ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಾಧನೆಯನ್ನು ಕ್ರಿಕೆಟ್ ಲೋಕ ಕೊಂಡಾಡುತ್ತಿದೆ. ಕ್ರಿಕೆಟ್ ಆಟಗಾರರು, ವಿಶ್ಲೇಷಕರು, ಅಭಿಮಾನಿಗಳು ಸೇರಿದಂತೆ ಎಲ್ಲೆಂಡೆಯಿಂದಲೇ ಹಾರ್ದಿಕ್‌ಗೆ ಪ್ರಶಂಸೆಯ ಸುರಿ ಮಳೆಯೇ ಹರಿದು ಬರುತ್ತಿದೆ. ಈ ನಡುವಲ್ಲೇ ಲಕ್ನೋ ಸೂಪರ್ ಜೈಂಟ್ಸ್ (LSG) ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯ ತನ್ನ ಸಹೋದರನಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ.
“ಜನರು ನಿಮ್ಮನ್ನು ಬರೆದಿದ್ದಾರೆ ಆದರೆ ನೀವು ಇತಿಹಾಸವನ್ನು ಬರೆಯುತ್ತಿದ್ದೀರಿ” ನನ್ನ ಸಹೋದರ, ನಿಮ್ಮ ಈ ಯಶಸ್ಸಿನ ಹಿಂದೆ ಎಷ್ಟು ಶ್ರಮವಿದೆ ಎಂಬುದು ನಿಮಗೆ ಮಾತ್ರ ತಿಳಿದಿದೆ. ಮುಂಜಾನೆ, ಲೆಕ್ಕವಿಲ್ಲದಷ್ಟು ಗಂಟೆಗಳ ತರಬೇತಿ, ಶಿಸ್ತು ಮತ್ತು ಮಾನಸಿಕ ಶಕ್ತಿ. ಮತ್ತು ನೀವು ಟ್ರೋಫಿಯನ್ನು ಎತ್ತುವುದನ್ನು ನೋಡುವುದು ನಿಮ್ಮ ಕಠಿಣ ಪರಿಶ್ರಮದ ಫಲವಾಗಿದೆ, ನೀವು ಎಲ್ಲದಕ್ಕೂ ಅರ್ಹರು ಎಂದು ಕೃನಾಲ್ ಪಾಂಡ್ಯ ಬರೆದುಕೊಂಡಿದ್ದಾರೆ. ಕೃನಾಲ್ ಪಾಂಡ್ಯ ಮಂಗಳವಾರ ಸಂಜೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ, “ಜನರು ನಿಮ್ಮನ್ನು ಬರೆದಿದ್ದಾರೆ ಆದರೆ ನೀವು ಇತಿಹಾಸವನ್ನು ಬರೆಯುತ್ತಿದ್ದೀರಿ. ಲಕ್ಷಕ್ಕೂ ಹೆಚ್ಚು ಜನ ನಿನ್ನ ಹೆಸರಿಟ್ಟು ಮೆಲುಕು ಹಾಕುತ್ತಿದ್ದಾಗ ನಾನಿದ್ದೆನೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರನ್ನು ಈ ಬಾರಿಯ ಐಪಿಎಲ್ ನಿಂದ ಮುಂಬೈ ತಂಡ ಬಿಡುಗಡೆಗೊಳಿಸಿತ್ತು. ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ತಂಡವನ್ನು ಸೇರಿಕೊಂಡ್ರು. ಅಲ್ಲದೇ ನಾಯಕತ್ವವನ್ನೂ ಹೆಗಲಿಗೇರಿಸಿತ್ತು. ಇತ್ತ ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆಲ್‌ರೌಂಡರ್ ಆಟದ ಮೂಲಕವೂ ಗಮನ ಸೆಳೆದಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ಕುರಿತು ಹಲವರು ಅಪಸ್ವರ ಎತ್ತಿದ್ದರು. ಅಲ್ಲದೇ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆಯೂ ಸಾಕಷ್ಟು ಅನುಮಾನಗಳಿದ್ದವು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಹೊಸ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ಪಾಂಡ್ಯ ಎಲ್ಲಾ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಗಾಯದ ಸಮಸ್ಯೆ, ಫಾರ್ಮ್ ಕಳೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಒಂದೇ ಒಂದು ಐಪಿಎಲ್ ಮೂಲಕ ತಮ್ಮ ಬೌಲಿಂಗ್, ಬ್ಯಾಟಿಂಗ್ ಜೊತೆಗೆ ತಾನೋರ್ವ ಉತ್ತಮ ನಾಯಕ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ. ಕೂಲ್ ಕ್ಯಾಫ್ಟನ್ ಅಂತಾನೇ ಕರೆಯಿಸಿ ಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕ ಅಂತಾನೂ ಹೇಳಲಾಗುತ್ತಿದೆ.
My bro 🤗 Only you know the amount of hard work that’s gone behind this success of yours – early mornings, countless hours of training, discipline and mental strength. And to see you lift the trophy is the fruits of your hard work ❤️ You deserve it all and so much more 😘😘 pic.twitter.com/qpLrxmjkZz
— Krunal Pandya (@krunalpandya24) May 31, 2022
ಐಪಿಎಲ್ ಲೀಗ್ ಹಂತದ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿತ್ತು. ನಂತರದಲ್ಲಿ ಐಪಿಎಲ್ ಫೈನಲ್ ಪಂದ್ಯದಲ್ಲಿಯೂ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪ್ರದರ್ಶನವನ್ನು ತೋರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು 17 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ 34 ರನ್ ಬಾರಿಸುವ ಮೂಲಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ : Hardik Pandya : ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕ
ಇದನ್ನೂ ಓದಿ : BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್ ಖಷ್
IPL 2022 Krunal Pandya very emotional message for brother Hardik Pandya