ಭಾನುವಾರ, ಏಪ್ರಿಲ್ 27, 2025
HomeSportsCricketIPL 2024 : ಐಪಿಎಲ್‌ನಲ್ಲಿ ಈ ಬಾರಿ ಯಾವ ತಂಡ ಬೆಸ್ಟ್‌ : ಇಲ್ಲಿದೆ ಎಲ್ಲಾ...

IPL 2024 : ಐಪಿಎಲ್‌ನಲ್ಲಿ ಈ ಬಾರಿ ಯಾವ ತಂಡ ಬೆಸ್ಟ್‌ : ಇಲ್ಲಿದೆ ಎಲ್ಲಾ 10 ತಂಡಗಳ ಆಟಗಾರರ ಸಂಪೂರ್ಣ ವಿವರ

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌  (Indian Premier League 2024 Auction ) ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೇ ಮೊದಲ ಬಾರಿಗೆ ಆಟಗಾರರು ದಾಖಲೆಯ ಮೊತ್ತಕ್ಕೆ ಹರಾಜು ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಮಿಚೆಲ್ ಸ್ಟಾರ್ಕ್ (mitchell starc) ಅವರನ್ನು 24.75 ಕೋಟಿ ಬೆಲೆಗೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ಪ್ಯಾಟ್‌ ಕುಮಿನ್ಸ್‌ (Pat Cummins) ಬರೋಬ್ಬರಿ 20 ಕೋಟಿ ಗೂ ಅಧಿಕ ಮೊತ್ತಕ್ಕೆ ಸೇಲ್‌ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ಹಾಗಾದ್ರೆ ಯಾವ ಆಟಗಾರರು ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎಂಎಸ್‌ ಧೋನಿ ನೇತೃತ್ವದಲ್ಲಿ ಕಳೆದ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಬಾರಿಯೂ ಬಲಿಷ್ಟ ತಂಡವನ್ನೇ ಚೆನ್ನೈ ಹೊಂದಿದೆ. ಅದ್ರಲ್ಲೂ ಮಿನಿ ಹರಾಜಿನಲ್ಲಿ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹೊರ ಬಿದ್ದ ನಂತರ ನ್ಯೂಜಿಲೆಂಡ್‌ ಆಟಗಾರ ಭಾರತೀಯ ಮೂಲದ ರಚಿನ್ ರವೀಂದ್ರ ಅವರನ್ನು ಕೇವಲ 1.8 ಕೋಟಿಗೆ ಖರೀದಿ ಮಾಡಿದೆ. ಶಾರ್ದೂಲ್ ಠಾಕೂರ್ 4 ಕೋಟಿ, ಕಿವೀಸ್‌ ನ ಡೇರಿಲ್ ಮಿಚೆಲ್ ಅವರನ್ನು14 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ:
ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್‌ವಾಡ್, ರಾಜವರ್ಧನ್ ಹಂಗರ್‌ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮತೀಶ ಪತಿರಾನ, ಅಜಿಂಕ್ಯ ರಹಾನೆ, ಎಂ.ಎಸ್. ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

ಕೋಲ್ಕತ್ತಾ ನೈಟ್ ರೈಡರ್ಸ್
ಕೆಕೆಆರ್‌ ತಂಡ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಈ ಬಾರಿ ದಾಖಲೆಯ ಮೊತ್ತಕ್ಕೆ ಮಿಚೆಲ್ ಸ್ಟಾರ್ಕ್‌ ಅವರನ್ನು 24.75 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಮುಜೀಬ್ ಉರ್ ರೆಹಮಾನ್ (2 ಕೋಟಿ), ಶೆರ್ಫೇನ್ ರುದರ್‌ಫೋರ್ಡ್ (1.5 ಕೋಟಿ), KS ಭರತ್ ( 50 ಲಕ್ಷ), ಮನೀಶ್ ಪಾಂಡೆ ( 50 ಲಕ್ಷ), ಚೇತನ್ ಸಕರಿಯಾ (50 ಲಕ್ಷ) , ಆಂಗ್‌ಕ್ರಿಶ್ ರಘುವಂಶಿ (20 ಲಕ್ಷ), ರಮಣದೀಪ್ ಸಿಂಗ್ (20 ಲಕ್ಷ) ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಇದನ್ನೂ ಓದಿ : ಪ್ಯಾಟ್‌ ಕಮಿನ್ಸ್‌ ಐಪಿಎಲ್‌ನ ದುಬಾರಿ ಆಟಗಾರ : ಐಪಿಎಲ್‌ನಲ್ಲೇ ದಾಖಲೆಯ 20.50 ಕೋಟಿಗೆ ಖರೀದಿಸಿದ ಹೈದ್ರಾಬಾದ್‌

ಕೆಕೆಆರ್ ತಂಡ :
ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್ (ನಾಯಕ), ಜೇಸನ್ ರಾಯ್, ಸುನಿಲ್ ನರೈನ್, ಸುಯಾಶ್ ಶರ್ಮಾ, ಅನುಕೂಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕಾರವರ್ತಿ, ಕೆಎಸ್ ಭರತವರ್ತಿ, ಸಕರಿಯಾ, ಮಿಚೆಲ್ ಸ್ಟಾರ್ಕ್, ಆಂಗ್ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಶೆರ್ಫಾನೆ ರುದರ್ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರೆಹಮಾನ್, ಗಸ್ ಅಟ್ಕಿನ್ಸನ್, ಸಾಕಿಬ್ ಹುಸೇನ್.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್‌ ತಂಡ ನಾಯಕನನ್ನು ಬದಲಾಯಿಸಿದೆ. ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರ್ಪಡೆ ಆಗಿದ್ದು, ನಾಯಕನಾಗಿಯೂ ಆಯ್ಕೆಯಾಗಿದ್ದಾರೆ. ಮುಂಬೈ ತಂಡ ಜೆರಾಲ್ಡ್ ಕೋಟ್ಜಿ ಅವರನ್ನು 5 ಕೋಟಿ ರೂಪಾಯಿ ಖರೀದಿಸಿದೆ. ಜೋಫ್ರಾ ಆರ್ಚರ್ ಅವರ ಬಿಡುಗಡೆಯ ಬೆನ್ನಲ್ಲೇ ಜೆರಾಲ್ಡ್ ಕೋಟ್ಜಿ ಖರೀದಿಸಿದೆ. ಅಲ್ಲದೇ ದಿಲ್ಶನ್ ಮಧುಶಂಕ (4.6 ಕೋಟಿ), ನುವಾನ್ ತುಷಾರ (4.8 ಕೋಟಿ), ಶ್ರೇಯಸ್ ಗೋಪಾಲ್, ಪಿಯೂಷ್ ಚಾವ್ಲಾ, ಮೊಹಮ್ಮದ್ ನಬಿ (1.5 ಕೋಟಿ) ಅವರನ್ನು ಖರೀದಿ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಪಿಯೂಷ್ ಚಾವ್ಲಾ, ಡೆವಾಲ್ಡ್ ಬ್ರೆವಿಸ್, ಅರ್ಜುನ್ ತೆಂಡೂಲ್ಕರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್,ಶಾಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂದೋರ್ಫ್ , ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ನಮನ್ ಧೀರ್, ಅನ್ಶುಲ್ ಕಾಂಬೋಜ್, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.

ಸನ್ ರೈಸರ್ಸ್ ಹೈದರಾಬಾದ್
ಸನ್‌ರೈಸಸ್‌ ಹೈದ್ರಾಬಾದ್‌ ತಂಡ ಈ ಬಾರಿ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ಅದ್ರಲ್ಲೂ ಬ್ಯಾಟಿಂಗ್‌ಗೆ ಟ್ರಾವೆಸ್‌ ಹೆಡ್‌ ಹಾಗೂ ಬೌಲಿಂಗ್‌ಗೆ ಪ್ಯಾಟ್‌ ಕಮಿನ್ಸ್‌ ಅವರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದೆ. SRH ಅವರು ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿಗೆ ಖರೀದಿಸಿ ಇತಿಹಾಸ ಸೃಷ್ಟಿಸಿದೆ. ಸನ್‌ರೈಸಸ್‌ ಹೈದ್ರಾಬಾದ್‌ ಟ್ರಾವೆಸ್‌ ಹೆಡ್‌ ಅವರನ್ನು 6.8 ಕೋಟಿ, ವನಿಂದು ಹಸರಂಗ (1.5 ಕೋಟಿ), ಜಯದೇವ್ ಉನದ್ಕತ್ (1.6 ಕೋಟಿ) ಅವರನ್ನು ಖರೀದಿಸಿದೆ.

ಇದನ್ನೂ ಓದಿ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರ್ತಾರಾ ಈ ಡೆತ್‌ ಬೌಲರ್‌

ಸನ್‌ರೈಸಸ್‌ ಹೈದ್ರಾಬಾದ್‌ :
ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ (ನಾಯಕ), ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ. ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಹ್ಮಣ್ಯನ್.

ಡೆಲ್ಲಿ ಕ್ಯಾಪಿಟಲ್ಸ್‌
ಸೌರವ್ ಗಂಗೂಲಿ, ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಿನಿ ಹರಾಜಿನಲ್ಲಿ ಹಲವು ಆಟಗಾರರನ್ನು ಖರೀದಿಸಿದೆ. ಹ್ಯಾರಿ ಬ್ರೂಕ್ ಅವರನ್ನು ಕೇವಲ( 4 ಕೋಟಿ), ಝೈ ರಿಚರ್ಡ್ಸನ್ (5 ಕೋಟಿ), ಶಾಯ್ ಹೋಪ್ (75 ಲಕ್ಷ), ಡಿಸಿ ಕುಮಾರ್ ಕುಶಾಗ್ರ ( 7.2 ಕೋಟಿ) ಅವರನ್ನು ಖರೀಸಿದೆ. ರಿಷಬ್‌ ಪಂತ್‌ ಐಪಿಎಲ್‌ಗೆ ಎಂಟ್ರಿ ಕೊಟ್ಟಿರುವುದು ತಂಡಕ್ಕೆ ಆನೆಬಲ ಬಂದಂತಾಗಿದೆ.

IPL 2024 Auction  Which team is the best in IPL this time, Here is the complete details of players of all 10 teams
Image Credit to Original Source

ಡೆಲ್ಲಿ ಕ್ಯಾಪಿಟಲ್ಸ್‌ ತಂಡ :
ರಿಷಭ್ ಪಂತ್ (ನಾಯಕ), ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಒಸ್ತ್ವಾಲ್, ಮುಖೇಶ್ ಕುಮಾರ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರಸಿಖ್ ದಾರ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ,ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಧುಲ್, ಹ್ಯಾರಿ ಬ್ರೂಕ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರಾ, ಝೈ ರಿಚರ್ಡ್ಸನ್.

ಪಂಜಾಬ್ ಕಿಂಗ್ಸ್
ಪಂಜಾಬ್‌ ಕಿಂಗ್ಸ್‌ ತಂಡ ಕಳೆದ ಕೆಲವು ಐಪಿಎಲ್‌ಗಳಿಂದಲೂ ನಿರಾಸೆಯನ್ನು ಅನುಭವಿಸಿದೆ. ಅದ್ರಲ್ಲೂ ಈ ಬಾರಿ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಬಲ ಗಟ್ಟಿಗೊಳಿಸಿದೆ. ಆರ್‌ಸಿಬಿ ತಂಡ ಮಾಜಿ ವೇಗಿ ಹರ್ಷಲ್ ಪಟೇಲ್ ಅವರನ್ನು ಬರೋಬ್ಬರಿ 11.75 ಕೋಟಿ ರೂಪಾಯಿಗೆ ಖರೀದಿಸಿದೆ. ರಿಲೀ ರೊಸೊವ್ ( 8 ಕೋಟಿ), ಇಂಗ್ಲೆಂಡ್‌ ಆಲ್ ರೌಂಡರ್ ಕ್ರಿಸ್ ವೋಕ್ಸ್ (4.2 ಕೋಟಿ), ವಿಶ್ವನಾಥ್ ಸಿಂಗ್ (20 ಲಕ್ಷ), ಶಶಾಂಕ್ ಸಿಂಗ್ (20 ಲಕ್ಷ), ತನಯ್ ತ್ಯಾಗರಾಜನ್ (20 ಲಕ್ಷ) ಮತ್ತು ಪ್ರಿನ್ಸ್ ಚೌಧರಿ (20 ಲಕ್ಷ) ಅವರನ್ನು ಖರೀದಿ ಮಾಡಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ರಿಯಲ್‌ ಕಿಂಗ್‌ ! 25 ವರ್ಷದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಆದ ಕ್ರಿಕೆಟಿಗ ಕಿಂಗ್‌ ಕೊಹ್ಲಿ

ಪಂಜಾಬ್‌ ಕಿಂಗ್ಸ್‌ ತಂಡ:
ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಸಿಕಂದರ್ ರಜಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಸ್ಯಾಮ್ ಕರ್ರಾನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಹರ್ಷಲ್ ಪಟೇಲ್, ಕ್ರಿಸ್ ವೋಕ್ಸ್, ಅಶುತೋಷ್ ಶರ್ಮಾ, ವಿಶ್ವನಾಥ್ ಪ್ರತಾಪ್ ಸಿಂಗ್, ಶಶಾಂಕ್ ಸಿಂಗ್, ತನಯ್ ತ್ಯಾಗರಾಜನ್, ಪ್ರಿನ್ಸ್ ಚೌಧರಿ, ರಿಲೀ ರೋಸೌವ್.

ಗುಜರಾತ್ ಟೈಟಾನ್ಸ್
ತಾನಾಡಿದ ಮೊದಲ ಐಪಿಎಲ್‌ನಲ್ಲಿಯೇ ಪ್ರಶಸ್ತಿಯನ್ನು ಜಯಿಸಿರುವ ಗುಜರಾತ್‌ ಟೈಟಾನ್ಸ್‌ ತಂಡದಿಂದ ನಾಯಕ ಹಾರ್ದಿಕ್‌ ಪಾಂಡ್ಯ ಬೇರ್ಪಟ್ಟಿದ್ದಾರೆ. ಆಸ್ಟ್ರೇಲಿಯಾ ವೇಗಿ ಜಾನ್ಸನ್ ಅವರನ್ನು 10 ಕೋಟಿ ಮೊತ್ತಕ್ಕೆ ಗುಜರಾತ್‌ ಟೈಟಾನ್ಸ್‌ ಖರೀದಿಸಿದೆ. ಶಾರುಖ್ ಖಾನ್ (7.4 ಕೋಟಿ), ಉಮೇಶ್ ಯಾದವ್ (5.8 ಕೋಟಿ) , ರಾಬಿನ್ ಮಿಂಜ್ (3.6 ಕೋಟಿ) ಕಾರ್ತಿಕ್ ತ್ಯಾಗಿ (60 ಲಕ್ಷ), ಅಜ್ಮತುಲ್ಲಾ ಒಮರ್ಜಾಯ್ (50 ಲಕ್ಷ) ಆಟಗಾರರನ್ನು ಸೇರ್ಪಡೆಗೊಳಿಸಿದೆ.

ಗುಜರಾತ್‌ ಟೈಟಾನ್ಸ್‌ ತಂಡ:
ಡೇವಿಡ್ ಮಿಲ್ಲರ್, ಶುಬ್ಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್ , ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಬಿ. ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಮಿನಿ ಹರಾಜಿನಲ್ಲಿ ಬೌಲರ್‌ಗಳಿಗೆ ಹೆಚ್ಚು ಮಣೆ ಹಾಕಿದೆ. ಪ್ರಮುಖವಾಗಿ ಕ್ಯಾಮೆರಾನ್ ಗ್ರೀನ್‌ ಅವರನ್ನು ಖರೀದಿಸಿದ್ದು, ಹರಾಜಿನಲ್ಲಿ ಅಲ್ಜಾರಿ ಜೋಸೆಫ್( 11.5 ಕೋಟಿ) ಗೆ ಖರೀದಿ ಮಡಿದೆ. ಲಾಕಿ ಫರ್ಗುಸನ್ ( 2 ಕೋಟಿ), ಯಶ್ ದಯಾಳ್(5 ಕೋಟಿ), ಟಾಮ್ ಕರ್ರನ್ (1.5 ಕೋಟಿ) ಗೆ ಅವರನ್ನು ಖರೀದಿ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ :
ಕ್ಯಾಮರೂನ್ ಗ್ರೀನ್, ವಿರಾಟ್ ಕೊಹ್ಲಿ, ಅಲ್ಜಾರಿ ಜೋಸೆಫ್, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ (ನಾಯಕ), ಮೊಹಮ್ಮದ್ ಸಿರಾಜ್, ದಿನೇಶ್ ಕಾರ್ತಿಕ್, ಮಯಾಂಕ್ ದಾಗರ್, ಟಾಮ್ ಕರ್ರಾನ್, ಮಹಿಪಾಲ್ ಲೊಮ್ರೋರ್, ರಾಜನ್ ಕುಮಾರ್, ಕರ್ನ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಯಶ್ ದಯಾಳ್, ಹಿಮಾಂಶು ಶರ್ಮಾ, ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ವಿಲ್ ಜಾಕ್ಸ್, ಲಾಕಿ ಫರ್ಗುಸನ್, ರೀಸ್ ಟಾಪ್ಲೆ, ಮನೋಜ್ ಭಾಂಡಗೆ, ಆಕಾಶ್ ದೀಪ್, ಸೌರವ್ ಚೌಹಾಣ್, ವೈಶಾಕ್ ವಿಜಯ್ಕುಮಾರ್, ರಜತ್ ಪಾಟಿದಾರ್

IPL 2024 Auction  Which team is the best in IPL this time, Here is the complete details of players of all 10 teams
Image Credit to Original Source

ಲಕ್ನೋ ಸೂಪರ್ ಜೈಂಟ್ಸ್
ಕನ್ನಡಿಗ ಕೆಎಲ್‌ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರು ಮಂದಿ ಆಟಗಾರರನ್ನು ಮಿನಿ ಹರಾಜಿನಲ್ಲಿ ಖರೀದಿ ಮಾಡಿದೆ. ಇಂಗ್ಲೆಂಡ್‌ ಆಲ್‌ರೌಂಡರ್‌ ಡೇವಿಡ್ ವಿಲ್ಲಿ, ಅರ್ಶಿನ್ ಕುಲಕರ್ಣಿ, ಮೊ. ಅರ್ಷದ್ ಖಾನ್, ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ M. ಸಿದ್ಧಾರ್ಥ್ ಅವರನ್ನು ಖರೀದಿ ಮಾಡಿದೆ.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡ :
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಯುಧ್‌ವೀರ್ ಸಿಂಗ್, ಪ್ರೇರಕ್ ಮಂಕಡ್ ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಕೆ. ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆಶ್ಟನ್ ಟರ್ನರ್, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್, ಡೇವಿಡ್ ವಿಲ್ಲಿ, ಮೊಹಮ್ಮದ್. ಅರ್ಷದ್ ಖಾನ್.

ರಾಜಸ್ಥಾನ್ ರಾಯಲ್ಸ್
ಐಪಿಎಲ್‌ ಮಿನಿ ಹರಾಜಿಗೂ ಮೊದಲೇ ರಾಜಸ್ಥಾನ ರಾಯಲ್ಸ್‌ ತಂಡ ಹಲವು ಆಟಗಾರರನ್ನು ಬಿಡುಗಡೆ ಮಾಡಿದೆ. ಜೋ ರೂಟ್ ಅವರನ್ನು ಕೈ ಬಿಟ್ಟ ರಾಯಲ್ಸ್‌ ತಂಡ, ವೆಸ್ಟ್ ಇಂಡೀಸ್ ಪವರ್-ಹಿಟ್ಟರ್ ರೋವ್‌ಮನ್ ಪೊವೆಲ್ ಅವರನ್ನು 7.4 ಕೋಟಿ ರೂ. ರೂಪಾಯಿಗೆ ಖರೀದಿ ಮಾಡಿದೆ. ದಕ್ಷಿಣ ಆಫ್ರಿಕಾದ ವೇಗಿ ನಾಂಡ್ರೆ ಬರ್ಗರ್, ವಿಕೆಟ್ ಕೀಪರ್ ಟಾಮ್ ಕೊಹ್ಲರ್-ಕ್ಯಾಡ್ಮೋರ್, ಆಲ್-ರೌಂಡರ್ ಅಬಿದ್ ಮುಷ್ತಾಕ್ ಅವರನ್ನು ಖರೀದಿಸಿದೆ.

ರಾಜಸ್ಥಾನ ರಾಯಲ್ಸ್‌ ತಂಡ :

ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಬೌಲ್ಟ್ ಚಾಹಲ್, ಆಡಮ್ ಝಂಪಾ, ಅವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್-ಕಾಡ್ಮೋರ್, ಅಬಿದ್ ಮುಷ್ತಾಕ್, ನಾಂದ್ರೆ ಬರ್ಗರ್.

IPL 2024 Auction  Which team is the best in IPL this time, Here is the complete details of players of all 10 teams

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular