IPL 2024 ಹರಾಜು : ರೋಹಿತ್‌ ಶರ್ಮಾ ಖರೀದಿಗೆ ಮುಂಬೈ ಇಂಡಿಯನ್ಸ್‌ ಸಂಪರ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್‌

IPL 2024 Auction : ಮುಂಬೈ ಇಂಡಿಯನ್ಸ್‌ ತಂಡದ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಇದರ ನಡುವಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ರೋಹಿತ್‌ ಶರ್ಮಾ (Rohit Sharma)  ಅವರನ್ನು ಖರೀದಿಸಲು ಮುಂದಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡವನ್ನು ಸಂಪರ್ಕಿಸಿದೆ

ಇಂಡಿಯನ್ಸ್‌ ಪ್ರೀಮಿಯರ್‌ ಲೀಗ್‌ (IPL 2024 Auction) ಮುಂಬರುವ ಆವೃತ್ತಿಗಾಗಿ ಮುಂಬೈ ಇಂಡಿಯನ್ಸ್‌ ತಂಡದ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಇದರ ನಡುವಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ರೋಹಿತ್‌ ಶರ್ಮಾ (Rohit Sharma)  ಅವರನ್ನು ಖರೀದಿಸಲು ಮುಂದಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡವನ್ನು ಸಂಪರ್ಕಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕ್ರಿಕ್‌ ಟ್ರ್ಯಾಕರ್‌ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕತ್ವವಹಿಸಿಕೊಳ್ಳಲು ಹಿರಿಯ ಆಟಗಾರನ ಅವಶ್ಯಕತೆಯಿದೆ. ಇದೇ ಕಾರಣಕ್ಕೆ ಡಿಸಿ ರೋಹಿತ್‌ ಶರ್ಮಾ ಅವರನ್ನು ಸಂಪರ್ಕ ಮಾಡಿತ್ತು. ಆದರೆ ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್‌ ಶರ್ಮಾ ಅವರನ್ನು ಬಿಟ್ಟು ಕೊಡಲು ಒಪ್ಪದ ಹಿನ್ನೆಲೆಯಲ್ಲಿ ರಿಷಬ್‌ ಪಂತ್‌ ಡೆಲ್ಲಿ ಕ್ಯಾಲಿಟಲ್ಸ್‌ ತಂಡವನ್ನು ಮುನ್ನೆಡೆಸುವ ಸಾಧ್ಯತೆಯಿದೆ.

IPL 2024 Auction Delhi Capitals approached by Mumbai Indians for Rohit Sharma
Image Credit to Original Source

ಹಾರ್ದಿಕ್‌ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಸಲುವಾಗಿ ಕ್ಯಾಮರೂನ್‌ ಗ್ರೀನ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮಾರಾಟ ಮಾಡಿತ್ತು. ಗುಜರಾತ್‌ ಟೈಟಾನ್ಸ್‌ ತಂಡದ ನಾಯಕರಾಗಿದ್ದ ಹಾರ್ದಿಕ್‌ ಪಾಂಡ್ಯ ಅವರನ್ನು ₹17.50 ಕೋಟಿ ರೂಪಾಯಿ ಮರಳಿ ಕರೆತಂದಿತ್ತು. ಈ ಖರೀದಿಯ ಬೆನ್ನಲ್ಲೇ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆಗಳು ಕೇಳಿ ಬಂದಿದ್ದವು.

ಇದನ್ನೂ ಓದಿ : ಸ್ಟಾಪ್-ಕ್ಲಾಕ್ ರೂಲ್ಸ್‌ ಜಾರಿಗೆ ತಂದ ಐಸಿಸಿ, ಪ್ರತೀ ಓವರ್‌ ಆರಂಭಕ್ಕೆ 60 ಸೆಕೆಂಡ್‌ : ಏನಿದು ಸ್ಟಾಪ್-ಕ್ಲಾಕ್ ನಿಯಮ ?

ಟೀಂ ಇಂಡಿಯಾದ ನಾಯಕರಾಗಿರುವ ರೋಹಿತ್‌ ಶರ್ಮಾ ಕಳೆದ ಕೆಲವು ವರ್ಷಗಳಿಂದಲೂ ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿದ್ದಾರೆ. 2013, 2015, 2017, 2019 ಮತ್ತು 2020 ರಲ್ಲಿ ರೋಹಿತ್‌ ಶರ್ಮಾ ನೇತೃತ್ವದಲ್ಲಿಯೇ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿತ್ತು. ಇದಕ್ಕೆ ರೋಹಿತ್‌ ಶರ್ಮಾ ಅವರ ಕೊಡುಗೆ ಅಪಾರವಾದುದು.

2008ರಲ್ಲಿ ಡೆಕ್ಕನ್ ಚಾರ್ಜರ್ಸ್‌ ತಂಡದ ಮೂಲಕ ರೋಹಿತ್‌ ಶರ್ಮಾ ಕ್ರಿಕೆಟ್‌ ವೃತ್ತಿ ಜೀವನವನ್ನು ಆರಂಭಿಸಿದ್ದರು. ರೋಹಿತ್‌ ಶರ್ಮ 2009 ಡೆಕ್ಕನ್‌ ಚಾರ್ಜಸ್‌ ಐಪಿಎಲ್‌ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಋತುವಿನಲ್ಲಿ ರೋಹಿತ್‌ ಶರ್ಮಾ ಅವರು 13 ಪಂದ್ಯಗಳಲ್ಲಿ 404 ರನ್ ಗಳಿಸಿದ್ದರು. ಅಲ್ಲದೇ 2009 ರಲ್ಲಿ 16 ಪಂದ್ಯಗಳಲ್ಲಿ 362 ರನ್ ಮತ್ತು 2010 ರಲ್ಲಿ 16 ಪಂದ್ಯಗಳಲ್ಲಿ 404 ರನ್ ಬಾರಿಸಿದ್ದರು.

ಇದನ್ನೂ ಓದಿ : IPL 2024 : ಐಪಿಎಲ್ 2024 ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್ ಗಾಯಕ್ವಾಡ್ ನಾಯಕ

2011 ರಲ್ಲಿ ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಂಡಿದ್ದರು. 2013 ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು, 2023 ರವರೆಗೆ ಒಟ್ಟು ಐದು ಬಾರಿ ಐಪಿಎಲ್‌ ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್‌ನ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಅದ್ರಲ್ಲೂ ಐಪಿಎಲ್‌ ವೃತ್ತಿ ಜೀವನದಲ್ಲಿ ರೋಹಿತ್‌ ಶರ್ಮಾ ಒಟ್ಟು 243 ಪಂದ್ಯಗಳಲ್ಲಿ ಒಟ್ಟು 6,211 ರನ್ ಗಳಿಸಿದ್ದಾರೆ.

IPL 2024 Auction Delhi Capitals approached by Mumbai Indians for Rohit Sharma
Image Credit to Original Source

ರೋಹಿತ್‌ ಶರ್ಮಾ ಅತ್ಯಧಿಕ ಅಜೇಯ 109 ರನ್‌ ಬಾರಿಸಿದ್ದಾರೆ. ಅಲ್ಲದೇ 2009ರಲ್ಲಿ ಬೌಲಿಂಗ್‌ನಲ್ಲಿ 4/6 ರ ಅತ್ಯುತ್ತಮ ಬೌಲಿಂಗ್ ದಾಖಲೆಯ ಜೊತೆಗೆ ಬರೋಬ್ಬರಿ 15ವಿಕೆಟ್‌ ಪಡೆದುಕೊಂಡಿದ್ದಾರೆ. ಇದೀಗ ರೋಹಿತ್‌ ಶರ್ಮಾ ಅವರನ್ನು ಕೈಬಿಟ್ಟು ಹಾರ್ದಿಕ್‌ ಪಾಂಡ್ಯಗೆ ಮುಂಬೈ ಇಂಡಿಯನ್ಸ ತಂಡ ನಾಯಕತ್ವ ನೀಡುತ್ತಿದ್ದಂತೆಯೇ ಎಕ್ಸ್‌ನಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ತಂಡವನ್ನು ತೊರೆದಿದ್ದಾರೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನಾಯಕ : 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್

IPL 2024 Auction Delhi Capitals approached by Mumbai Indians for Rohit Sharma

 

Comments are closed.