ಬುಧವಾರ, ಏಪ್ರಿಲ್ 30, 2025
HomeSportsCricketIPL 2022 : 0, 0, 9 ವಿರಾಟ್‌ ಕೊಹ್ಲಿಗೆ ಕೈ ಹಿಡಿಯದ ಅದೃಷ್ಟ :...

IPL 2022 : 0, 0, 9 ವಿರಾಟ್‌ ಕೊಹ್ಲಿಗೆ ಕೈ ಹಿಡಿಯದ ಅದೃಷ್ಟ : ಆರಂಭಿಕನಾಗಿ ಎಡವಿದ ಮಾಜಿ ನಾಯಕ

- Advertisement -

ಮುಂಬೈ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ IPL 2022 ಯಲ್ಲಿ ಈ ಬಾರಿಯೂ ಅದೃಷ್ಟ ಕೈ ಹಿಡಿಯುತ್ತಿಲ್ಲ. ನಾಯಕತ್ವ ಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ವಿರಾಟ್‌ ಕೊಹ್ಲಿ ಬ್ಯಾಟ್‌ ರನ್‌ ಹರಿಯುತ್ತಿಲ್ಲ. ಅದ್ರಲ್ಲೂ ಆರಂಭಿಕನಾಗಿ ಕೊಹ್ಲಿ ಎರಡು ಬಾರಿ ಗೋಲ್ಡನ್‌ ಡಕ್‌ ಆಗಿದ್ರೆ, ಮೂರು ಇನ್ನಿಂಗ್ಸ್‌ ಗಳಲ್ಲಿ ಗಳಿಸಿದ್ದು ಕೇವಲ 9 ರನ್.‌ ಕೊಹ್ಲಿ ಆಟ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿರಾಟ್‌ ಕೊಹ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ್ರೆ ಸಾಕು ಎರಡಂಕಿ ರನ್‌ ಕಲೆ ಹಾಕದೇ ಇರುವ ಇನ್ನಿಂಗ್ಸ್‌ಗಳು ವಿರಳಾತಿ ವಿರಳ. ಆದ್ರೆ ಅದೇನಾಗಿದೆಯೋ ಗೊತ್ತಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ ರನ್‌ ಸಿಡಿಯುತ್ತಿಲ್ಲ. ಬೌಂಡರಿ, ಸಿಕ್ಸರ್‌ ಆರ್ಭಟ ಬಿಡಿ, ಸಿಂಗಲ್‌ ರನ್‌ ತೆಗೆಯೋದಕ್ಕೂ ಕೊಹ್ಲಿಯಿಂದ ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಯಲ್ಲಿ ಕೊಹ್ಲಿ 9 ಪಂದ್ಯಗಳಿಂದ ಒಟ್ಟು 128ರನ್‌ ಗಳಿಸಲು ಮಾತ್ರವೇ ಸಾಧ್ಯವಾಗಿದೆ.

ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಮತ್ತೊಮ್ಮೆ ನಿರಾಸೆಯನ್ನು ಮೂಡಿಸಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ತಂಡದ ಪರವಾಗಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೊಹ್ಲಿ ಕನ್ನಡಿಗ ಪ್ರಸಿದ್ದ ಕೃಷ್ಣ ಎಸೆದ ಬೌಲ್ಸರ್‌ ಎಸೆತವನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ.

IPL 2022 ರಲ್ಲಿ ವಿರಾಟ್ ಕೊಹ್ಲಿ ಸಾಧನೆ :

41* ವಿರುದ್ಧ PBKS
12 ವಿರುದ್ಧ ಕೆಕೆಆರ್
5 ವಿರುದ್ಧ RR
48 ವಿರುದ್ಧ MI
1 ವಿರುದ್ಧ CSK
12 ವಿರುದ್ಧ DC
0 ವಿರುದ್ಧ LSG
0 ವಿರುದ್ಧ SRH
9 ವಿರುದ್ಧ RR

ಕಳೆದ ಮೂರು ಪಂದ್ಯಗಳಲ್ಲಿ 0, 0, 9 ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಯಾವುದೇ ಮ್ಯಾಜಿಕ್‌ ನಡೆದಿಲ್ಲ. ಟೆಸ್ಟ್‌, ಟಿ20, ಏಕದಿನ ಸೇರಿದಂತೆ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ 100 ಕ್ಕೂ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಿದ್ದಾರೆ. ಆದರೆ ಈ ಬಾರಿ ಐಪಿಎಲ್‌ನಲ್ಲಿ ರನ್‌ ಗಳಿಸಲು ಮಾತ್ರ ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಕೊಹ್ಲಿ ಟೀಂ ಇಂಡಿಯಾದ ಮಾಜಿ ಕೋಚ್‌ ಅವರಿಂದ ಸಲಹೆಯನ್ನು ಪಡೆದಿದ್ದಾರೆ.

ಇದನ್ನೂ ಓದಿ : IPL 2022 : ಸೋತು ಸುಣ್ಣವಾದ ಮುಂಬೈ ತಂಡ ಸೇರಿದ ಭಾರತದ ಈ ಖ್ಯಾತ ಬೌಲರ್‌, ವೀಕ್ಷಕ ವಿವರಣೆಗಾರ

ಇದನ್ನೂ ಓದಿ : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

IPL 2022 0, 0, 9 No change in FORTUNES for Virat Kohli, OPENING innings fails

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular