Ganesh : ಬಾಡಿಗೆ ಮನೆಗಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹುಡುಕಾಟ ! ಸಖತ್‌ ಆಗಿದೆ ಗಣಿ- ಸುನಿ ಜುಗಲ್ ಬಂದಿ

ಗೋಲ್ಡನ್ ಸ್ಟಾರ್ ಗಣೇಶ್ (Ganesh) ಹಾಗೂ ಸಿಂಪಲ್ ಸುನಿ ಕಾಂಬಿನೇಷನ್‌ನ ಸಖತ್ ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸುನಿ ಡೈಲಾಗ್. ಗಣಿ ಆಕ್ಟಿಂಗ್ ಗೆ ಪ್ರೇಕ್ಷಕ ಪ್ರಭು ಬಹುಪರಾಕ್ ಅಂತಿದ್ದಾನೆ. ಚಿತ್ರಪ್ರೇಮಿಗಳನ್ನು ನಕ್ಕು ನಲಿಸುತ್ತಿರುವ ಸಖತ್ ಸಿನಿಮಾದ ಕಥೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಸಖತ್ ಸಿನಿಮಾದ ಬಾಡಿಗೆ ಮನೆ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Greatly accomplished Release Event of Sakath Pre Release

ಬಾಡಿಗೆ ಮನೆಗಾಗಿ ಸಿನಿಮಾದ ನಾಯಕ ಎಷ್ಟೆಲ್ಲಾ ಕಷ್ಟಪಡುತ್ತಾನೆ ಅನ್ನೋದನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಹಾಡಿನ ಜೊತೆಗೆ ಬರುವ ಕಾಮಿಡಿ ಡೈಲಾಗ್ಸ್ ಅಂತೂ ಸಖತ್ ಮಜಾ ಕೊಡ್ತಿವೆ. ಗಣೇಶ್ ಹಾಗೂ ಧರ್ಮಣ್ಣ ಕಡೂರು ಕಾಮಿಡಿ ಜುಗಲ್ ಬಂದಿ ನೋಡೋದಿಕ್ಕೆ ಸಖತ್ ಆಗಿದೆ. ನಾಯಕಿ ಸುರಭಿ ಈ ಹಾಡಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚರೀಶ್ ಗೌಡ, ಜೈಶಾಂತ್ ಲಿರಿಕ್ಸ್ ಬರೆದಿರುವ ಮನೆ ಬೇಕು ಹಾಡನ್ನು ನಾರಾಯಣ ಶರ್ಮಾ ಹಾಡಿದ್ದು, ಜೂಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಸಖತ್ ಸಿನಿಮಾದಲ್ಲಿ ಸಿಂಪಲ್ ಸುನಿ ಡೈಲಾಗ್ಸ್ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಗೋಲ್ಡನ್ ಸ್ಟಾರ್ ಗಣೇಶ್ ಕಂಬ್ಯಾಕ್ ಅಂತಾ ಫ್ಯಾನ್ಸ್ ಜೈಕಾರ ಮೊಳಗಿಸ್ತಿದ್ದಾರೆ. ಗಣಿ ಸುನಿ ಜೋಡಿ ಚಮಕ್ ಬಳಿಕ ಮತ್ತೆ ಒಂದಾಗಿ ಮಾಡಿರುವ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಬೆಂಗಳೂರಿನ ವೀರೇಶ್ ಥಿಯೇಟರ್ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು, ಡೈರೆಕ್ಟರ್ ಸಿಂಪಲ್ ಸುನಿ ಸಖತ್ ಖುಷಿಯಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಡಿ ತೆರೆಗೆ ಅಪ್ಪಳಿಸಿರುವ ಸಖತ್ ಸಿನಿಮಾವನ್ನು ಸುಪ್ರಿತ್ – ನಿಶಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ : ಅದ್ಧೂರಿಯಾಗಿ ನೆರವೇರಿತು ‘ಸಖತ್’ ಪ್ರೀ-ರಿಲೀಸ್ ಇವೆಂಟ್ : ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ

ಇದನ್ನೂ ಓದಿ : ತಿಂಗಳ ಪುಣ್ಯತಿಥಿಯಂದೇ ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ: ನಗರದ ರಸ್ತೆಗೆ ಅಪ್ಪು ಹೆಸರು

(Golden Star Ganesh Search For Rent Home)

Comments are closed.