indian premier league 2024: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2023) ಮುಂಬೈ ಹೊಸ ನಾಯಕನೊಂದಿಗೆ ಕಣಕ್ಕೆ ಇಳಿಯಲಿದೆ ಎಂದು ಘೋಷಿಸಿತ್ತು. ಆದ್ರೆ ಇದೀಗ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರ ಪಾದದ ಗಾಯದಿಂದಾಗಿ ಇನ್ನಷ್ಟು ಸಮಯ ವಿಶ್ರಾಂತಿ ಅಗತ್ಯವಿದೆ. ಇದೇ ಕಾರಣದಿಂದಾಗಲೇ ಪಾಂಡ್ಯ ಮುಂಬರುವ ಐಪಿಎಲ್ ಸರಣಿ ಆಡುವುದೇ ಅನುಮಾನ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಮಿನಿ ಹರಾಜಿನಲ್ಲಿ ಒಟ್ಟು 72 ಆಟಗಾರರನ್ನು ವಿವಿಧ ತಂಡಗಳು ಖರೀದಿ ಮಾಡಿವೆ. 10 ತಂಡಗಳು ಒಟ್ಟು 230.45 ಕೋಟಿ ರೂಪಾಯಿಯನ್ನು IPL 2024ಕ್ಕೆ ವಿನಿಯೋಗಿಸಿವೆ. ಆದ್ರಲ್ಲೂ ಮುಂಬೈ ಇಂಡಿಯನ್ಸ್ ತಂಡ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ತಂಡದಿಂದ ಖರೀದಿಸಿತ್ತು.

ಮುಂಬೈ ಇಂಡಿಯನ್ಸ್ ತಂಡದ ನಾಯಕ ಮತ್ತು ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಕಾಲಿನ ಪಾದದ ಸಮಸ್ಯೆಗೆ ತುತ್ತಾಗಿದ್ದರು. ಇದರಿಂದಾಗಿಯೇ ವಿಶ್ವಕಪ್ ಸರಣಿಯಿಂದ ಪಾಂಡ್ಯ ಅರ್ಧದಲ್ಲಿಯೇ ಹೊರ ನಡೆದಿದ್ದಾರೆ. ಆದರೆ ಪಾದದ ಗಾಯದ ಸಮಸ್ಯೆಯಿಂದ ಇನ್ನೂ ಗುಣಮುಖರಾಗಿಲ್ಲ.
ಇದನ್ನೂ ಓದಿ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರ್ತಾರಾ ಈ ಡೆತ್ ಬೌಲರ್
ಹಾರ್ದಿಕ್ ಪಾಂಡ್ಯ ಮುಂಬರುವ ಕ್ರಿಕೆಟ್ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಅಲ್ಲದೇ ಹಾರ್ದಿಕ್ IPL 2024 ರಲ್ಲಿ ಆಡುವುದು ಅನುಮಾನವಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತವರು ನೆಲದಲ್ಲಿ ಅಫ್ಘಾನಿಸ್ತಾನ ವಿರುದ್ಧದ T20I ಸರಣಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದೊಮ್ಮೆ ಹಾರ್ದಿಕ್ ಚೇತರಿಸಿಕೊಳ್ಳದಿದ್ದರೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : 2 ಬಾರಿ ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್, ಕೊನೆಗೂ ಆರ್‌ಸಿಬಿ ಸೇರಿದ ಗ್ರೌಂಡ್ಸ್‌ಮನ್ ಮಗ ಸಿಕ್ಸರ್ ಎಕ್ಸ್‌ಫರ್ಟ್ ಸೌರವ್ ಚೌಹಾಣ್
ಈ ಬೆಳವಣಿಗೆ ನಿಜವೇ ಆಗಿದ್ದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ದೊಡ್ಡ ಹೊಡೆತ ನೀಡಲಿದೆ. ಮಾತ್ರವಲ್ಲ ಭಾರತ ತಂಡಕ್ಕೂ ಕೂಡ ನಷ್ಟವಾಗಲಿದೆ. ಕಳೆದ ಎರಡು ಋತುವಿನಲ್ಲಿಯೂ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ನಾಯಕನಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಒಂದು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ರೆ, ಈ ಬಾರಿ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಗೆಲ್ಲಿಸಿಕೊಟ್ಟಿದ್ದರು.

ಆದರೂ ಕೂಡ ಗುಜರಾತ್ ಟೈಟಾನ್ಸ್ ತಂಡ ಹಾರ್ದಿಕ್ ಪಾಂಡ್ಯವನ್ನು ಮುಂಬೈ ತಂಡಕ್ಕೆ ಮಾರಾಟ ಮಾಡಿತ್ತು. ಇದರ ಬೆನ್ನಲ್ಲೇ ಐದು ಬಾರಿ ಐಪಿಎಲ್ ಟ್ರೋಪಿಯನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾ ಅವರಿಗೆ ಮುಂಬೈ ಇಂಡಿಯನ್ಸ್ ತಂಡ ಕೋಕ್ ನೀಡಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ಳದೇ ಇರೋದು ಮುಂಬೈ ತಂಡದ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ : IPL 2024 ಹರಾಜು : ರೋಹಿತ್ ಶರ್ಮಾ ಖರೀದಿಗೆ ಮುಂಬೈ ಇಂಡಿಯನ್ಸ್ ಸಂಪರ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್
ಭಾರತ ಕ್ರಿಕೆಟ್ ತಂಡ ಇದೇ ಜನವರಿ 11 ರಿಂದ 17 ರ ವರೆಗೆ ಅಫ್ಘಾನಿಸ್ತಾನ ತಂಡದ ವಿರುದ್ದ ಮೂರು ಪಂದ್ಯಗಳ T20I ಸರಣಿಯನ್ನು ಆಡಲಿದೆ. ಮುಂಬರುವ ಜೂನ್-ಜುಲೈನಲ್ಲಿ ಟಿ20 ವಿಶ್ವಕಪ್ 2024ಕ್ಕೆ ಮೊದಲು ನಡೆಯುತ್ತಿರುವ ಅಂತಿಮ ಪಂದ್ಯ ಇದಾಗಿದೆ. ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಲ್ಲಿ ಹೊರಗುಳಿದ ಬೆನ್ನಲ್ಲೇ ಸೂರ್ಯ ಕುಮಾರ್ ಯಾದವ್ ಭಾರತ ಕ್ರಿಕೆಟ್ ತಂಡವನ್ನು ಎರಡು ಸರಣಿಗಳಲ್ಲಿ ಮುನ್ನೆಡೆಸಿದ್ದರು.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರು:
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ (ಸಿ), ಎನ್. ತಿಲಕ್ ವರ್ಮಾ, ಜಸ್ಪ್ರೀತ್ ಬುಮ್ರಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, , ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಕುಮಾರ್ ಕಾರ್ತಿಕೇಯ, ಮಡ್ಕವ್ಲಾಪಿ, ಆರಿಯೊ ಶೆಫರ್ಡ್,
IPL 2024 ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರು :
ಜೆರಾಲ್ಡ್ ಕೊಯೆಟ್ಜಿ (5 ಕೋಟಿ ರೂ.), ದಿಲ್ಶನ್ ಮಧುಶಂಕ (4.60 ಕೋಟಿ ರೂ.), ಶ್ರೇಯಸ್ ಗೋಪಾಲ್ (20 ಲಕ್ಷ ರೂ.), ನುವಾನ್ ತುಷಾರ (ರೂ. 4.80 ಕೋಟಿ), ನಮನ್ ಧೀರ್ (20 ಲಕ್ಷ ರೂ.), ಅನ್ಶುಲ್ ಕಾಂಬೋಜ್ (ರೂ. 20 ಲಕ್ಷ), ಮೊಹಮ್ಮದ್ ನಬಿ (1.5 ಕೋಟಿ ರೂ.), ಶಿವಾಲಿಕ್ ಶರ್ಮಾ (20 ಲಕ್ಷ ರೂ.).
IPL 2024 Hardik Pandya out Rohit Sharma to captain Mumbai Indians