Lockdown Karnataka : ಒಮಿಕ್ರಾನ್ ಆತಂಕ : ರಾಜ್ಯದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್ ? ಸ್ಪಷ್ಟನೆ ಕೊಟ್ಟ ಸಿಎಂ

ಬೆಂಗಳೂರು : ಒಮಿಕ್ರಾನ್ ( Omicron ) ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ( Lockdown Karnataka) ಆತಂಕ ಎದುರಾಗಿದೆ. ಧಾರವಾಡ, ಚಾಮರಾಜನಗರ, ಆನೇಕಲ್ ಸೇರಿದಂತೆ ರಾಜ್ಯದ ವಿವಿಧೆಡೆ ಸೋಂಕಿನ ಪ್ರಮಾಣ ಹೆಚ್ಚಲಾರಂಭಿಸಿದ್ದು ರಾಜ್ಯ ಮತ್ತೊಮ್ಮೆ ಲಾಕ್ ಆಗಲಿದ್ಯಾ ಎಂಬ ಆತಂಕ ಜನಸಾಮಾನ್ಯರಲ್ಲಿ ಮನೆ ಮಾಡಿದೆ. ಈ ಮಧ್ಯೆ ಸಿಎಂ ಹಾಗೂ ಅರೋಗ್ಯ ಸಚಿವರು ಲಾಕ್ ಡೌನ್ ಬಗ್ಗೆ ಮಹತ್ವದ ಮಾಹಿತಿ‌ನೀಡಿದ್ದಾರೆ.

ರಾಜ್ಯ ಸೇರಿದಂತೆ ದೇಶದಾದ್ಯಂತ ಒಮಿಕ್ರಾನ್ ಭೀತಿ ಎದುರಾಗಿದೆ. ಹೈರಿಸ್ಕ್ ದೇಶಗಳಿಂದ ನಗರಕ್ಕೆ ಈಗಾಗಲೇ 598 ಜನರು ಆಗಮಿಸಿದ್ದು ಆರೋಗ್ಯ ಇಲಾಖೆ ಅವರ ಬಗ್ಗೆ ನಿಗಾ ವಹಿಸಿದೆ. ಈ‌ ಮಧ್ಯೆ ರಾಜ್ಯದಲ್ಲಿ ಮತ್ತೆ ನಾಲ್ಕು ವಾರಗಳ ಲಾಕ್ ಡೌನ್ ಜಾರಿಯಾಗಲಿದೆ ಎಂದ ವದಂತಿಗಳು ದಟ್ಟವಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಜನರು ಆತಂಕಕ್ಕೊಳಗಾಗಿದ್ದು ಲಾಕ್ ಡೌನ್ ಜಾರಿಯಾದರೇ ದುಡಿಯುವ ವರ್ಗದ ಕತೆಯೇನು ಎಂಬ ಆತಂಕವೂ ಇದೆ.

ಈ ಎಲ್ಲ ಆತಂಕಗಳ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ದಾವಣೆಗೆರೆಯಲ್ಲಿ ಮಾತನಾಡಿದ್ದು, ಜನರು ಯಾವುದೇ ರೀತಿಯಲ್ಲೂ ಪ್ಯಾನಿಕ್ ಆಗುವ ಅಗತ್ಯವಿಲ್ಲ. ನಮ್ಮ ಮುಂದೇ ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾಪವೇ ಇಲ್ಲ ಎಂದಿದ್ದಾರೆ. ಸ್ಕೂಲ್ ಮತ್ತು ಕಾಲೇಜ್ ಗಳ‌ಮೇಲೆ ನಿಗಾ ಇಡಲು ಹೇಳಿದ್ದೇವೆ.‌ ಕ್ಲೋಸ್ ಡೌನ್ ಮಾಡಲು ಹೇಳಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ಕರೋನಾ ನಿಯಮಗಳನ್ನು ಪಾಲಿಸಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೂಸ್ಟರ್ ಡೋಸ್ ಬಗ್ಗೆಯೂ ಮಾತನಾಡಿದ ಸಿಎಂ ಆರೋಗ್ಯ ಕಾರ್ಯಕರ್ತರಿಗೆ ಆರು ತಿಂಗಳ ಮೊದಲು ನೀಡಲಾಗಿದೆ. ಉಳಿದವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.

ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಜನ ಈಗಾಗಲೇ ಬಹಳಷ್ಟು ನೊಂದಿದ್ದಾರೆ.‌ಜನ ಈಗಾಗಲೇ ಸಾಕಷ್ಟು ಜೀವಗಳನ್ನು ಕಳೆದುಕೊಂಡಿ ದ್ದಾರೆ. ಅರ್ಥಿಕ‌ನಷ್ಟ ಹೊಂದಿದ್ದಾರೆ. ಹೀಗಾಗಿ ಮತ್ತೆ ಜನರನ್ನು ಹೆದರಿಸುವ ಕೆಲಸ ಮಾಡಬಾರದು. ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿಯ ತಪ್ಪು ಸಂದೇಶ ಹರಡುವುದನ್ನು ಗಂಭೀರ ವಾಗಿ ಪರಿಗಣಿಸುತ್ತೇವೆ ಎಂದು ಡಾ.ಸುಧಾಕರ್ ಎಚ್ಚರಿಸಿದ್ದಾರೆ. ಬಿಬಿಎಂಪಿ ಸೇರಿದಂತೆ ರಾಜ್ಯದಾದ್ಯಂತ ಗಡಿಭಾಗಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಲಾಗಿದ್ದು , ಪರೀಕ್ಷೆ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ.

ಇದನ್ನೂ ಓದಿ : ಕೊರೋನಾ ಬಳಿಕ Omicron ಆತಂಕ : ಸಿಲಿಕಾನ್ ಸಿಟಿಗೆ ಬಂದ 598 ಜನರ ಮೇಲೆ ವಿಶೇಷ ನಿಗಾ

ಇದನ್ನೂ ಓದಿ : Omicron ಭೀತಿಯಲ್ಲಿ ಶಾಲೆ ಬಂದ್‌ : ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ ?

(Omicron Anxiety: Lockdown Karnataka in the State)

Comments are closed.