Women’s Cricket: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ Vs ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ

India Women Vs South Africa Women : ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡ (Indian Womens Cricket Team)  ಇಂದಿನಿಂದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ

India Women Vs South Africa Women : ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡ (Indian Womens Cricket Team)  ಇಂದಿನಿಂದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ (India Women Vs South Africa Women). ಸರಣಿಯ ಮೊದಲ ಪಂದ್ಯ ಭಾನುವಾರ (ಜೂನ್ 16) ನಡೆಯಲಿದ್ದು, ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.

India Women Vs South Africa Women cricket series fist ODI at Chinnaswamy Stadium Bangalore
Image Credit to Original Source

2ನೇ ಪಂದ್ಯ ಜೂನ್ 19 ಮತ್ತು 3ನೇ ಪಂದ್ಯ ಜೂನ್ 23ಕ್ಕೆ ನಡೆಯಲಿದೆ. ಏಕದಿನ ಸರಣಿಯ ನಂತರ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಏಕೈಕ ಟೆಸ್ಟ್ ಹಾಗೂ 2 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಟೆಸ್ಟ್ ಹಾಗೂ ಟಿ20 ಸರಣಿಗೆ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಭಾರತ Vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ
ಜೂನ್ 16: ಮೊದಲ ಏಕದಿನ ಪಂದ್ಯ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)
ಜೂನ್ 19: ಎರಡನೇ ಏಕದಿನ ಪಂದ್ಯ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)
ಜೂನ್ 23: ಮೂರನೇ ಏಕದಿನ ಪಂದ್ಯ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)

ಭಾರತ Vs ದಕ್ಷಿಣ ಆಫ್ರಿಕಾ ಏಕೈಕ ಟೆಸ್ಟ್ ಪಂದ್ಯ
ಜೂನ್ 28-ಜುಲೈ 1: ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ

ಇದನ್ನೂ ಓದಿ : USA Cricket Team : ಟಿ20 ವಿಶ್ವಕಪ್’ನಿಂದ ಪಾಕ್ ಔಟ್, ಸೂಪರ್-8 ತಲುಪಿ ಇತಿಹಾಸ ನಿರ್ಮಿಸಿದ ಅಮೆರಿಕ

ಭಾರತ Vs ದಕ್ಷಿಣ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ
ಜುಲೈ 05: ಮೊದಲ ಟಿ20 ಪಂದ್ಯ (ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ)
ಜುಲೈ 07: ಎರಡನೇ ಟಿ20 ಪಂದ್ಯ (ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ)
ಜುಲೈ 09: ಮೂರನೇ ಟಿ20 ಪಂದ್ಯ (ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ)

India Women Vs South Africa Women cricket series fist ODI at Chinnaswamy Stadium Bangalore
Image Credit to Original Source

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಮಹಿಳಾ ತಂಡ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗ್ಸ್, ದೀಪ್ತಿ ಶರ್ಮಾ, ರಿಚಾ ಘೋಶ್ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ಆಶಾ ಶೋಭನ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಸೈಕಾ ಇಶಾಖ್, ಪೂಜಾ ವಸ್ತ್ರಕಾರ್, ರೇಣುಕಾ ಸಿಂಗ್, ಪ್ರಿಯಾ ಪುನಿಯಾ, ಅರುಂಧತಿ ರೆಡ್ಡಿ.

ಇದನ್ನೂ ಓದಿ : J Arun Kumar USA : ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಮಹಿಳಾ ತಂಡ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗ್ಸ್, ದೀಪ್ತಿ ಶರ್ಮಾ, ರಿಚಾ ಘೋಶ್ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ಆಶಾ ಶೋಭನ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಸೈಕಾ ಇಶಾಖ್, ಪೂಜಾ ವಸ್ತ್ರಕಾರ್, ರೇಣುಕಾ ಸಿಂಗ್, ಅರುಂಧತಿ ರೆಡ್ಡಿ, ಸಜಾನ ಸಜೀವನ್, ಅಮನ್ಜೋತ್ ಕೌರ್.

ಇದನ್ನೂ ಓದಿ : T20 World Cup Super-8: ಸೂಪರ್-8ನಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಇವರೇ !

ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಮಹಿಳಾ ತಂಡ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗ್ಸ್, ದೀಪ್ತಿ ಶರ್ಮಾ, ರಿಚಾ ಘೋಶ್ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಶುಭಾ ಸತೀಶ್, ಸೈಕಾ ಇಶಾಖ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕಾರ್, ರೇಣುಕಾ ಸಿಂಗ್, ಪ್ರಿಯಾ ಪುನಿಯಾ, ಅರುಂಧತಿ ರೆಡ್ಡಿ, ಮೇಘನಾ ಸಿಂಗ್.

India Women Vs South Africa Women cricket series fist ODI at Chinnaswamy Stadium Bangalore

Comments are closed.