬುರಗಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರ ನಡವಳಿಕೆಗಳನ್ನು ನೋಡಿದರೆ ಅವರೊಬ್ಬ ಮುತ್ಸದ್ಧಿ ರಾಜಕಾರಣಿ ಎಂದೇ ಅನಿಸುವುದಿಲ್ಲ. ಪ್ರತಿ ಬಾರಿಯೂ ಸಮಾಜದಲ್ಲಿ ವಿಷಬೀಜವನ್ನು ಬಿತ್ತುವ ಕೆಲಸ ಮಾಡಿದ್ದಾರೆ. ಸುಳ್ಳು ಮಾತನಾಡುವುದು, ವಿವಾದಾತ್ಮಕ ಹೇಳಿಕೆ ನೀಡವುದೇ ಸಿದ್ದರಾಮಯ್ಯರ ಕೆಲಸವಾಗಿದೆ. ಇಂದಿನ ಯುವ ರಾಜಕಾರಣಿಗಳು ಸಿದ್ದರಾಮಯ್ಯರನ್ನು ನೋಡಿ ಅಳವಡಿಸಿಕೊಳ್ಳಬೇಕಾದ ಒಂದೇ ಒಂದು ಗುಣ ಅವರಲ್ಲಿ ಇಲ್ಲ. ಹೀಗಾಗಿ ರಾಜ್ಯದ ಯುವ ಸಮಾಜ ಇವರನ್ನು ಬೆಂಬಲಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.


ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ನಾನೇನೂ ಹೇಳಲಾರೆ. ಮಾಂಸ ಸೇವಿಸಿ ದೇವರ ದರ್ಶನ ಪಡೆಯುವುದು ಅದರು ಅವರವರಿಗೆ ಬಿಟ್ಟ ವಿಚಾರ. ಅವರವರ ಭಾವನೆಗಳಿಗೆ ತಕ್ಕಂತೆ ಅವರು ನಡೆದುಕೊಳ್ತಾರೆ. ಸಿದ್ದರಾಮಯ್ಯ ಯಾವ ರೀತಿಯವರು ಅನ್ನೋದು ನನಗೆ ತಿಳಿದಿಲ್ಲ ಎಂದು ಸಚಿವ ಸುನೀಲ್​ ಕುಮಾರ್​ ಹೇಳಿದರು .


ಕೆಪಿಟಿಸಿಎಲ್​ನಲ್ಲಿ ಅಕ್ರಮ ನಡೆದ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಇಂತಹ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತವೆ ಅಂದರೆ ಅದನ್ನು ಸಹಿಸಿಕೊಳ್ಳುವ ಮಾತೇ ಇಲ್ಲ. ನೇಮಕಾತಿ ಮಾಡುವುದು ರಾಜ್ಯ ಸರ್ಕಾರ,ಆದರೆ ಪರೀಕ್ಷೆಯನ್ನು ನಡೆಸಿದ್ದು ಕೆ.ಇ.ಎ. ಮೇಲ್ನೋಟಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ. ಆದರೆ ಒಂದು ವೇಳೆ ಈ ರೀತಿ ಆಗಿದ್ದರೆ ಅದನ್ನು ಮನ್ನಿಸುವ ಮಾತೇ ಇಲ್ಲ ಎಂದು ಹೇಳಿದರು.


ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿಯೂ ಮಾತನಾಡಿದ ಸುನೀಲ್​ ಕುಮಾರ್​, ವಿಧಾನಸಭೆಯಲ್ಲಿ ಹೇಗೆ ಸ್ಫರ್ಧೆ ಮಾಡಬೇಕು ಎಂಬುದೂ ತಿಳಿದಿರದ ಸಾಮಾನ್ಯ ಕಾರ್ಯಕರ್ತ ನಾನಾಗಿದ್ದೆ, ಪಕ್ಷದ ಹಿರಿಯರ ಆಣತಿಯಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಪಕ್ಷ ನನಗೆ ಯಾವ ಜವಾಬ್ದಾರಿ ನೀಡಿದರೂ ನಾನಾದಕ್ಕೆ ಸಿದ್ಧ . ಆದರೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಎನಿಸುವ ಹಲವು ನಾಯಕರು ಇದ್ದಾರೆ, ಮುಂದಿನ ಚುನಾವಣೆಯಲ್ಲಿ 130 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ಇದಕ್ಕೆ ಬೇಕಾದ ಎಲ್ಲಾ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಇದನ್ನು ಓದಿ : Puneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ : ಶಿವಣ್ಣ,ಆಶ್ವಿನಿ ಕಾರ್ಯಕ್ಕೆ ಶ್ಲಾಘನೆ

ಇದನ್ನೂ ಓದಿ : Muslim female students : ಹಿಜಾಬ್​ಗೆ ಅನುಮತಿ ಕೊಡದ ಕಾಲೇಜುಗಳಿಂದ ಟಿಸಿ ಹಿಂಪಡೆದ ಮುಸ್ಲಿಂ ವಿದ್ಯಾರ್ಥಿನಿಯರು

Minister Sunil Kumar outraged against Siddaramaiah

Comments are closed.