IPL 2024 LSG Coach : ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೋಚ್ ಆ್ಯಂಡಿ ಫ್ಲವರ್’ಗೆ ಗೇಟ್ ಪಾಸ್ ‌

ಬೆಂಗಳೂರು: IPL 2024 LSG Coach : ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ( Lucknow Super Giants) ತಂಡದ ಹೆಡ್ ಕೋಚ್ ಸ್ಥಾನದಿಂದ ಆ್ಯಂಡಿ ಫ್ಲವರ್’ಗೆ (Andy Flower) ಗೇಟ್ ಪಾಸ್ ನೀಡಲಾಗಿದೆ. ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಓಪನರ್ ಹಾಗೂ ಆಸೀಸ್ ತಂಡದ ಮಾಜಿ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೂತನ ಕೋಚ್ ಆಗುವ ಸಾಧ್ಯತೆಯಿದೆ. ಜಸ್ಟಿನ್ ಲ್ಯಾಂಗರ್ (Justin Langer) ಅವರೊಂದಿಗೆ ಲಕ್ನೋ ಫ್ರಾಂಚೈಸಿ ಮಾತುಕತೆ ನಡೆಸುತ್ತಿದೆ ಎನ್ನಲಾಗ್ತಿದೆ.

ಇಂಗ್ಲೆಂಡ್ ತಂಡದ ಮಾಜಿ ಕೋಚ್ ಆಗಿರುವ ಜಿಂಬಾಬ್ವೆಯ ಕ್ರಿಕೆಟ್ ದಿಗ್ಗಜ ಆ್ಯಂಡಿ ಫ್ಲವರ್ 2022ರಲ್ಲಿ 2 ವರ್ಷಗಳ ಅವಧಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಆ್ಯಂಡಿ ಫ್ಲವರ್ ಅವರ ಒಪ್ಪಂದ 2023ರ ಟೂರ್ನಿಯೊಂದಿಗೆ ಮುಗಿದಿದ್ದು, ಲಕ್ನೋ ಫ್ರಾಂಚೈಸಿಗೆ ಮತ್ತೆ ಫ್ಲವರ್ ಅವರನ್ನೇ ಕೋಚ್ ಮುಂದುವರಿಸುವ ಇಚ್ಛೆಯಿಲ್ಲ.

ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಸದ್ಯ ಇಂಗ್ಲೆಂಡ್’ನಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ನೋ ತಂಡದ ಹೆಡ್ ಕೋಚ್ ಸ್ಥಾನಕ್ಕೆ ಹೊಸಬರು ಬರುವುದು ಖಚಿತವಾಗಿದ್ದು, ತಂಡದ ಮಾರ್ಗದರ್ಶಕರಾಗಿ ಗೌತಮ್ ಗಂಭೀರ್ ಮತ್ತು ಸಹಾಯಕ ಕೋಚ್ ಆಗಿ ದೆಹಲಿಯ ಮಾಜಿ ಕ್ರಿಕೆಟಿಗ ವಿಜಯ್ ದಹಿಯಾ ಮುಂದುವರಿಯಲಿದ್ದಾರೆ. ಬೌಲಿಂಗ್ ಕೋಚ್ ಹುದ್ದೆಯಲ್ಲಿ ದಕ್ಷಿಣ ಆಫ್ರಿಕಾದ ಮೊರ್ನೆ ಮಾರ್ಕೆಲ್, ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿ ಪ್ರವೀಣ್ ತಾಂಬೆ ಮುಂದುವರಿಯಲಿದ್ದಾರೆ.

2022ರಲ್ಲಿ ಐಪಿಎಲ್’ಗೆ ಕಾಲಿಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದಲ್ಲಿ ಆಡಿದ ಮೊದಲ ಟೂರ್ನಿಯಲ್ಲೇ ಪ್ಲೇ ಆಫ್’ಗೆ ಲಗ್ಗೆಯಿಟ್ಟಿತ್ತು. ಈ ಬಾರಿಯ ಐಪಿಎಲ್’ನಲ್ಲಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

ಇದನ್ನೂ ಓದಿ : Anil Kumble : ನಾಗರಹೊಳೆ ನ್ಯಾಷನಲ್ ಪಾರ್ಕ್’ನಲ್ಲಿ ಪತ್ನಿ-ಪುತ್ರನ ಜೊತೆ ಜಂಬೋ ಸಫಾರಿ

ಇದನ್ನೂ ಓದಿ : Duleep Trophy 2023 : ದುಲೀಪ್ ಟ್ರೋಫಿಯಲ್ಲಿ ಕನ್ನಡಿಗರ ಪರಾಕ್ರಮ, ಫೈನಲ್’ಗೆ ಲಗ್ಗೆ ಇಟ್ಟ ದಕ್ಷಿಣ ವಲಯ

Comments are closed.