Women’s test: ಹರಿಣ ಬೇಟೆಗೆ ರೆಡಿಯಾದ ಭಾರತದ ವನಿತೆಯರು, ಮಿಂಚುತ್ತಾಳಾ ಮೈಸೂರು ಹುಡುಗಿ ?

ಚೆನ್ನೈ: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಗಳ ಮಹಿಳಾ ಟೆಸ್ಟ್ ಪಂದ್ಯ (India Women Vs South Africa Women test match) ಇಂದು  (ಶುಕ್ರವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಉಭಯ ತಂಡಗಳು ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದು, ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಟೆಸ್ಟ್ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ.

ಚೆನ್ನೈ: ಭಾರತ ಮಹಿಳಾ ಕ್ರಿಕೆಟ್‌ ತಂಡ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಗಳ ಮಹಿಳಾ ಟೆಸ್ಟ್ ಪಂದ್ಯ (India Women Vs South Africa Women test match) ಇಂದು  (ಶುಕ್ರವಾರ) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಉಭಯ ತಂಡಗಳು ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದು, ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಟೆಸ್ಟ್ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ.

India Women Vs South Africa Women test match Shining Mysore girl shubha satheesh
Image Credit : Shuba Satheesh Instagram

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಮಹಿಳಾ ತಂಡ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಟೆಸ್ಟ್ ಪಂದ್ಯ ಗೆಲ್ಲುವತ್ತ ಭಾರತೀಯ ವನಿತೆಯರು ಕಣ್ಣಿಟ್ಟಿದ್ದಾರೆ. ಏಕದಿನ ಸರಣಿಯಲ್ಲಿ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧನ ಎರಡು ಶತಕಗಳ ಸಹಿತ 3 ಪಂದ್ಯಗಳಲ್ಲಿ 343 ರನ್ ಕಲೆ ಹಾಕಿದ್ದರು.

ಮೊದಲ ಪಂದ್ಯದಲ್ಲಿ 117 ರನ್ ಗಳಿಸಿದ್ದ ಸ್ಮೃತಿ, 2ನೇ ಪಂದ್ಯದಲ್ಲಿ ಅಮೋಘ 136 ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ 90 ರನ್ನಿಗೆ ಔಟಾಗಿ ಹ್ಯಾಟ್ರಿಕ್ ಶತಕದಿಂದ ವಂಚಿತರಾಗಿದ್ದರು. ಅದ್ಭುತ ಫಾರ್ಮ್’ನಲ್ಲಿರುವ ಸ್ಮೃತಿ ಮಂಧನ ಟೆಸ್ಟ್ ಪಂದ್ಯದಲ್ಲೂ ಅಬ್ಬರಿಸುವ ನಿರೀಕ್ಷೆಯಿದೆ. ಕರ್ನಾಟಕದ ಇಬ್ಬರು ಆಟಗಾರ್ತಿಯರು ಭಾರತ ಟೆಸ್ಟ್ ತಂಡದಲ್ಲಿದ್ದಾರೆ.

ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ

ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಮತ್ತು ಮೈಸೂರಿನ ಟಾಪ್ ಆರ್ಡರ್ ಬ್ಯಾಟರ್ ಶುಭಾ ಸತೀಶ್ ಟೀಮ್ ಇಂಡಿಯಾದಲ್ಲಿದ್ದಾರೆ. ಬಲಗೈ ಬ್ಯಾಟರ್ ಶುಭಾ ಸತೀಶ್ ಕಳೆದ ವರ್ಷದ ಡಿಸೆಂಬರ್’ನಲ್ಲಿ ಮುಂಬೈನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಟೆಸ್ಟ್ ಇನ್ನಿಂಗ್ಸ್’ನಲ್ಲೇ ಮಿಂಚಿದ್ದ ಶುಭಾ ಸತೀಶ್ 76 ಎಸೆತಗಳಲ್ಲಿ 69 ರನ್ ಗಳಿಸಿ ಗಮನ ಸೆಳೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧವೂ ಮೈಸೂರು ಹುಡುಗಿಯಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ.

India Women Vs South Africa Women test match Shining Mysore girl shubha satheesh
Image Credit : Shuba Satheesh Instagram

ಭಾರತ Vs ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯ
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ಎಂ.ಎ ಚಿದಂಬರಂ ಕ್ರೀಡಾಂಗಣ, ಚೆಪಾಕ್; ಚೆನ್ನೈ
ನೇರಪ್ರಸಾರ: ಸ್ಪೋರ್ಟ್ಸ್ 18
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ

ಇದನ್ನೂ ಓದಿ : Louis Kimber : 6,6,6,6,6,4,4,4: ಒಂದೇ ಓವರ್’ನಲ್ಲಿ 43 ರನ್ ಚಚ್ಚಿದ ಲೂಯಿಸ್ ಕಿಂಬರ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ:
1.ಹರ್ಮನ್ ಪ್ರೀತ್ ಕೌರ್ (ನಾಯಕಿ), 2.ಸ್ಮೃತಿ ಮಂಧನ (ಉಪನಾಯಕಿ), 3.ಶೆಫಾಲಿ ವರ್ಮಾ, 4.ಉಮಾ ಛೆಟ್ರಿ, 5.ರಾಜೇಶ್ವರಿ ಗಾಯಕ್ವಾಡ್, 6.ರಿಚಾ ಘೋಷ್, 7.ಸೈಕಾ ಇಶಾಕ್, 8.ಮೇಘನಾ ಸಿಂಗ್, 9.ಪ್ರಿಯಾ ಪುನಿಯಾ, 10.ಸ್ನೇಹ್ ರಾಣಾ, 11.ಅರುಂಧತಿ ರೆಡ್ಡಿ, 12.ರೇಣುಕಾ ಸಿಂಗ್, 13.ಜೆಮಿಮಾ ರಾಡ್ರಿಗ್ಸ್, 14.ದೀಪ್ತಿ ಶರ್ಮಾ, 15.ಶುಭಾ ಸತೀಶ್, 16.ಪೂಜಾ ವಸ್ತ್ರಕಾರ್

India Women Vs South Africa Women test match Shining Mysore girl shubha satheesh

Comments are closed.