ಭಾನುವಾರ, ಏಪ್ರಿಲ್ 27, 2025
HomeSportsIPL 2022 Mega Auction : ಐಪಿಎಲ್‌ ಮೆಗಾ ಹರಾಜಿಗೆ ಸಿದ್ದತೆ : ಯಾವ ತಂಡದಲ್ಲಿ...

IPL 2022 Mega Auction : ಐಪಿಎಲ್‌ ಮೆಗಾ ಹರಾಜಿಗೆ ಸಿದ್ದತೆ : ಯಾವ ತಂಡದಲ್ಲಿ ಯಾರು ಉಳಿದುಕೊಂಡಿದ್ದಾರೆ : ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್‌

- Advertisement -

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ೧೫ನೇ ಆವೃತ್ತಿಗೆ ಸಿದ್ದತೆ ಜೋರಾಗಿ ನಡೆಯುತ್ತಿದೆ. ಲಕ್ನೋ ಹಾಗೂ ಅಹಮದಾಬಾದ್‌ ತಂಡಗಳ ಸೇರ್ಪಡೆಯಿಂದ ಒಟ್ಟು ತಂಡಗಳ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್‌ ಮೆಗಾ ಹರಾಜು (IPL 2022 Mega Auction)ಜನವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಇದೀಗ ಐಪಿಎಲ್‌ ತಂಡಗಳು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ಆಟಗಾರರ ವೇತನದ ಸಂಪೂರ್ಣ ಮಾಹಿತಿ ಇಲ್ಲಿದೆ.

IPL 2022 ರ ಮೆಗಾ ಹರಾಜಿಗೂ ಮೊದಲು ಹಳೆಯ ಐಪಿಎಲ್‌ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಒಟ್ಟು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ಲದೇ ನವೆಂಬರ್‌ ೩೦ರ ಓಳಗಾಗಿ ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಿದ್ದ ಪಡಿಸಬೇಕಾಗಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಪ್ರಾಂಚೈಸಿಗಳು ತಮ್ಮ ಆಟಗಾರರ ಪಟ್ಟಿಯನ್ನು ನೀಡುವಂತೆ ಕೇಳಿಕೊಂಡಿದೆ. ಅಲ್ಲದೇ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಎಷ್ಟು ಹಣವನ್ನು ವ್ಯಯಿಸಬೇಕು, ಆಟಗಾರರನ್ನು ಉಳಿಸಿಕೊಳ್ಳಲು ಯಾವ ಮಾನದಂಡವನ್ನು ಅನುಸರಿಸಬೇಕು ಅನ್ನೋ ಕುರಿತು ಮಾಹಿತಿಯನ್ನು ನೀಡಿದೆ.

ಐಪಿಎಲ್‌ ತಂಡಗಳು ಉಳಿಸಿಕೊಳ್ಳಲು ಯಾವೆಲ್ಲಾ ಮಾನದಂಡ ಅನುಸರಿಸಬೇಕು :

ಸಂಬಳದ ಮಿತಿ : 90 ಕೋಟಿ ರೂ

ಹಳೆಯ ಫ್ರಾಂಚೈಸಿಗಳು : ಎಂಟು ಹಳೆಯ ಫ್ರಾಂಚೈಸಿಗಳು ನವೆಂಬರ್ 30, 2021 ರೊಳಗೆ ಉಳಿಸಿಕೊಂಡಿರುವ ಆಟಗಾರರನ್ನು ಹೆಸರಿಸುತ್ತವೆ, ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದು.

ಹೊಸ ಫ್ರಾಂಚೈಸಿಗಳು : 2 ಹೊಸ ತಂಡಗಳು ತಮ್ಮ 3 ಆಟಗಾರರನ್ನು ಹರಾಜಿನ ಹೊರಗೆ ಡಿಸೆಂಬರ್ 1, 2021 ರಿಂದ ಡಿಸೆಂಬರ್ 30, 2021 ರ ನಡುವೆ ಅಂತಿಮಗೊಳಿಸಿವೆ. 2 ಭಾರತೀಯರು ಮತ್ತು 1 ವಿದೇಶಿಯರಿಗಿಂತ ಹೆಚ್ಚಿಲ್ಲ.

ಆರ್‌ಟಿಎಂ ಕಾರ್ಡ್‌ಗಳು : ಈ ಬಾರಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ಗಳೂ ಇರುವುದಿಲ್ಲ.

ಉಳಿಸಿಕೊಂಡಿರುವ ಆಟಗಾರರ ವೇತನ : ಬಿಸಿಸಿಐ ಅವರ ಆಯ್ಕೆಗಳ ಪ್ರಕಾರ ಸಂಬಳದ ಮಿತಿಯಿಂದ ಎಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ ಎಂಬುದನ್ನು ವಿವರಿಸಿದೆ.

ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಆಯ್ಕೆ ಮಾಡಿಕೊಂಡರೆ:

ರಿಟೈನ್‌ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 42 ಕೋಟಿ)

• ಮೊದಲ ರಿಟೈನ್‌ ಆಟಗಾರನಿಗೆ ರೂ 16 ಕೋಟಿ

• ಎರಡನೇ ರಿಟೈನ್‌ ಆಟಗಾರನಿಗೆ ರೂ 12 ಕೋಟಿ

• ಮೂರನೇ ರಿಟೈನ್‌ ಆಟಗಾರನಿಗೆ ರೂ 8 ಕೋಟಿ

• ನಾಲ್ಕನೇ ರಿಟೈನ್‌ ಆಟಗಾರನಿಗೆ ರೂ 6 ಕೋಟಿ

ಫ್ರಾಂಚೈಸಿಯು ಮೂರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ:

ರಿಟೈನ್‌ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 33 ಕೋಟಿ)

• ಮೊದಲ ರಿಟೈನ್‌ ಆಟಗಾರನಿಗೆ ರೂ 15 ಕೋಟಿ

• ಎರಡನೇ ರಿಟೈನ್‌ ಆಟಗಾರನಿಗೆ ರೂ 11 ಕೋಟಿ

• ಮೂರನೇ ರಿಟೈನ್‌ ಆಟಗಾರನಿಗೆ ರೂ 7 ಕೋಟಿ

ಫ್ರಾಂಚೈಸಿಯು ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ:

ರಿಟೈನ್‌ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 24 ಕೋಟಿ)

• ಮೊದಲ ರಿಟೈನ್‌ ಆಟಗಾರನಿಗೆ ರೂ 14 ಕೋಟಿ

• ಎರಡನೇ ರಿಟೈನ್‌ ಆಟಗಾರನಿಗೆ ರೂ 10 ಕೋಟಿ

ಫ್ರಾಂಚೈಸಿಯು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಆರಿಸಿಕೊಂಡರೆ:

ರಿಟೈನ್‌ ಆಟಗಾರರ ವೇತನದ ಆಯ್ಕೆ (ಒಟ್ಟು ರೂ 14 ಕೋಟಿ)

• ಮೊದಲ ರಿಟೈನ್‌ ಆಟಗಾರನಿಗೆ ರೂ 14 ಕೋಟಿ

ರಿಟೈನ್‌ ಆಟಗಾರರ ಪಟ್ಟಿ :

ಬಹು ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳಲು ಬಯಸುವ ಆಟಗಾರರನ್ನು ಬಹುತೇಕ ಅಂತಿಮಗೊಳಿಸಿವೆ.

ಚೆನ್ನೈ ಸೂಪರ್ ಕಿಂಗ್ಸ್ (CSK) : ಎಂಎಸ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ/ ಸ್ಯಾಮ್ ಕರ್ರಾನ್

ದೆಹಲಿ ಕ್ಯಾಪಿಟಲ್ಸ್ (DC): ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಆಂಡ್ರೆ ನಾರ್ಟ್ಜೆ.

ಮುಂಬೈ ಇಂಡಿಯನ್ಸ್‌ (MI) : ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್ (ಹೆಚ್ಚುವರಿ ಆಟಗಾರ)

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) : ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್

ರಾಜಸ್ಥಾನ್ ರಾಯಲ್ಸ್ (RR) : ಸಂಜು ಸ್ಯಾಮ್ಸನ್ 14 ಕೋಟಿ ರೂ

ಪಂಜಾಬ್‌ ಕಿಂಗ್ಸ್‌ (KXIP) : ಇನ್ನೂ ನಿರ್ಧರಿಸಬೇಕಿದೆ

ಸನ್‌ರೈಸಸ್‌ ಹೈದ್ರಾಬಾದ್‌ (SRH) : ಇನ್ನೂ ನಿರ್ಧರಿಸಬೇಕಿದೆ

ಐಪಿಎಲ್‌ ಸ್ಟಾರ್‌ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್‌ ಕಿಂಗ್ಸ್‌ ಜೊತೆಗಿನ ಒಡನಾಟವನ್ನು ಕೊನೆಗೊಳಿಸಲಿದ್ದಾರೆ. ಅಲ್ಲದೇ ಹೊಸ ಪ್ರಾಂಚೈಸಿಯಾಗಿರುವ ಲಕ್ನೋ ತಂಡದ ನಾಯಕರಾಗಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ರಾಹುಲ್‌ ಈಗಾಗಲೇ ಪ್ರಾಂಚೈಸಿ ಜೊತೆಗೆ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಐಪಿಎಲ್ ಆಡಳಿತ ಮಂಡಳಿಯ ಸದಸ್ಯರ ಪ್ರಕಾರ, ಐಪಿಎಲ್ 2022 ರ ಮೆಗಾ ಹರಾಜು ಜನವರಿ 2022 ರ ಮೊದಲ ವಾರದಲ್ಲಿ ನಡೆಯಲಿದೆ.

ಈ ಬಾರಿ IPL 2022 ರ ಮೆಗಾ ಹರಾಜು ಹಾಗೂ ಪಂದ್ಯಾವಳಿ ಭಾರತದಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೇ IPL 2022 ಮೆಗಾ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಅಭಿಮಾನಿಗಳು ಪಂದ್ಯಾವಳಿಯನ್ನು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.

ಇದನ್ನೂ ಓದಿ : ಒಂದೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ತ್ರಿವಿಕ್ರಮರು : ಸಚಿನ್‌, ಗಂಗೂಲಿ, ರಾಹುಲ್‌ ದಾಖಲೆ ನಿಮಗೆ ಗೊತ್ತಾ

ಇದನ್ನೂ ಓದಿ : K L RAHUL : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

( IPL 2022 Mega Auction: Full list of retained players, salary, rules, schedule and other details )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular