ಮುಂಬೈ : ಐಪಿಎಲ್ 14ನೇ ಆವೃತ್ತಿಯ ದ್ವಿತಿಯಾರ್ಧದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ಸೆಣೆಸಾಡಲಿದೆ. ಐಪಿಎಲ್ ಉಳಿದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ.

ಶಾರ್ಜಾ, ಅಬುಧಾಬಿ ಹಾಗೂ ದುಬೈನ ಕ್ರಿಕೆಟ್ ಸ್ಟೇಡಿಯಂಲ್ಲಿ ಐಪಿಎಲ್ ಕಾದಾಟ ನಡೆಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ಸೆಣಸಾಟ ನಡೆಸಲಿದ್ರೆ, ಅಕ್ಟೋಬರ್ 8 ರಂದು ನಡೆಯುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ಸೆಣೆಸಾಟ ನಡೆಸಲಿವೆ.

ಇದನ್ನೂ ಓದಿ : ಐಪಿಎಲ್ ಪ್ರಿಯರಿಗೆ ಗುಡ್ ನ್ಯೂಸ್ : ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಮುಖಾಮುಖಿ
ಹೊಸ ವೇಳಾಪಟ್ಟಿಯ ಪ್ರಕಾರ ನಿತ್ಯದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯಗಳು ನಡೆಯಲಿದ್ದು, ಎರಡು ಪಂದಗಳಿದ್ದಾಗ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ