Indian cricketer Suryakumar Yadav Devisha Shetty : ಉಡುಪಿ: ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡದ ಸದಸ್ಯ ಸೂರ್ಯಕುಮಾರ್ ಯಾದವ್ ಕರ್ನಾಟಕದ ಕರಾವಳಿಗೆ ಆಗಮಿಸಿದ್ದಾರೆ. ಕರಾವಳಿಯ ಉಡುಪಿ (Udupi) ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜೊತೆ ಟೆಂಪಲ್ ರನ್ ನಡೆಸುತ್ತಿದ್ದಾರೆ. ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಹೆಂಡತಿ ದೇವಿಶಾ ಶೆಟ್ಟಿ ಅವರು ಉಡುಪಿಯವರು.

ಹೀಗಾಗಿ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಪತ್ನಿಯ ಊರಿಗೆ ಭೇಟಿ ಕೊಟ್ಟಿರುವ ಸೂರ್ಯಕುಮಾರ್ ಯಾದವ್, ಜಿಲ್ಲೆಯ ಪುರಾಣ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಜುಲೈ 7ಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಉಡುಪಿಯ ಕಾಪುವಿನಲ್ಲಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪತ್ನಿ ಸಮೇತ ಭೇಟಿ ಕೊಟ್ಟಿರುವ ಸೂರ್ಯ ಕುಮಾರ್ ಯಾದವ್, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ ದೇಗುಲ ನಿರ್ಮಾಣ ಹಂತದಲ್ಲಿದ್ದು, ದೇವಸ್ಥಾನದ ನಿರ್ಮಾಣ, ಕೆತ್ತನೆ ಶಿಲ್ಪಕಲೆಯ ಬಗ್ಗೆ ಸೂರ್ಯ ಕುಮಾರ್ ಮಾಹಿತಿ ಪಡೆದಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಇಳಕಲ್ ಶಿಲೆಯಲ್ಲಿ ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ವಿಶಿಷ್ಟವಾಗಿ ನಿರ್ಮಾಣ ವಾಗುತ್ತಿದೆ.
ಇದನ್ನೂ ಓದಿ :Virat Kohli : ವಿರಾಟ್ ಕೊಹ್ಲಿ ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ..!
ಉಡುಪಿ ಮೂಲದ ದೇವಿಶಾ ಶೆಟ್ಟಿ ಅವರನ್ನು ಸೂರ್ಯಕುಮಾರ್ ಯಾದವ್ ಪ್ರೀತಿಸಿ ಮದುವೆಯಾಗಿದ್ದರು. ದೇವಿಶಾ ಶೆಟ್ಟಿ ಅವರ ಕುಟುಂಬ ಮುಂಬೈನಲ್ಲಿ ದೊಡ್ಡ ಹೋಟೆಲ್ ಉದ್ಯಮ ನಡೆಸುತ್ತಿದೆ. ಕಳೆದ ಶನಿವಾರ (ಜೂನ್ 29) ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್’ಗಳಿಂದ ರೋಚಕವಾಗಿ ಸೋಲಿಸಿದ್ದ ಟೀಮ್ ಇಂಡಿಯಾ, 17 ವರ್ಷಗಳ ನಂತರ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.

ಇದನ್ನೂ ಓದಿ : T20 World Cup Prize Money Breakdown: ವಿಶ್ವ ಚಾಂಪಿಯನ್ನರಿಗೆ ₹125 ಕೋಟಿ.. ಆಟಗಾರರಿಗೆಷ್ಟು, ಕೋಚ್‌ಗೆಷ್ಟು..?
ಫೈನಲ್ ಪಂದ್ಯದ ಕೊನೆಯ ಓವರ್’ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತ್ತು. ಕೊನೆಗೆ ಅದೇ ಕ್ಯಾಚ್ ಭಾರತದ ವಿಶ್ವಕಪ್ ಗೆಲುವಿಗೆ ಕಾರಣವಾಗಿತ್ತು. ಸದ್ಯ ಕ್ರಿಕೆಟ್‌ನಿಂದ ವಿಶ್ರಾಂತಿಯಲ್ಲಿರುವ ಸೂರ್ಯ ಕುಮಾರ್ ಯಾದವ್ ಪತ್ನಿಯ ಊರಿಗೆ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ
Indian cricketer Suryakumar Yadav Devisha Shetty visit Kapu Marigudi Udupi’s son-in-law’s temple run on the coastal