Radhika Pandit : ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ‌ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಹೇಳಿದ್ದೇನು ಗೊತ್ತಾ ?

ಕೊನೆಗೂ ಭಾರತದ ಚಿತ್ರೋದ್ಯಮ ಕಾಯುತ್ತಿದ್ದ ದಿನ ಕಣ್ಣೇದುರು ಬಂದಿದೆ. ‌ಕಳೆದ ಎರಡು ಮೂರು ವರ್ಷದಿಂದ ಸೋಷಿಯಲ್‌ ಮೀಡಿಯಾದಲ್ಲೇ ಹವಾ ಸೃಷ್ಟಿಸಿದ್ದ ಕೆಜಿಎಫ್-2 ಸಿನಿಮಾದ ಟ್ರೇಲರ್ ತೆರೆಗೆ ಬಂದಿದೆ. ತೆರೆಗೆ ಬಂದ ಎರಡೇ ಗಂಟೆಯಲ್ಲಿ ಬರೋಬ್ಬರಿ 20 ಲಕ್ಷ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಈ ಮಧ್ಯೆ ಕೆಜಿಎಫ್-2 ಟ್ರೇಲರ್ (KGF Chapter 2) ರಿಲೀಸ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಯಶ್ (Radhika Pandit) ಸಖತ್ ಮಿಂಚಿದ್ದು, ಕೇವಲ ಸೌಂದರ್ಯ ಮಾತ್ರವಲ್ಲ ಮಾತಿನಿಂದಲೂ ರಾಧಿಕಾ ಎಲ್ಲರ ಮನಸೂರೆಗೊಂಡಿದ್ದಾರೆ.

Radhika Pandit KGF Chapter 2 Here is what She say 6

ಕೆಜಿಎಫ್-2 ಟ್ರೇಲರ್ ರಿಲೀಸ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನ್ನಿಸಿದ್ದು ಯಶ್ ರಾಧಿಕಾ ಜೋಡಿ.‌ ಮುದ್ದಾದ ಈ ಜೋಡಿ ಕಾರ್ಯಕ್ರಮಕ್ಕೆ ಬರ್ತಿದ್ದಂತೆ ಎಲ್ಲರೂ ಕಣ್ಣುಗಳು ಈ ಜೋಡಿಯತ್ತ ಮುಖ ಮಾಡಿದ್ದು ಸುಳ್ಳಲ್ಲ. ಇನ್ನೂ ತಮ್ಮ ಸೌಂದರ್ಯ ಮಾತ್ರವಲ್ಲ ಸಿಹಿಯಾದ ಮಾತಿನಿಂದಲೂ ನಟಿ ರಾಧಿಕಾ ಪಂಡಿತ್ ಕೆಜಿಎಫ್-2 ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಮೆರುಗು ತಂದರು‌.

Radhika Pandit KGF Chapter 2 Here is what She say 1

ಕೆಜಿಎಫ್ ಅತ್ಯದ್ಭುತವಾದ ಸಿನಿಮಾ, ನನ್ನ ಗಂಡ ನಟಿಸಿದ್ದಾರೆ ಎಂಬ ಕಾರಣಕ್ಕಲ್ಲ ಸಂಪೂರ್ಣ ಚಿತ್ರತಂಡದ ಪರಿಶ್ರಮಕ್ಕೆ ಎನ್ನುತ್ತಲೇ ಮಾತು ಆರಂಭಿಸಿದ ರಾಧಿಕಾಯಶ್, ಈ ಚಿತ್ರದ ಯಶಸ್ಸಿಗೆ ಎಲ್ಲರೂ ಪಿಲ್ಲರ್ ನಂತೆ ನಿಂತಿದ್ದಾರೆ ಎಂದರು.

Radhika Pandit KGF Chapter 2 Here is what She say 5

ಕೆಜಿಎಫ್-2 ಸಿನಿಮಾ ಒಂದು ಅರಮನೆ ಎಂದು ಪರಿಗಣಿಸೋದಾದರೇ ಪ್ರಶಾಂತ್ ನೀಲ್ ಒಂದು ಪಿಲ್ಲರ್, ವಿಜಯ್ ಸರ್ ಒಂದು ಪಿಲ್ಲರ್, ಮಾತ್ರವಲ್ಲ ಯಶ್, ರವಿಬಸ್ರೂರ ಎಲ್ಲರೂ ಕೂಡ ಒಂದು ಪಿಲ್ಲರ್ ಎಂದು ಬಣ್ಣಿಸಿದರು. ಅಷ್ಟೇ ಅಲ್ಲ ಕೆಜಿಎಫ್‌ನಲ್ಲಿ ರವೀನಾ ಟಂಡನ್ ನಟನೆಯನ್ನು ಮನಃ ತುಂಬಿ ಶ್ಲಾಘಿಸಿದ ರಾಧಿಕಾ, ಗುಸ್ ಕೇ‌ಮಾರೆಂಗೇ ಎನ್ನೋ ರವೀನಾ ಟಂಡನ್ ಡೈಲಾಗ್ ಉಲ್ಲೇಖಿಸಿ ಸಂಭ್ರಮಿಸಿದರು.

Radhika Pandit KGF Chapter 2 Here is what She say 2

ಮಾತ್ರವಲ್ಲ ಕೆಜಿಎಫ್-2 ಸಿನಿಮಾದಲ್ಲಿ ಯಶ್ ರಷ್ಟೇ ಸದ್ದು ಮಾಡಿದ ಇನ್ನೊಂದು ಪಾತ್ರ ಅಧೀರಾ ಬಗ್ಗೆಯೂ ಪ್ರಸ್ತಾಪಿಸಿ ನಾನು ಹಿಂದೆಂದೂ ನಿಮ್ಮ ಇಂಥಹ ರೂಪವನ್ನು ನೋಡಿಯೇ ಇರಲಿಲ್ಲ ಎನ್ನುವ ಮೂಲಕ ಮುಕ್ತವಾಗಿ ಸಂಜಯ್ ದತ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Radhika Pandit KGF Chapter 2 Here is what She say 3

ಶಿವಣ್ಣ ಉಪಸ್ಥಿತಿಯನ್ನು ಗೌರವಿಸಿದ ರಾಧಿಕಾ, ನೀವು ನಮ್ಮ ಮನೆಯ ಸದಸ್ಯರಿದ್ದಂತೆ.‌ ನಾವು ಪುನೀತ್ ರಾಜ್ ಕುಮಾರ್ ರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ನಿಮ್ಮ ರೂಪದಲ್ಲಿ ಅವರೆಂದೂ ನಮ್ಮ ಜೊತೆಗಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇದಲ್ಲದೇ ಸಚಿವ ಅಶ್ವತ್ಥನಾರಾಯಣ್, ನಿರೂಪಕರಾದ ಕರಣ್ ಜೋಹರ್ ಹಾಗೂ ಅನುಶ್ರೀಯನ್ನು ರಾಧಿಕಾ ಪಂಡಿತ್ ಪ್ರೀತಿಯಿಂದ ಸ್ಮರಿಸಿ ಸಂಪೂರ್ಣ ಕಾರ್ಯಕ್ರಮದ ಗಮನ ಸೆಳೆದರು.

ಇದನ್ನೂ ಓದಿ :  ಪುನೀತ್ ನಿವಾಸಕ್ಕೆ ಸಂಜಯ್ ದತ್ : ಡಾ.ರಾಜ್ ಕುಟುಂಬಸ್ಥರಿಗೆ ಸಾಂತ್ವನ‌ ಹೇಳಿದ ಕೆಜಿಎಫ್-2 ವಿಲನ್

ಇದನ್ನೂ ಓದಿ : KGF Chapter 2 trailer : ಕೆಜಿಎಫ್-2 ಟ್ರೇಲರ್ ರಿಲೀಸ್‌ : ರಾಕಿ ಬಾಯ್ ಲುಕ್ ಗೆ ಫ್ಯಾನ್ಸ್ ಫಿದಾ

Radhika Pandit KGF Chapter 2 what She say

Comments are closed.