IPL 2024 Robin Minz : ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆರಂಭಕ್ಕೂ ಮೊದಲೇ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಆಫಾತ ಎದುರಾಗಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ (IPL Auction 2024) ಬರೋಬ್ಬರಿ 3.6 ಕೋಟಿ ರೂ.ಗೆ ಖರೀದಿ ಮಾಡಿದ್ದ ಯುವ ಆಟಗಾರ ರಾಬಿನ್ ಮಿಂಜ್ (Robin Minz Bike Accident) ಬೈಕ್ ಅಪಘಾತಕ್ಕೆ ಒಳಗಾಗಿದ್ದಾರೆ. ತಂದೆಯ ಆರೈಕೆಯಲ್ಲಿ ಮಿಂಜ್ ಚೇತರಿಸಿಕೊಳ್ಳುತ್ತಿದ್ದಾರೆ.

ಐಪಿಎಲ್ ೨೦೨೩ರ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಚ್ಚರಿಯಾಗಿ ಯುವ ಆಟಗಾರ ರಾಬಿನ್ ಮಿಂಜ್ ನನ್ನು ಖರೀದಿ ಮಾಡಿತ್ತು. ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ 3.6 ಕೋಟಿ ರೂಪಾಯಿಗೆ ಖರೀದಿ ಮಾಡಿದ ಬೆನ್ನಲ್ಲೇ ರಾಬಿನ್ ಆಟದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಸೂಪರ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ.
ಜಾರ್ಖಂಡ್‌ನ ಸೌತ್‌ಪಾವ್ ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ರಾಬಿಮ್ ಮಿಂಚ್ ಮೊಣಕಾಲಿಗೆ ಹಾಗೂ ಮೂಗಿಗೆ ಏಟು ಆಗಿದೆ. ಸೂಪರ್ ಬೈಕ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ರಾಬಿನ್ ಮಿಂಚ್ ಸದ್ಯ ತನ್ನ ತಂದೆಯ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : IPL 2024 : ಸನ್‌ರೈಸಸ್ ಹೈದ್ರಾಬಾದ್ ತಂಡಕ್ಕೆ ಪ್ಯಾಟ್ ಕಮ್ಮಿನ್ಸ್ ನಾಯಕ
ರಾಬಿನ್ ಮಿಂಚ್ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಬಗ್ಗೆ ಯಾವುದೇ ಖಚಿತತೆ ಲಭ್ಯವಾಗಿಲ್ಲ. ಅಲ್ಲದೇ ರಾಬಿನ್ ಗಾಯದ ಬಗ್ಗೆ ಪ್ರಾಂಚೈಸಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಎಲ್ಲಾ ದಾಖಲೆಗಳನ್ನು ಮುರಿದು ಗುಜರಾತ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಆಯ್ಕೆಯಾಗಿದ್ದರು. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರ್ಪಡೆ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಶುಭಮನ್ ಗಿಲ್ ಮುನ್ನೆಡೆಸಲಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಐಪಿಎಲ್‌ಗೆ ಎಂಟ್ರಿ ಕೊಟ್ಟಿರುವ ಗುಜರಾತ್ ಟೈಟಾನ್ಸ್ ಎರಡು ಬಾರಿಯೂ ಐಪಿಎಲ್ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್ ಹೊಸ ದಾಖಲೆಯನ್ನು ಮಾಡಿದೆ. ಈ ಬಾರಿಯೂ ಜಿಟಿ ತಂಡದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹೊಂದಲಾಗಿದೆ.
ಇದನ್ನೂ ಓದಿ : IPL ನಿಂದ ದೂರವಾಗ್ತಾರಾ ಎಂಎಸ್ ಧೋನಿ ? ಆಪ್ತ ಸ್ನೇಹಿತನ ಐಪಿಎಲ್ ಭವಿಷ್ಯ ತಿಳಿಸಿದ ಪರಮ್‌ಜಿತ್ ಸಿಂಗ್
ರಾಬಿನ್ ಮಿಂಜ್ ಅವರು ಎಂಎಸ್ ಧೋನಿ ಅಭಿಮಾನಿಯ ಅಪ್ಪಟ ಅಭಿಮಾನಿಯಂತೆ. ರಾಬಿನ್ ಈಗಾಗಲೇ U19 ಮತ್ತು U25 ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಶೀಘ್ರದಲ್ಲಿಯೇ ಅವರು ಗುಜರಾತ್ ತಂಡದ ತರಬೇತಿ ಶಿಬಿರ ಸೇರಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಬಿನ್ ಮಿಂಚ್ ಅವರ ಆಟವನ್ನು ನೋಡಲು ಐಪಿಎಲ್ ಪಂದ್ಯಾವಳಿ ಆರಂಭದ ವರೆಗೂ ಕಾಯಲೇ ಬೇಕಾಗಿದೆ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್ : ದೇಶೀಯ ಕ್ರಿಕೆಟ್ ಆಡದಿದ್ರೆ ಒಪ್ಪಂದವೇ ರದ್ದು !
IPL 2024: Robin Minz, who bought Gujarat Titans for Rs 3.6 crore, had a bike accident