IND vs SL 1st T20 : ಭುವನೇಶ್ವರ ದಾಳಿಗೆ ಶ್ರೀಲಂಕಾ ತತ್ತರ : ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ

ಕೊಲಂಬೋ : ಸೂರ್ಯಕುಮಾರ್‌ ಯಾದವ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ಭುವನೇಶ್ವರ್‌ ಕುಮಾರ್‌ ದಾಳಿಗೆ ಶ್ರೀಲಂಕಾ ತತ್ತರಿಸಿದೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ 30 ರನ್ ಗಳ ಗೆಲುವು ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಪ್ರಥ್ವಿ ಶಾ ಸೊನ್ನೆಗೆ ಔಟಾಗುವ ಮೂಲಕ ಆರಂಭಿಕ ಆಘಾತ ನೀಡಿದ್ರು. ನಂತರ ಸಂಜು ಸ್ಯಾಮ್ಸನ್‌ ಹಾಗೂ ಶಿಖರ್‌ ಧವನ್‌ ಭರ್ಜರ 51 ರನ್‌ ಜೊತೆಯಾಟವಾಡಿದ್ರು. ಸಂಜು ಸ್ಯಾಮ್ಸನ್‌ 27 ಹಾಗೂ ಧವನ್‌ 46 ರನ್‌ ಗಳಿಸಿ ಔಟಾದ್ರು. ನಂತರ ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಆಟಕ್ಕೆ ಮುಂದಾದ್ರು. ಕೇವಲ 34 ಎಸೆತಗಳಲ್ಲಿ 5ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಬರೋಬ್ಬರಿ 50 ರನ್‌ ಸಿಡಿಸುವ ಮೂಲಕ ಅರ್ಧ ಶತಕ ಬಾರಿಸಿದ್ರು. ಟೀಂ ಇಂಡಿಯಾ ನಿಗದಿತ 20 ಓವರ್‌ ಗಳಲ್ಲಿ ಬರೋಬ್ಬರಿ 164 ರನ್‌ ಗಳಿಸಿತ್ತು. ಶ್ರೀಲಂಕಾ ಪರ ಚಾಮೀರ 24/2, ಹಸರಂಗ 28/2 ಹಾಗೂ ಕರುಣರತ್ನೆ 38ಕ್ಕೆ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ಶ್ರೀಲಂಕಾ ಪರ ಆರಂಭಿಕರಾಗಿ ಅಂಗಳಕ್ಕೆ ಇಳಿದಿದ್ದ ಆವಿಷ್ಕಾ ಫೆರ್ನಾಂಡೋ ಹಾಗೂ ಮಿನೋದ್‌ ಭನುಕ ಉತ್ತಮ ಜೊತೆಯಾಟ ಭರವಸೆಯನ್ನು ನೀಡಿದ್ರು. ಆದರೆ ಕೃನಾಲ್‌ ಪಾಂಡ್ಯ ಭನುಕ ವಿಕೆಟ್‌ ಕಬಳಿಸುವ ಮೂಲಕ ಲಂಕನ್ನರಿಗೆ ಆಘಾತವನ್ನುಂಟು ಮಾಡಿದ್ರು. ನಂತರ ಧನಂಜಯ ಡಿಸಿಲ್ವಾ ಕೂಡ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಆದರೆ ಚರಿತ ಅಸಲಂಕ ಭರ್ಜರಿ ಬ್ಯಾಟಿಂಗ್‌ ನಡೆಸಿದ್ರು. 3 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 44 ರನ್‌ ಸಿಡಿಸುವ ಮೂಲಕ ಶ್ರೀಲಂಕಾ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ರು. ಆದ್ರೆ ನಂತರದಲ್ಲಿ ಚಹರ್‌, ಭುವನೇಶ್ವರ್‌ ಕುಮಾರ್‌ ಹಾಗೂ ವರುಣ್‌ ಚಕ್ರವರ್ತಿ ಆಟಗಾರರು ಕ್ರೀಸ್‌ ನಲ್ಲಿ ನಿಲ್ಲೋದಕ್ಕೆ ಅವಕಾಶವನ್ನೇ ನೀಡಲಿಲ್ಲ.

ಇದನ್ನೂ ಓದಿ : ಐಪಿಎಲ್‌ ಯುಎಇ ವೇಳಾಪಟ್ಟಿ ಪ್ರಕಟ : ನಿಮ್ಮ ನೆಚ್ಚಿನ ತಂಡದ ಪಂದ್ಯ ಯಾವಾಗ ಗೊತ್ತಾ ..?

ಅಂತಿಮವಾಗಿ ಶ್ರೀಲಂಕಾ ತಂಡ 18.3 ಓವರ್‌ಗಳಲ್ಲಿ ಕೇಲ 126ರನ್‌ ಗಳಿಸಿ ಆಲೌಟಾಯಿತು. ಭಾರತ ಪಡ ಭುವನೇಶ್ವರ್‌ 22/4, ಕುಮಾರ್‌ , ದೀಪಕ್‌ ಚಹರ್‌ 24/2 , ಕೃನಾಲ್‌ ಪಾಂಡ್ಯ, ವರುಣ್‌ ಚಕ್ರವರ್ತಿ, ಯಜುವೇಂದ್ರ ಚಹಾಲ್‌, ಹಾರ್ದಿಕ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

Comments are closed.