ಕೊರೊನಾ ಕರ್ನಾಟಕದಲ್ಲಿ ಅತೀ ಹೆಚ್ಚು ಬಲಿ : ಅಂಕಿ ಅಂಶ ಮುಚ್ಚಿಟ್ಟಿತಾ ರಾಜ್ಯ ಸರಕಾರ

0

ಬೆಂಗಳೂರು : ಕರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಾವು – ನೋವು ಸಂಭವಿಸಿದ್ದರೂ ಕೂಡ ರಾಜ್ಯ ಸರಕಾರ ಮಾಹಿತಿಯನ್ನ ಮುಚ್ಚಿಡುತ್ತಿದೆ ಎಂದು ಶಾಸಕ ಎಚ್​.ಕೆ.ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿದೆ. ರಾಷ್ಟ್ರೀಯ ಸರಾಸರಿ 42 ಇದ್ದರೆ, ಕರ್ನಾಟಕದಲ್ಲಿ 82 ರಷ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜುಲೈ ತನಕ 49,136 ಸಾವು ಆಗಿದ್ದರೆ, 2019ರಲ್ಲಿ 37,001 ಸಾವು ದಾಖಲಾಗಿತ್ತು.

ಈ ವರ್ಷ ಹೆಚ್ಚುವರಿಯಾಗಿ 12,135 ಸಾವು ವರದಿಯಾಗಿದೆ. ಆದರೂ, ಕರೊನಾದಿಂದ 1,886 ಜನ ಮಾತ್ರವೇ ಬೆಂಗಳೂರಿನಲ್ಲಿ ಸತ್ತಿದ್ದಾರೆಂದು ಸರ್ಕಾರ ಮಾಹಿತಿ ನೀಡಿದೆ ಎಂದು ಪಾಟೀಲ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರ್ಕಾರ ಈ ವರ್ಷ ಡೆತ್​ ಆಡಿಟ್​ ಮಾಡಿಲ್ಲ. ಸಾವು ಯಾವ ಕಾರಣಕ್ಕೆ ಆಯ್ತು ಎನ್ನುವ ಮಾಹಿತಿ ನೀಡಿಲ್ಲ. ಉಸಿರಾಟ ಸಮಸ್ಯೆಯಿಂದ ಶೇ.8.2- 8.5 ಮೃತಪಟ್ಟಿರುವ ಮಾಹಿತಿ ಇದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರಿಸಬೇಕಾಗಿದೆ.

ಅಂಕಿ-ಅಂಶ ಬಚ್ಚಿಟ್ಟು, ಜನರಿಗೆ ತಪ್ಪು ಮಾಹಿತಿ ನೀಡುವುದರಿಂದ ಪ್ರಯೋಜನವಿಲ್ಲ. ಗಂಭೀರ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು, ತಜ್ಞರು ಮತ್ತು ವೈದ್ಯರ ತುರ್ತು ಸಭೆ ಕರೆದು ಚರ್ಚಿಸಬೇಕು. ತಕ್ಷಣದ ಕ್ರಮ ಕೈಗೊಳ್ಳಲು ಮತ್ತು ವಸ್ತುಸ್ಥಿತಿ ತಿಳಿಸುವಂತೆ ಆಗ್ರಹಿಸಿದ್ದಾರೆ.

Leave A Reply

Your email address will not be published.