SSLC Student Heart Attack : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಹೃದಯಾಘಾತ

ಮೈಸೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆಯಲ್ಲಿ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ (SSLC Student Heart Attack) ಸಾವನ್ನಪ್ಪಿರುವ ಘಟನೆ ಮೈಸೂರಿನ ಟಿ. ನರಸೀಪುರದಲ್ಲಿ ನಡೆದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಅನುಶ್ರೀ ಎಂಬಾಕೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ವಿದ್ಯಾರ್ಥಿನಿ ಅನುಶ್ರೀ ಇಂದು ಮಾದಾಪುರದ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಟಿ. ನರಸೀಪುರದ ವಿದ್ಯೋದಯ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಂಡಿದ್ದಳು.

ಪರೀಕ್ಷೆ ಆರಂಭವಾಗುತ್ತಿದ್ದಂತೆಯೇ ಅನುಶ್ರೀ ಪರೀಕ್ಷೆಯನ್ನು ಬರೆಯಲು ಆರಂಭಿಸಿದ್ದಾಳೆ. ಈ ವೇಳೆಯಲ್ಲಿ ಅನುಶ್ರೀ ಅವರಿಗೆ ಹೃದಯಾಘಾತ ಉಂಟಾಗಿದೆ. ಕೊಠಡಿ ಮೇಲ್ವಿಚಾರಕರು ಎಚ್ಚೆತ್ತಕೊಂಡು ಇತರ ಶಿಕ್ಷಕರ ಸಹಕಾರದೊಂದಿಗೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬನ್ನಿ: ವಿದ್ಯಾರ್ಥಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

ಇದನ್ನೂ ಓದಿ : ಒತ್ತಡಕ್ಕೆ ಒಳಗಾಗ ಬೇಡಿ : ಶಾಂತಿಯಿಂದ ಪರೀಕ್ಷೆ ಬರೆಯಿರಿ: ಮಕ್ಕಳಿಗೆ ಶಿಕ್ಷಣ ಸಚಿವರ ಮನವಿ

SSLC Student heart attack while writing SSLC exam

Comments are closed.