
ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಆರಂಭಕ್ಕಿನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಆದ್ರೆ ಉದ್ಘಾಟನಾ ಪಂದ್ಯವನ್ನಾಡಬೇಕಿದ್ದ ಚೆನ್ಮೈ ಮೊದಲ ಪಂದ್ಯದಿಂದ ಔಟ್ ಆಗಿದೆ. ಹೀಗಾಗಿ ಚೆನ್ಮೈ ತಂಡದ ಬದಲು ರಾಯಲ್ ಚಾಲೆಂಜರ್ಸ್ ತಂಡ ಕಣಕ್ಕಿಳಿಯಲಿದೆ.

ಕೊರೊನಾ ಕರಿ ನೆರಳು ಇದೀಗ ಐಪಿಎಲ್ ಪಂದ್ಯಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಈಗಾಗಲೇ ಚೆನ್ಮೈ ಸೂಪರ್ ಕಿಂಗ್ಸ್ ತಂಡದಲ್ಲಿ ಬರೋಬ್ಬರಿ 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿ ಮುಗಿಸಿ ಪಂದ್ಯವನ್ನಾಡೋದು ಚೆನ್ಮೈ ತಂಡಕ್ಕೆ ಕಷ್ಟಕರವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ರಾಹುಲ್ ಚಾಹರ್ ಹಾಗೂ ಋತುರಾಜ್ ಗಾಯಕ್ವಾಡ್‍ಗೆ ಕೊರೊನಾ ಸೋಂಕು ತಗುಲಿರುವುದರಿಂದ ಐಪಿಎಲ್ ವೇಳಾಪಟ್ಟಿ ತಡವಾಗಿರುವುದಲ್ಲದೇ ಆ ತಂಡದ ಪಂದ್ಯ ಗಳಲ್ಲೂ ಏರುಪೇರಾಗುವ ಲಕ್ಷಣಗಳಿವೆ.

ಐಪಿಎಲ್‍ಗೆ ಕೊರೊನಾ ಕಾಟ ಮುಂದುವ ರೆದಿರುವುದರಿಂದ ವೇಳಾಪಟ್ಟಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಆಯೋಜಿಸಿದ್ದ ಉದ್ಘಾಟನಾ ಪಂದ್ಯವನ್ನು ಕೈಬಿಡುವುದು ಬಹುತೇಕ ಖಚಿತ.

ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಡುವೆ ನಡೆಸಲು ಕೂಡ ಚಿಂತನೆ ನಡೆದಿದೆ.