ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(IPL 2022 ) ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ಹೊಸ ತಂಡಗಳು ಪಾದಾರ್ಪಣೆ ಮಾಡುತ್ತಿವೆ. ಕನ್ನಡಿಗ ಕೆ.ಎಲ್.ರಾಹುಲ್ ಲಕ್ನೋ ತಂಡದ ನಾಯಕನಾಗಿದ್ರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಎರಡೂ ತಂಡದಲ್ಲಿಯೂ ಬಲಿಷ್ಠ ಆಟಗಾರರಿದ್ದು, ಬಲಾಢ್ಯ ತಂಡವನ್ನೇ ಕಣಕ್ಕೆ ಇಳಿಸಲು ಇತ್ತಂಡಗಳು ಸಜ್ಜಾಗಿವೆ. ಹಾಗಾದ್ರೆ ಎರಡೂ ತಂಡಗಳ ಬಲಾಬಲ ಹೇಗಿದೆ ಅನ್ನೋದನ್ನು ನೋಡೋಣಾ ಬನ್ನಿ.
ಸೋಮವಾರ ಸಂಜೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಹಣಾಹಣಿಯನ್ನು ನೋಡಲು ಕ್ರಿಕೆಟ್ ಜಗತ್ತು ಕಾತರವಾಗಿದೆ. ಗರಿಷ್ಟ ಮೊತ್ತಕ್ಕೆ ಎರಡೂ ತಂಡಗಳನ್ನು ಮಾಲೀಕರು ಖರೀದಿಸಿದ್ದಾರೆ. ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಈ ಬಾರಿ ಬಲಿಷ್ಠವಾಗಿದ್ದು, ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿವೆ.

ಟೈಟಾನ್ಸ್‌ನ ನಾಯಕ ಹಾರ್ದಿಕ್ ಪಾಂಡ್ಯಗೆ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಲವು ವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ. ಮಾತ್ರವಲ್ಲ ಸಾಕಷ್ಟು ಉತ್ತಮ ದಾಖಲೆಯನ್ನೂ ಹೊಂದಿದ್ದಾರೆ. ಹೀಗಾಗಿ ಈ ಬಾರಿಯ ನಾಯಕನಾಗಿ ಪಾಂಡ್ಯಗೆ IPL 2022 ರಲ್ಲಿ ಸವಾಲಿನಿಂದ ಕೂಡಿದೆ. ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗೆ ಉಳಿದಿರುವ ಪಾಂಡ್ಯಗೆ ಮತ್ತೆ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡೋಕ್ಕೆ ಕೂಡ ಐಪಿಎಲ್ ವೇದಿಕೆಯಾಗಲಿದೆ.
ಇನ್ನು ಕನ್ನಡಿಗ ಕೆ.ಎಲ್.ರಾಹುಲ್ ಐಪಿಎಲ್‌ನಲ್ಲಿ ಅದ್ಬುತ ಸಾಧನೆಯನ್ನು ಹೊಂದಿದ್ದಾರೆ. ಕಳೆದ ಎರಡು ಅವಧಿಯಲ್ಲಿಯೂ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ನಾಯಕನಾಗಿ ತಂಡವನ್ನು ಫೈನಲ್‌ಗೆ ಎಂಟ್ರಿ ಕೊಡಿಸಲು ಸಾಧ್ಯವಾಗದೇ ಇದ್ದರೂ ಕೂಡ ಅದ್ಬುತ ಬ್ಯಾಟಿಂಗ್‌ನಿಂದಾಗಿ ಈಗಾಗಲೇ ರಾಹುಲ್ ಐಪಿಎಲ್ ನಲ್ಲಿ ಕಳೆದ ಎರಡು ಅವಧಿಯಲ್ಲಿಯೂ ಗರಿಷ್ಠ ಸ್ಕೋರ್ ದಾಖಲು ಮಾಡಿದ್ದಾರೆ. ಟೀಂ ಇಂಡಿಯಾದ ಉಪನಾಯಕನಾಗಿರುವ ಕೆ.ಎಲ್.ರಾಹುಲ್‌ಗೆ ಹೊಸ ತಂಡದ ನಾಯಕನಾಗಿರುವುದು ಸವಾಲನ್ನು ತಂದಿದೆ.

ರಾಹುಲ್ ತಮ್ಮ ವೈಯಕ್ತಿಕ ಯಶಸ್ಸನ್ನು ತಮ್ಮ ಹೊಸ ತಂಡ ಲಕ್ನೋಗೆ ಸ್ವಲ್ಪ ಅದೃಷ್ಟವಾಗಿ ಪರಿವರ್ತಿಸಲು ಉತ್ಸುಕರಾಗಿರುತ್ತಾರೆ. ರಾಹುಲ್ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅಗ್ರಸ್ಥಾನದಲ್ಲಿ ಅಸಾಧಾರಣ ಜೋಡಿಯಾಗಿರುವುದರಿಂದ ಲಕ್ನೋಗೆ ಅಂತಹ ಚಿಂತೆಗಳಿಲ್ಲ. ಅವರು ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಮತ್ತು ವೆಸ್ಟ್ ಇಂಡಿಸ್ ಆಟಗಾರ ಜೇಸನ್ ಹೋಲ್ಡರ್ (ಮೊದಲ ಪಂದ್ಯಕ್ಕೆ ಲಭ್ಯವಿಲ್ಲ) ಮತ್ತು ಮನೀಷ್ ಪಾಂಡೆ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಆನೆ ಬಲ ಬಂದಂತಾಗಿದೆ.
ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್ ಟಾಟಾ IPL 2022 ಸಂಭಾವ್ಯ ಪ್ಲೇಯಿಂಗ್ XI :
ಗುಜರಾತ್ ಟೈಟಾನ್ಸ್ : ಶುಭಮನ್ ಗಿಲ್, ಮ್ಯಾಥ್ಯೂ ವೇಡ್ (WK), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ (ಸಿ), ರಾಹುಲ್ ತೆವಾಟಿಯಾ, ವರುಣ್ ಆರೋನ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್
1️⃣ day to go! 🤩
— Gujarat Titans (@gujarat_titans) March 27, 2022
Bohot hua Bhaichara, ab hogi Bhai-Valry 🔥
▶️ Watch our man @HardikPandya7 banter with @KLRahul11 before tomorrow's team debuts! @LucknowIPL#SeasonOfFirsts #AavaDe #AbApniBaariHai #GTvLSG pic.twitter.com/JZ8r2ycSib
ಲಕ್ನೋ ಸೂಪರ್ ಜೈಂಟ್ಸ್ : ಕೆಎಲ್ ರಾಹುಲ್ (ಸಿ), ಮನನ್ ವೋಹ್ರಾ, ಎವಿನ್ ಲೂಯಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಅವೇಶ್ ಖಾನ್, ರವಿ ಬಿಷ್ಣೋಯ್.
#PehliBaar: Nikle hain Super Giants likhne apna sunahara itihaas 😁💪#AbApniBaariHai #LucknowSuperGiants #FirstEver #IPL2022 #T20 #TataIPL #Lucknow #UttarPradesh #LSG2022 pic.twitter.com/TxOqy6NnEE
— Lucknow Super Giants (@LucknowIPL) March 25, 2022
ಇದನ್ನೂ ಓದಿ : ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಖ್ಯಾತ ವೇಗಿ ಎಸ್. ಶ್ರೀಶಾಂತ್
ಇದನ್ನೂ ಒದಿ : ಗುಂಡಿಕ್ಕಿ ಭಾರತದ ಖ್ಯಾತ ಅಂತರಾಷ್ಟ್ರೀಯ ಕಬ್ಬಡಿ ಆಟಗಾರ ಸಂದೀಪ್ ನಂಗಲ್ ಹತ್ಯೆ
( IPL 2022 : Gujarat Titans and Lucknow Super Giants strong playing XI)