ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ : ಚಿರು ವಿರುದ್ದದ ಆರೋಪಕ್ಕೆ ದರ್ಶನ್ ಹೇಳಿದ್ದೇನು ?

0

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಬಿರುಗಾಳಿಯನ್ನೇ ಎಬ್ಬಿಸಿದೆ. ಸ್ಯಾಂಡಲ್ ವುಡ್ ನಟ, ನಟಿಯರು ಡ್ರಗ್ಸ್ ಮಾಫಿಯಾ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದ್ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡ್ರಗ್ಸ್ ಮಾಫಿಯಾದಲ್ಲಿ ಚಿರು ಹೆಸರು ಕೇಳಿಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಚಿರು ಸತ್ತು ಮೂರು ತಿಂಗಳು ಕಳೆದಿದೆ. ಅವನು ಎಲ್ಲಿದ್ದಾನೋ, ಹೇಗಿದ್ದಾನೋ ಗೊತ್ತಿಲ್ಲ. ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಚಿರು ವಿಚಾರವಾಗಿ ಕೆಟ್ಟದಾಗಿ ಮಾತನಾಡಬೇಡಿ. ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ನನಗೆ ತುಂಬಾ ಬೇಸರವಾಯಿತು.

ಸತ್ತೋನು ಕೊಲೆಗಾರನಾದರೂ ನಾವು ವರ್ಷದ ತಿಥಿ ಮಾಡುತ್ತೇವೆ. ಇದನ್ನು ನಮ್ಮ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ. ಅವನು ಒಳ್ಳೆಯವನು ಕೆಟ್ಟೋನು ಎಂದು ನೋಡುವುದಿಲ್ಲ. ಸತ್ತ ಮೇಲೆ ಅವರ ಬಗ್ಗೆ ಒಳ್ಳೆಯ ಮಾತನಾಡೋಣ. ದಯವಿಟ್ಟು ಕೆಟ್ಟದಂತೂ ಮಾತನಾಡಬೇಡಿ. ಒಂದು ವೇಳೆ ಈ ಕೇಸ್ ಆಗಿ ಸಾಬೀತಾಯಿತು ಅಂದರೆ ಅವನಿಗೆ ಶಿಕ್ಷೆ ಕೊಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಒಂದು ಕ್ಲಾಸ್ ಎಂದ ಮೇಲೆ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿ ಇರುತ್ತಾರೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಕೂಡ ಇರುತ್ತಾರೆ. ಅದಕ್ಕೆ ಇಡೀ ಕ್ಲಾಸ್ ಝೀರೋ ಅಂತೀರಾ. ಹಾಗೇ ಸ್ಯಾಂಡಲ್‍ವುಡ್ ಕೂಡ ಹಾಗೆಯೇ. ನಾನು ಕೂಡ ಈ ಫೀಲ್ಡ್‌ಗೆ ಬಂದು 28 ವರ್ಷ ಆಯಿತು. ಲೈಟ್ ಬಾಯ್‍ಯಿಂದ ಇಲ್ಲಿವರೆಗೂ ಬಂದಿದ್ದೇನೆ. ಆದರೆ ಇದುವರೆಗೂ ನಮಗೆ ಈ ರೀತಿ ಅನುಭವ ಆಗಿಲ್ಲ.

ಸ್ಯಾಂಡಲ್‍ವುಡ್‍ನಲ್ಲಿ ಇದುವರೆಗೂ ಈ ಬಗ್ಗೆ ನಾನು ಕೇಳಿಲ್ಲ ನೋಡಿಲ್ಲ. ಡ್ರಗ್ಸ್ ಕೇಸ್ ಇಡೀ ಸ್ಯಾಂಡಲ್‍ವುಡ್‍ಗೆ ಮಾತ್ರ ಅಲ್ಲ. ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ ಎಂದಿದ್ದಾರೆ.

ಡ್ರಗ್ಸ್ ಮಾಫಿಯಾ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಎಲ್ಲಾ ಕಡೆಯಲ್ಲಿಯೂ ಇರಬಹುದು. ಡ್ರಗ್ಸ್ ದಂಧೆಯ ವಿಚಾರದಲ್ಲಿ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡೋಣಾ. ಆದರೆ ಇನ್ನೊಬ್ಬರ ಬಗ್ಗೆ ನಾನು ಮಾತನಾಡಲಾರೆ ಎಂದಿದ್ದಾರೆ.

Leave A Reply

Your email address will not be published.