State Anganwadi Employees Association : ಬ್ರಹ್ಮಾವರ : ವಿವಿಧ ಬೇಡಿಕೆ ನಿಮಿತ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಂದ ಪ್ರತಿಭಟನೆ

ಬ್ರಹ್ಮಾವರ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು (State Anganwadi Employees Association) ಬ್ರಹ್ಮಾವರ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಕೇಂದ್ರ ಸರಕಾರದ ಅನೇಕ ಧೋರಣೆಯನ್ನು ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗೆ ಬೆಂಬಲಿಸಿ ಬ್ರಹ್ಮಾವರ ತಾಲೂಕಿನಲ್ಲಿ ಸೋಮವಾರ ಮಹಿಳಾ ಮತ್ತುಅಭಿವೃದ್ಧಿ ಇಲಾಖೆ ಬ್ರಹ್ಮಾವರ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಪ್ರಭಾರ ಯೋಜನಾಧಿಕಾರಿ ಭಾಗೀರಥಿ ಆಚಾರ್ಯರಿಗೆ ಬೇಡಿಕೆಯ ಮನವಿಯನ್ನು ನೀಡಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ ಅಂಗನವಾಡಿ ಶಿಕ್ಷಕಿಯರಿಗೆ ಮಕ್ಕಳ ಪಾಲನೆ ಪೋಷಣೆ ಹೊರತಾಗಿ ಸರಕಾರದ ಎಲ್ಲಾ ಯೋಜನೆಗಳ ಸಮೀಕ್ಷೆಯನ್ನು ಸರಕಾರ ನೀಡಿದ ಹಳೆ ಮೊಬೈಲ್ ಮೂಲಕ ತಳ ಮಟ್ಟದ ಅನೇಕ ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಸರಕಾರ ನಮಗೆ ಕನಿಷ್ಟ ವೇತನ ನೀಡಿ ನಮಗೆ ಜೀವನ ಭದ್ರತೆ ನೀಡಬೇಕು ಎಂದರು.

ಇದನ್ನೂ ಓದಿ : Udupi News : ನಾಗರೀಕ ಜನಸ್ನೇಹಿ ಯೋಜನೆ : ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣಪತ್ರ : ಜಿಲ್ಲಾಧಿಕಾರಿ ಕೂರ್ಮರಾವ್

ಇದನ್ನೂ ಓದಿ : Udupi power cut : ಉಡುಪಿ : ಜುಲೈ 11, 13 ರಂದು ವಿದ್ಯುತ್‌ ವ್ಯತ್ಯಯ : ಎಲ್ಲೆಲ್ಲಿ ವಿದ್ಯುತ್‌ ಕಡಿತ, ಇಲ್ಲಿದೆ ಮಾಹಿತಿ

ಸಿಐಟಿಯು ಮುಖಂಡ ಶಶಿಧರ ಗೊಲ್ಲ, ಅಂಗನವಾಡಿ ಸಂಘಟನೆಯ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಕಾರ್ಯದರ್ಶಿ ಸರೋಜ , ಖಚಾಂಚಿ ಸರೋಜಿನಿ ಶೆಟ್ಟಿ ಇನ್ನಿತರ ಪದಾಧಿಕಾರಿಗಳು ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಹಾಜರಿದ್ದರು.

State Anganwadi Employees Association: Protest against minimum wages for Anganwadi workers and helpers

Comments are closed.