IPL : ಐಪಿಎಲ್‌ ಪ್ರಿಯರಿಗೆ ಗುಡ್‌ ನ್ಯೂಸ್‌ : ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಮುಖಾಮುಖಿ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)‌ ಕೊರೊನಾ ಕಾರಣದಿಂದಾಗಿ ಮುಂದೂಡಿಕೆಯಾಗಿತ್ತು. ಇದೀಗ ಯುಎಇನಲ್ಲಿ ಐಪಿಎಲ್‌ ನಡೆಸೋದಕ್ಕೆ ವೇಳಾಪಟ್ಟಿ ಫಿಕ್ಸ್‌ ಆಗಿದೆ.ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ದ ಮುಂಬೈ ಸೆಣೆಸಾಡಲಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಐಪಿಎಲ್‌ ಪಂದ್ಯಾವಳಿಯಲ್ಲಿ ಅರ್ಧಕ್ಕೆ ರದ್ದು ಮಾಡಲಾಗಿತ್ತು. 14ನೇ ಆವೃತ್ತಿಯ ಐಪಿಎಲ್‍ನ 29 ಪಂದ್ಯಗಳು ನಡೆದಿತ್ತು. ಆದರೆ ಕೊರೊನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ಬಿಸಿಸಿಐ ಐಪಿಎಲ್‌ ಪಂದ್ಯಾವಳಿಗಳನ್ನು ಯುಎಇ ಗೆ ಶಿಫ್ಟ್‌ ಮಾಡಿತ್ತು. ಅಲ್ಲದೇ ಸೆಪ್ಟೆಂಬರ್ 19ರಿಂದ ಐಪಿಎಲ್‌ ಎರಡನೇ ಸೀಸನ್‌ ಶುರುವಾಗಲಿದೆ.

ಐಪಿಎಲ್‌ನಲ್ಲಿ ಒಟ್ಟು 31 ಪಂದ್ಯಗಳು ಬಾಕಿ ಉಳಿದಿದ್ದು, ಪಂದ್ಯಾವಳಿಗಳು ದುಬೈ, ಅಬುದಾಬಿ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ಕ್ಕೆ ಆರಂಭಗೊಳ್ಳಲಿರುವ IPL ಪಂದ್ಯಾವಳಿ ಅಕ್ಟೋಬರ್ 15ರ ವರೆಗೆ ನಡೆಯಲಿದೆ. ದುಬೈನಲ್ಲಿ ಐಪಿಎಲ್‌ ಪಂದ್ಯಾವಳಿ ಆಯೋಜನೆಗೆ ಈಗಾಗಲೇ ಸಕಲ ರೀತಿಯಲ್ಲಿಯೂ ಸಿದ್ದತೆಗಳನ್ನು ಮಾಡಿಕೊಂಡಿದೆ.

ಐಪಿಎಲ್‌ ಎರಡನೇ ಸಿಸನ್ಸ್‌ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡಗಳು ಪರಸ್ಪರ ಸೆಣೆಸಾಟ ನಡೆಸಲಿವೆ ಎಂದು ತಿಳಿದು ಬಂದಿದೆ. ಐಪಿಎಲ್‌ ವೇಳಾಪಟ್ಟಿ ರಿಲೀಸ್‌ ಆಗುತ್ತಿದ್ದಂತೆಯೇ ಕ್ರಿಕೆಟ್‌ ಪ್ರಿಯರು ಸಖತ್‌ ಖುಷಿಯಾಗಿದ್ದಾರೆ.

ಇದನ್ನೂ ಓದಿ : ಐಪಿಎಲ್‌ ಪ್ರಿಯರಿಗೆ ಗುಡ್‌ ನ್ಯೂಸ್‌ : ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಮುಖಾಮುಖಿ

Comments are closed.