IPL 2024 MS Dhoni retired : ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ದಿಗ್ಗಜ ನಾಯಕ, ಟೀಮ್ ಇಂಡಿಯಾದ ಲೆಜೆಂಡ್ರಿ ಕ್ಯಾಪ್ಟನ್ ಎಂ.ಎಸ್ ಧೋನಿ (MS Dhoni), ಐಪಿಎಲ್’ನಿಂದ ನಿವೃತ್ತಿಯಾಗಲಿದ್ದಾರಾ? ಚೆಪಾಕ್ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ (CSK vs RR) ವಿರುದ್ಧ ನಡೆಯುತ್ತಿರುವ ಪಂದ್ಯವೇ ಚೆನ್ನೈನಲ್ಲಿ ಧೋನಿ ಅವರಿಗೆ ಕೊನೆಯ ಪಂದ್ಯವಾಗಲಿದೆಯೇ? ಇಂಥದ್ದೊಂದು ಪ್ರಶ್ನೆ ಏಳಲು ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಮಾಡಿರುವ ಅದೊಂದು ಟ್ವೀಟ್.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ 13ನೇ ಲೀಗ್ ಪಂದ್ಯವಾಡುತ್ತಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್, ಚೆನ್ನೈ ಬೌಲರ್’ಗಳ ಸಂಘಟಿತ ದಾಳಿಯ ಮುಂದೆ ರನ್ ಗಳಿಸಲು ಪರದಾಡಿ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಶಕ್ತವಾಗಿದೆ. ಸುಲಭ ಗುರಿ ಪಡೆದಿರುವ ಚೆನ್ನೈ ಈ ಪಂದ್ಯವನ್ನು ಗೆದ್ದರೆ, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಭದ್ರವಾಗಲಿದೆ.
ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್ ತೊರೆಯಲು ಮುಂದಾದ ಕೆಎಲ್ ರಾಹುಲ್, ಮುಂದಿನ ಪಂದ್ಯಗಳಿಗೆ LSGಗೆ ಹೊಸ ನಾಯಕ
ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಡಿರುವ ಟ್ವೀಟ್ ಕುತೂಹಲಕ್ಕೆ ಕಾರಣವಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಆರಂಭಕ್ಕೆ ಒಂದು ಗಂಟೆ ಮೊದಲೇ ಈ ಟ್ವೀಟ್ ಮಾಡಲಾಗಿದ್ದು, ಇದು ಧೋನಿಯವರ ನಿವೃತ್ತಿಯ ಸುಳಿವು ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಆ ಟ್ವೀಟ್’ನಲ್ಲಿರೋದೇನು ಗೊತ್ತಾ..?

“ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ನಂತರ ಸ್ವಲ್ಪ ಹೊತ್ತು ಕ್ರೀಡಾಂಗಣದಲ್ಲೇ ಇರುವಂತೆ ಎಲ್ಲಾ ‘ಸೂಪರ್ ಫ್ಯಾನ್ಸ್’ಗೆ ಮನವಿ ಮಾಡುತ್ತೇವೆ” ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಟ್ವೀಟ್ ಮಾಡಿದೆ.
🚨🦁 Requesting the Superfans to Stay back after the game! 🦁🚨
Something special coming your way! 🙌🥳#CSKvRR #YellorukkumThanks 🦁💛 pic.twitter.com/an16toRGvp
— Chennai Super Kings (@ChennaiIPL) May 12, 2024
ಎಂ.ಎಸ್ ಧೋನಿ ಅವರ ಪಾಲಿಗೆ ಇದೇ ಕೊನೆಯ ಐಪಿಎಲ್ ಎನ್ನುವುದಾದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವೇ ಚೆನ್ನೈನಲ್ಲಿ ಅವರಿಗೆ ಕಟ್ಟ ಕಡೆಯ ಪಂದ್ಯ. ಹೀಗಾಗಿ ಧೋನಿ ಅವರಿಗೆ ಕೃತಜ್ಞತೆ ಸಲ್ಲಿಸಲು ಅಭಿಮಾನಿಗಳು ಪಂದ್ಯದ ನಂತರ ಕ್ರೀಡಾಂಗಣದಲ್ಲೇ ಉಳಿಯುವಂತೆ ಚೆನ್ನೈ ಫ್ರಾಂಚೈಸಿ ಟ್ವೀಟ್ ಮೂಲಕ ಮನವಿ ಮಾಡಿದೆಯೇ? ಈ ಪ್ರಶ್ನೆಗೆ ಇನ್ನು ಕೆಲವೇ ನಿಮಿಷಗಳಲ್ಲಿ ಉತ್ತರ ಸಿಗಲಿದೆ. ಅಭಿಮಾನಿಗಳಂತೂ ಧೋನಿ ಅವರನ್ನು ಬೆಂಬಲಿಸಿ ದೊಡ್ಡ ಪ್ರಮಾಣದಲ್ಲಿ ಚೆಪಾಕ್ ಮೈದಾನಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ : IPL 2024: ಹಳೆ ಟಿವಿಗಳಲ್ಲಿ JioCinema ಮೂಲಕ ಉಚಿತವಾಗಿ ವೀಕ್ಷಿಸಿ ಐಪಿಎಲ್
Dhoni is an emotion to all in every generation 🌟 pic.twitter.com/mIiq1i9tdH
— Johns. (@CricCrazyJohns) May 12, 2024
https://x.com/ESPNcricinfo/status/1789625997001740356
https://x.com/KrishnaVK_18/status/1789625780751995309
43 ವರ್ಷದ ಎಂ.ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಧೋನಿ ಸಾರಥ್ಯದಲ್ಲಿ ಚೆನ್ನೈ ತಂಡ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.
IPL 2024 MS Dhoni retired from Indian Premier League Chennai Super Kings hinted