ಭಾನುವಾರ, ಏಪ್ರಿಲ್ 27, 2025
HomeSportsCricketMurali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್...

Murali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್ ಮುರಳಿ ವಿಜಯ್

- Advertisement -


ಚೆನ್ನೈ: ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಆಟಗಾರ, ತಮಿಳುನಾಡಿನ ಮುರಳಿ ವಿಜಯ್ (Murali Vijay Retires) ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಪರ 61 ಟೆಸ್ಟ್ ಹಾಗೂ 17 ಏಕದಿನ ಪಂದ್ಯಗಳನ್ನಾಡಿರುವ 38 ವರ್ಷದ ಮುರಳಿ ವಿಜಯ್, 2008ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಆಕರ್ಷಕ ಶೈಲಿಯ ಬಲಗೈ ಬ್ಯಾಟ್ಸ್’ಮನ್ ಮುರಳಿ ವಿಜಯ್ ಟೀಮ್ ಇಂಡಿಯಾ ಪರ ಆಡಿದ 61 ಟೆಸ್ಟ್ ಪಂದ್ಯಗಳಿಂದ 38.28ರ ಸರಾಸರಿಯಲ್ಲಿ 12 ಶತಕ ಹಾಗೂ 15 ಅರ್ಧಶತಕಗಳ ಸಹಿತ 3982 ರನ್ ಕಲೆ ಹಾಕಿದ್ದಾರೆ. 17 ಏಕದಿನ ಪಂದ್ಯಗಳಿಂದ ಒಂದು ಅರ್ಧಶತಕ ಸಹಿತ 339 ರನ್ ಗಳಿಸಿರುವ ಮುರಳಿ ವಿಜಯ್ ಭಾರತದ ಟೆಸ್ಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು.

2018ರ ಡಿಸೆಂಬರ್’ನಲ್ಲಿ ಪರ್ತ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಮುರಳಿ ವಿಜಯ್’ಗೆ ಭಾರತ ಪರ ಮತ್ತೆ ಟೆಸ್ಟ್ ಆಡುವ ಅವಕಾಶ ಸಿಕ್ಕಿರಲಿಲ್ಲ. 2019 ರಲ್ಲಿ ತಮಿಳುನಾಡು ಪರ ಕೊನೆಯ ಬಾರಿ ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಕಾಣಿಸಿಕೊಂಡಿದ್ದರು. ಸಾಲಿಡ್ ಟೆಕ್ನಿಕ್ ಮತ್ತು ತಾಳ್ಮೆಗೆ ಹೆಸರಾಗಿದ್ದ ಮುರಳಿ ವಿಜಯ್ ವಿದೇಶೀ ನೆಲಗಳಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್’ಗಳನ್ನು ಆಡಿದ್ದಾರೆ.

ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿರುವ ಮುರಳಿ ವಿಜಯ್ “2008ರಿಂದ 2018ರವರೆಗೆ ಭಾರತ ತಂಡದ ಜೊತೆ ನನ್ನ ಪ್ರಯಾಣ ಅದ್ಭುತವಾಗಿತ್ತು. ಭಾರತವನ್ನು ಪ್ರತಿನಿಧಿಸಲು ಸಿಕ್ಕ ಅವಕಾಶ ನನ್ನ ಪಾಲಿನ ಶ್ರೇಷ್ಠ ಗೌರವವೆಂದು ಭಾವಿಸುತ್ತೇನೆ. ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ. ನಾನು ಪ್ರೀತಿಸಿದ ಆಟವನ್ನು ಹೊಸ ಮತ್ತು ವಿಭಿನ್ನ ವಾತಾವರಣಗಳಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ಇದು ನನ್ನ ಪ್ರಯಾಣದಲ್ಲಿ ಹೊಸ ಹೆಜ್ಜೆ ಎಂದು ಭಾವಿಸುತ್ತೇನೆ. ಜೀವನದಲ್ಲಿ ಹೊಸ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

38 ವರ್ಷದ ಮುರಳಿ ವಿಜಯ್ ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿರುವುದರಿಂದ ವಿದೇಶಿ ಟಿ20 ಲೀಗ್’ಗಳಲ್ಲಿ ಆಡಬಹುದಾಗಿದೆ. ವಿದೇಶಿ ಲೀಗ್’ಗಳ ಮೇಲೆ ಕಣ್ಣಿಟ್ಟೇ ವಿಜಯ್ ನಿವೃತ್ತಿ ಘೋಷಿಸಿದ್ದಾರೆ. ಬಿಸಿಸಿಐನೊಂದಿಗೆ ಸಹಭಾಗಿತ್ವ ಹೊಂದಿರುವವರೆಗೆ ಭಾರತದ ಆಟಗಾರರು ವಿದೇಶೀ ಲೀಗ್’ಗಳಲ್ಲಿ ಆಡುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿಜಯ್ ವಿದಾಯ ಹೇಳಿ, ವಿದೇಶಿ ಲೀಗ್’ಗಳಲ್ಲಿ ಆಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ :‌ Khelo India Youth Games 2023 : ಖೇಲೋ ಇಂಡಿಯಾ ಯೂತ್ ಗೇಮ್ಸ್ 2023 ಇಂದಿನಿಂದ ಪ್ರಾರಂಭ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : ಜ್ಯೂನಿಯರ್ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ವನಿತೆಯರಿಗೆ ಬಿಸಿಸಿಐನಿಂದ 5 ಕೋಟಿ ರೂ. ಬಂಪರ್ ಗಿಫ್ಟ್

Indian Cricketer Murali Vijay has retires from International Cricket

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular